ಶ್ರೇಷ್ಠಾಗೆ ಗಂಡನಿಂದಲೇ ಕಪಾಳಮೋಕ್ಷ… ವಾರೆ ವಾ ತಾಂಡವ್ ಇನ್ನೆರಡು ಬಾರಿಸು ಎಂದು ವೀಕ್ಷಕರು
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತನ್ವಿಯನ್ನು ಪಿಕ್ನಿಕ್ ಕಳುಹಿಸಲು ಸಹಿ ಮಾಡಿದ ಶ್ರೇಷ್ಠಾಗೆ ತಾಂಡವ್ ನಿಂದ ಪವರ್ ಫುಲ್ ಕಪಾಳಮೋಕ್ಷ ಆಗಿದೆ. ಇದನ್ನು ನೋಡಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತನ್ವಿಯನ್ನು ಪಿಕ್ನಿಕ್ ಕಳುಹಿಸಲು ಸಹಿ ಮಾಡಿದ ಶ್ರೇಷ್ಠಾಗೆ ತಾಂಡವ್ ನಿಂದ ಪವರ್ ಫುಲ್ ಕಪಾಳಮೋಕ್ಷ ಆಗಿದೆ. ಇದನ್ನು ನೋಡಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ (Bhagyalakshmi serial) ಧಾರಾವಾಹಿಯಲ್ಲಿ ಶ್ರೇಷ್ಠಾ ಕೆನ್ನೆಗೆ ಭಾರಿಸುವ ಮತ್ತೊಂದು ಎಪಿಸೋಡ್ ಪ್ರಸಾರವಾಗಿದೆ. ಅಷ್ಟಕ್ಕೂ ಆಗಿದ್ದೇನು, ಮತ್ತೆ ಕೆನ್ನೆಗೆ ಹೊಡೆಸಿಕೊಳ್ಳುವಂತದ್ದು ಏನು ಮಾಡಿದ್ದಾಳೆ ಶ್ರೇಷ್ಠಾ?
ಈಗಷ್ಟೇ ಕಾಲೇಜು ಮೆಟ್ಟಿಲೇರಿರುವ ತನ್ವಿ ತನ್ನ ಫ್ರೆಂಡ್ಸ್ ಜೊತೆ ರೆಸಾರ್ಟ್ ಗೆ ಹೋಗೋದಕ್ಕೆ ಅಮ್ಮನ ಬಳಿ ಪರ್ಮಿಷನ್ ಕೇಳಿದ್ದಾರೆ, ಅಮ್ಮ ಒಪ್ಪಿಗೆ ನೀಡದೇ ಇದ್ದಾಗ ಅಪ್ಪನ ಬಳಿ ಕೇಳಿದ್ದಾರೆ. ಕೊನೆಗೆ ಅಪ್ಪನೂ ನಿರಾಕರಿಸಿದಾಗ ಆಕೆ ನೆನಪಾಗಿದ್ದು ಶ್ರೇಷ್ಠಾ ಆಂಟಿ.
ಶ್ರೇಷ್ಠಾ ಬಳಿ ಮಾತನಾಡಿ, ಆಕೆಯನ್ನು ಒಪ್ಪಿಸಿ, ಪರ್ಮಿಶನ್ ಲೆಟರ್ ಗೆ (permission letter) ಸಹಿ ಕೂಡ ಹಾಕಿಸಿ, ಮನೆಯಲ್ಲಿ ಸುಳ್ಳು ಹೇಳಿ, ಗೆಳತಿಯರ ಜೊತೆ ರೆಸಾರ್ಟ್ ಗೆ ಹೋಗಿದ್ದಾಳೆ ತನ್ವಿ. ಆದರೆ ಅಲ್ಲಿ ಪೊಲೀಸ್ ರೈಡ್ ಆಗಿ, ಗಲಾಟೆ ನಡೆದು, ಕೊನೆಗೆ ಭಾಗ್ಯಾಳೆ ಬಂದು ತನ್ವಿಯನ್ನು ಅಲ್ಲಿಂದ ಬಿಡಿಸಿಕೊಂಡು ಹೋಗುವಂತಾಯಿತು.
ವಿಷಯ ತಿಳಿದು ದೊಡ್ಡ ರಾದ್ಧಾಂತವನ್ನೇ ಮಾಡುವ ತಾಂಡವ್, ತನ್ವಿಯನ್ನು ರೆಸಾರ್ಟ್ ಗೆ ಕಳಿಸೋದಕ್ಕೆ ಭಾಗ್ಯ ಪರ್ಮಿಶನ್ ಕೊಟ್ಟಿದ್ದಾರೆ ಎಂದು ಆಕೆಯ ವಿರುದ್ಧ ತಿರುಗಿ ಬೀಳುತ್ತಾನೆ. ಕೊನೆಗೆ ತನ್ವಿಗೆ ಪರ್ಮಿಶನ್ ಕೊಟ್ಟದ್ದು, ಶ್ರೇಷ್ಠಾ ಅನ್ನೋದು ಗೊತ್ತಾಗಿ, ಭಾಗ್ಯ ಹಾಗೂ ತಾಂಡವ್ ಇಬ್ಬರೂ ಕೂಡ ಕಿಡಿ ಕಾರುತ್ತಾರೆ.
