6 ವರ್ಷಗಳ ಗಲ್ಲಿ ಕಿಚನ್ ಗೆ ಗುಡ್ ಬೈ… ಭಾವುಕ ಪೋಸ್ಟ್ ಮಾಡಿದ ನಟ ಶೈನ್ ಶೆಟ್ಟಿ

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ನಟ ಶೈನ್ ಶೆಟ್ಟಿ ತಾವು 6 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಂತಹ ಗಲ್ಲಿ ಕಿಚನ್ ಗೆ ವಿದಾಯ ಹೇಳಿದ್ದಾರೆ. 
 

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ನಟ ಶೈನ್ ಶೆಟ್ಟಿ (Shine Shetty). ಸಿನಿಮಾ ನಾಯಕನಾಗಬೇಕೆಂದು ಸೀರಿಯಲ್ ಬಿಟ್ಟು ಹೊರ ಬಂದವನಿಗೆ ಸಿನಿಮಾ ನಾಯಕನಾಗುವ ಅವಕಾಶ ಸಿಗದೇ ಇದ್ದಾಗ ಕೈ ಹಿಡಿದದ್ದು ಗಲ್ಲಿ ಕಿಚನ್. 
 

ಗಲ್ಲಿ ಕಿಚನ್ (Galli Kitchen) ಒಂದು ಫುಡ್ ಟ್ರಕ್ ಆಗಿದ್ದು, ಅವಕಾಶಗಳು ಸಿಗದೆ ಕಂಗಾಲಾಗಿದ್ದ ಶೈನ್ ಕೈ ಹಿಡಿದದ್ದು ಇದೇ ಫುಡ್‌ ಟ್ರಕ್‌. ಶೈನ್ ಶೆಟ್ಟಿ ಬೆಂಗಳೂರಿನ ಬನಶಂಕರಿಯಲ್ಲಿ ಈ ಫುಡ್ ಟ್ರಕ್ ಆರಂಭಿಸಿದ್ದರು. ಬಿಗ್ ಬಾಸ್ ಗೆ ಹೋಗಿದ್ದ ಸಮಯದಲ್ಲಿ ಅವರ ತಾಯಿ ನಡೆಸಿಕೊಂಡಿದ್ದರು. 
 


ಶೈನ್ ಶೆಟ್ಟಿ ಬಿಗ್ ಬಾಸ್ ಸೀಸನ್ 7 (Bigg Boss Season 7) ವಿಜೇತರಾಗಿ ಹೊರ ಬಂದ ಬಳಿಕ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌  ಬಳಿ ಪುಡ್‌ ಟ್ರಕ್‌ ಪುನರಾರಂಭಿಸಿದ್ದರು. ಲಾಕ್ ಡೌನ್ ಕಾರಣದಿಂದ ಮುಚ್ಚಲಾಗಿದ್ದ ಫುಡ್ ಟ್ರಕ್ ಗೆ ಹೊಸ ಲುಕ್ ಹಾಗೂ ವಿಭಿನ್ನ ಆಹಾರಗಳನ್ನು ಸೇರಿಸಿ, ಮತ್ತೆ ತೆರೆದಿದ್ದರು. 
 

ಇದೀಗ ಶೈನ್ ಶೆಟ್ಟಿ ತಾವು ಹಲವು ವರ್ಷಗಳಿಂದ ಪ್ರೀತಿಯಿಂದ ನಡೆಸಿಕೊಂಡು ಬಂದಿದ್ದಂತಹ ತಮ್ಮ ಕನಸಿನ ಫುಡ್ ಟ್ರಕ್ ಗಲ್ಲಿ ಕಿಚನ್ ಗೆ ಗುಡ್ ಬೈ ಹೇಳಿದ್ದಾರೆ. ಈ ಕುರಿತು ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. 
 

