ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯಲ್ಲಿ ಇದೀಗ ಪುಟ್ಟಕ್ಕ ಹಾಗೂ ಮನೆಯವರು ಎಲ್ಲರೂ ಸೇರಿ ಸಹನಾ ಗಂಡ ಮುರಳಿ ಹಾಗೂ ವಿನುತಾಗೆ ಮದುವೆ ಮಾಡಲು ತಯಾರಿ ನಡೆಸಿದ್ದಾರೆ. ಮದುವೆಯ ಊಟದ ಕಾಂಟ್ರಾಕ್ಟ್ ತೆಗೆದುಕೊಂಡಿರೋದೆ ಸಹನಾ. ತನ್ನ ಗಂಡನ ಮರು ಮದುವೆ ಎಂದು ಗೊತ್ತಿಲ್ಲದೇ ಅಡುಗೆ ತಯಾರಿಗೆ ಬಂದ ಸಹನಾಗೆ ಕಾಳಿ ಎಲ್ಲಾ ವಿಷಯವನ್ನೂ ಹೇಳಿದ್ದಾನೆ.
ಈಗ ಮುರಳಿಯನ್ನು ಮದುವೆಯಾಗುತ್ತಿರುವ ವಿನುತಾಗೂ ಸಹನಾ ಬದುಕಿರುವ ವಿಷ್ಯ ತಿಳಿದು, ಸಹನಾ ಬಳಿ ಕ್ಷಮೆ ಕೇಳುತ್ತಾಳೆ. ಸಹನಾ ಅತ್ತೆ ಜೊತೆ ಸೇರಿ ಏನೆಲ್ಲಾ ಮೋಸ ಮಾಡಿರೋದನ್ನೆಲ್ಲಾ ಒಪ್ಪಿಕೊಂಡು ಕ್ಷಮೆ ಕೇಳಿ, ಮತ್ತೆ ಮುರಳಿಯನ್ನು ಮದುವೆಯಾಗೋದಕ್ಕೆ ಸಹನಾ ಮನ ಒಲಿಸೋದಕ್ಕೆ ಪ್ರಯತ್ನಿಸುತ್ತಾಳೆ.
ನೀವು ಬದುಕಿರೋ ವಿಷ್ಯ ಎಲ್ಲರಿಗೂ ಗೊತ್ತಾಗಲಿ, ನೀವು ಸತ್ತಿದ್ದೀರಿ ಅಂದ್ಕೊಂಡು ಇನ್ನೊಂದು ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಈವಾಗ್ಲೇ ಬನ್ನಿ ಎಲ್ಲರೆದುರು ಸತ್ಯ ಹೇಳಿ, ಮತ್ತೆ ಮುರುಳಿ ಜೊತೆ ಇರಿ ಎನ್ನುತ್ತಾಳೆ ವಿನುತಾ. ಆದ್ರೆ ಅದಕ್ಕೊಪ್ಪದ ಸಹನಾ ಮಾತ್ರ ಇಲ್ಲ ನಾನು ಮುರಳಿಯನ್ನು ಪ್ರೀತಿಸಿದ್ದು ನಿಜಾ, ಆದ್ರೆ ನಂಬಿಕೆ ಇಲ್ಲದೆ ನನ್ನ ವೈವಾಹಿಕ ಜೀವನ ಕೊನೆಯಾಯ್ತು, ಮತ್ತೆ ಮದುವೆ ಅನ್ನೋದು ನನ್ನ ಜೀವನದಲ್ಲಿ ಇಲ್ಲ ಎನ್ನುತ್ತಾಳೆ ಸಹನಾ.
ಗಂಡನ ಮದುವೆಗೆ ಬಂದಿರುವ ಸಹನಾ ಬದುಕಿರುವ ವಿಷ್ಯ ಮುರಳಿಗೆ ಗೊತ್ತಾಗುತ್ತಾ? ಅಡುಗೆ ಕೋಣೆಯತ್ತ ಬರುತ್ತಿರುವ ಸ್ನೇಹಾ ಮತ್ತು ಸುಮಾಗೆ ಅಕ್ಕ ಬದುಕಿರುವ ವಿಷ್ಯ ಗೊತ್ತಾಗುತ್ತಾ? ಅಥವಾ ಪುಟ್ಟಕ್ಕನಿಗೆ ತನ್ನ ಮಗಳು ಬದುಕಿರುವ ವಿಷಯ ಗೊತ್ತಾಗುತ್ತಾ? ಈ ಮದುವೆ ನಿಂತು ಹೋಗುತ್ತಾ? ಅಥವಾ ನಡೆಯುತ್ತಾ ಎನ್ನುವ ಸಾವಿರ ಪ್ರಶ್ನೆಗಳು ಈಗ ಪ್ರೇಕ್ಷಕರ ಮನಸಲ್ಲಿ ಓಡಾಡ್ತಿದೆ.