ನನ್ನ ಮಗಳ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳೋಕೆ ಯಾರು ನೀನು ಎಂದು ಭಾಗ್ಯ ಕೇಳಿದ್ರೆ, ಶ್ರೇಷ್ಠಾ ಸೊಕ್ಕಿನಿಂದ ನಿಂದು, ತಾಂಡವ್ ದು ಓಲ್ಡ್ ಸ್ಕೂಲ್ ಯೋಚನೆ, ನಿಮಗೆ ಈ ಫನ್ ಎಲ್ಲಿ ಅರ್ಥ ಆಗುತ್ತೆ, ತನ್ವಿ ಬಂದ್ಲು ನಾನು ಸಿಗ್ನೇಚರ್ ಮಾಡಿ ಕಳಿಸ್ದೇ, ಎನ್ನುತ್ತಾಳೆ, ಅದಕ್ಕೆ ಭಾಗ್ಯ ನನ್ನ ಮಗಳ ಜೀವನದಲ್ಲಿ ಏನು ಬೇಕು , ಬೇಡ ಅನ್ನೋದನ್ನು ನಾನು ಡಿಸೈಡ್ ಮಾಡ್ತೀನಿ ನೀನಲ್ಲ ಎಂದು ಖಡಕ್ ಆಗಿ ಹೇಳುತ್ತಾಳೆ.
ಇದನ್ನ ಕೇಳಿ ಮತ್ತಷ್ಟು ರೇಗಿದ ಶ್ರೇಷ್ಠಾ, ನೀವಿಬ್ರು ನಿರ್ಧಾರ ತೆಗೆದುಕೊಳ್ಳೋದ್ರಲ್ಲಿ ವಿಫಲರಾಗಿರೋದಕ್ಕೆ ಅಲ್ವಾ? ತನ್ವಿ ನನ್ನ ಹತ್ರ ಬಂದಿದ್ದು, ಇಡಿಯಟ್ಸ್ ಎನ್ನುತ್ತಾಳೆ. ಇದನ್ನ ಕೇಳಿ ಭಾಗ್ಯ ಕೋಪ ನೆತ್ತಿಗೇರಿ, ಇನ್ನೇನು ಹೊಡಿಬೇಕು ಎನ್ನುವಷ್ಟರಲ್ಲಿ ತಾಂಡವ್ ಶ್ರೇಷ್ಠಾ ಕೆನ್ನೆಗೆ ಬಾರಿಸುತ್ತಾನೆ, ಆಕೆ ಮತ್ತೆ ಅಧಿಕಪ್ರಸಂಗ ಮಾತನಾಡಿದಾಗ ಮತ್ತೊಮ್ಮೆ ಕೆನ್ನೆಗೆ ಭಾರಿಸಿದ್ದಾರೆ. ನನ್ನ ಮಕ್ಕಳ ವಿಚಾರದಲ್ಲಿ, ಅಪ್ಪ,ಅಮ್ಮನ ವಿಚಾರದಲ್ಲಿ ನೀನು ಮಧ್ಯ ಬರೋದು ಬೇಕಾಗಿಲ್ಲ ಎಂದು ವಾರ್ನ್ ಮಾಡ್ತಾನೆ ತಾಂಡವ್.
ತಾಂಡವ್ ಶ್ರೇಷ್ಠಾ ಕೆನ್ನೆಗೆ ಹೊಡೆದಿರೋದನ್ನು ನೋಡಿ ವೀಕ್ಷಕರು ಖುಷಿ ಪಟ್ಟಿದ್ದು, ಈ ಶ್ರೇಷ್ಠ ಅಷ್ಟು ಕಪಾಲಕ್ಕೆ ಹೋಡ್ಸ್ಕೊಂಡ್ ಇರೋರು history ಲೇ ಇಲ್ಲ ಅನ್ಸುತ್ತೆ ತ,ನ್ವಿ ಗುಂಡಣ್ಣ ಇಬ್ರೆ ಬಾಕಿ ಇರೋದು ಹೊಡಿಯೋಕೆ, ಇನ್ನು ಬಾರ್ಸು ತಾಂಡವ್, ಸೂಪರ್, ವಾರೆ ವಾವ್ ತಾಂಡವ್, ಇವಳಿಗೆ ಎಷ್ಟು ಕಪಾಳಕ್ಕೆ ಹೊಡಿದ್ರು ಪ್ರಯೋಜನ ಇಲ್ಲ ಥೂ!!, ವಾವ್ ತಾಂಡಾವ್ ಸೂಪರ್.. ಇದು ಬೇಕಾಗಿದ್ದು.. ಇನ್ನು ಎರಡು ಬಿಡು ಹಾಗೆ ಆ ತನ್ವಿಗೂ ಎಚ್ಚರಿಕೆ ಕೊಡು..ಎಂದಿದ್ದಾರೆ.
ಇನ್ನೂ ಕೆಲವರು, ಇಷ್ಟೊಂದು ಸಲ ಹೊಡೆಸಿಕೊಂಡಿರುವ ಶ್ರೇಷ್ಠಾಗೆ ಡಬಲ್ ಪೇಮೆಂಟ್ (Double payement)ಕೊಡಲೇಬೇಕು ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, ಜನ ಫೆಮಿನಿಸ್ಟ್ ಬಗ್ಗೆ ಮಾತನಾಡ್ತಾರೆ, ಆದ್ರೆ ಸೀರಿಯಲ್ ಗಳಲ್ಲಿ ಹೆಣ್ಣಿನ ಕೆನ್ನೆಗೆ ಗಂಡು ಹೊಡೆಯೋದನ್ನು ಯಾಕೆ ನಾರ್ಮಲೈಸ್ ಮಾಡ್ತಾರೆ ಎಂದು ಕೇಳಿದ್ದಾರೆ.