ಇದೆಲ್ಲದರ ನಡುವೆ ವೀಕ್ಷಕರು ಸಹನಾಗೆ ಮುರಳಿ ಬದಲಾಗಿ ಬೇರೆ ಜೋಡಿಯನ್ನೂ ಮಾಡಿದ್ದಾರೆ. ಸಹನಾಳನ್ನು ಮೊದಲಿನಿಂದಲೂ ಪ್ರೀತಿಸುತ್ತಿರುವ, ಮೊದಲು ಕೆಟ್ಟವನಾಗಿದ್ದು, ಈಗ ಒಳ್ಳೆಯವನಾಗಿರುವ ಕಾಳಿನೆ (Kali) ಸಹನಾಗೆ ಬೆಸ್ಟ್ ಜೋಡಿ, ಅವರಿಬ್ಬರು ಬೇಗನೆ ಮದುವೆಯಾಗಲಿ, ಪಾಪ ಕಾಳಿ ನೀನು ಒಬ್ಬನೇ ಸಹನಾ ಜೊತೆ ನಿಂತಿರೋದು ನೀನೇ ಸಹನನ ಮದುವೆ ಮಾಡ್ಕೋ ಕಾಳಿ ಎನ್ನುತ್ತಿದ್ದಾರೆ ವೀಕ್ಷಕರು.
ಸಹನಾ ನಿಂದು ವಿಶಾಲ ಹೃದಯ ಕಣಮ್ಮಿ. ಸಹನಾ ಪಾತ್ರ ಸೀರಿಯಲ್ ಅಲ್ಲಿ ಚೆನ್ನಾಗಿದೆ. ನಿನಗೆ ಕಾಳಿನೇ ಬೆಸ್ಟ್. ನೀವು ನಿಜವಾಗ್ಲೂ ಕಾಳಿನ ಮದುವೆಯಾಗಿ ಸಹನಾ, ಕಾಳಿ ನಿಮ್ಮನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ ಎಂದಿದ್ದಾರೆ. ಸಹನಾಗೆ ಕಾಳಿನೆ ಸರಿಯಾದ ಜೋಡಿ. ಕಾಳಿ ಒರಟ ಆದ್ರೂ ಅವ್ನು ಪ್ರೀತಿಲಿ ಸತ್ಯ ಇದೆ. ಕಾಳಿಗೆ ಸಹನಾ ಮೇಲೆ ಪ್ರೀತಿಯ ಜೋತೆ ನಂಬಿಕೆ ಇದೆ ಅದೆ ಮುಖ್ಯ..ಆದರೆ ಮೇಷ್ಟ್ರು ಸಹನಾ ಮೇಲೆ ನಂಬಿಕೆನೆ ಇಡಲಿಲ್ಲ ಎಂದಿದ್ದಾರೆ.
ಇನ್ನೂ ಒಂದಷ್ಟು ಜನ ಸಹನಾ ಮತ್ತು ಮ್ಯಾಕ್ಸಿ ಬೆಸ್ಟ್ ಜೋಡಿ, ಸಹನಾ ಮತ್ತು ಮಾಕ್ಸಿ ಗೆ ಲವ್ ಆಗಿದೆ ಅನ್ಸತ್ತೆ ಎಂದಿದ್ದಾರೆ. ಸಹನಾ ಬದುಕಲ್ಲಿ ಮುಂದೇನಾಗುತ್ತೆ? ಕಾಳಿಗೆ ಜೋಡಿ ಆಗ್ತಾಳ? ಅಥವಾ ಮ್ಯಾಕ್ಸಿಗೆ ಜೋಡಿಯಾಗ್ತಾಳ? ಅಥವಾ ಮುರಳಿ ಜೊತೆಗೆ ಸಹನಾ ಸಂಸಾರ ಮಾಡುವಂತಾಗುತ್ತಾ ಕಾದು ನೋಡಬೇಕು.