ಗಲ್ಲಿ ಕಿಚನ್ ಎಂಬ ಕನಸನ್ನು ಬೆಳೆಸಿದ ಎಲ್ಲರಿಗೂ ಎಂದು ಬರೆದು ಆರಂಭಿಸಿರುವ ಶೈನ್ ಶೆಟ್ಟಿ, ಜೀವನದ ಕೆಲವೊಂದು ಪ್ರಯಾಣ, ನಮ್ಮ ಅಸ್ತಿತ್ವವನ್ನು ತೋರಿಸಿ, ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತೆ. ನನ್ನ ಲೈಫ್ ಅಲ್ಲಿ ಅದು ಗಲ್ಲಿ ಕಿಚನ್, ಜೀವನ ಸಾಗ್ಸೋಕೆ ಅಂತ ಶುರು ಮಾಡಿದ ಒಂದು ಪುಟ್ಟ ದೋಸೆ ಕ್ಯಾಂಪ್. ನೀವೆಲ್ಲಾ ಇಷ್ಟ ಪಟ್ಟು ಕೊಂಡಾಡಿ, ಎರಡೂ ಬ್ರ್ಯಾಂಚ್ ಮಟ್ಟಕ್ಕೆ ಬೆಳೆಸಿದ್ರಿ. ಆ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ. 
 

ಆದ್ರೆ ಬೇಳಿತಾ, ಬೆಳಿಸ್ತಾ ಮುಂದಕ್ಕೆ ಸಾಗೋದೆ ಜೀವನ ಅಲ್ವಾ? ಮುಂದೊಂದಿಷ್ಟು ಕೆಲಸ ಮಾಡೋದು ಇದೆ, ಅದಕ್ಕಾಗಿ ಹೊಸ ಪ್ರಯಾಣ ಶುರು ಮಾಡಬೇಕಾಗಿದೆ. ಹಾಗಾಗಿ 6 ವರ್ಷಗಳ ಗಲ್ಲಿ ಕಿಚನ್ ಗೆ ವಿದಾಯ ಹೇಳೋ ಸಮಯ. ವಿದಾಯ ಹೇಳೋದು ಇಲ್ಲಿ ಬರೆದಷ್ಟು ಸುಲಭ ಅಲ್ಲ, ನಿಮ್ಗೂ ಗೊತ್ತು. ಆದ್ರೆ ಜೀವನದಲ್ಲಿ ದಿಕ್ಕು ಮತ್ತು ಗುರಿ ಬದಲಾದಾಗ, ಅದಕ್ಕೆ ಹೊಂದಿಕೊಂಡು ಹೋಗೋದು ಅನಿವಾರ್ಯ. 
 

ಗಲ್ಲಿ ಕಿಚನನ್ನ ನನ್ನಂತೆ ಆಸಕ್ತಿ ಇರೋ ಯುವ ಪ್ರತಿಭೆಗೆ ಹಸ್ತಾಂತರ (handover)ಮಾಡಿದ್ದೀನಿ. ಈ ಕನಸಿಗೆ ಹತ್ತಿದ ಜ್ವಾಲೆ ಇನ್ನು ಮುಂದೆ ಹೊಸ ಪಾಲುದಾರನ ಕೈಯಲ್ಲಿ.. ಹೊಸ ರೀತಿಯಲ್ಲಿ ಮುಂದುವರೆಯಲಿದೆ. ಶ್ರದ್ಧೆಯಿಂದ ಜನರ ಪ್ರೀತಿನ, ಉಳಿಸ್ಕೊಂಡು, ಬೆಳೆಸ್ಕೋಂದು ಹೋಗ್ಲಿ ಅಂತ ಆಶಿಸ್ತೀನಿ. 
 

ತಿಂದುಂಡೂ ಹೊಗಳಿದ, ತಪ್ಪಿದ್ದಲ್ಲಿ ತಿದ್ದಿದ, ನನ್ನೆಲ್ಲಾ ಅಭಿಮಾನಿಗಳೇ, ಭೋಜನ ಪ್ರಿಯರೇ, ಗಲ್ಲಿ ಕಿಚನ್ ಕುಟುಂಬಸ್ಥರೇ, ಮತ್ತೊಂದು ಪ್ರಯತ್ನದೊಂದಿಗೆ ಮರಳಿ ಬರುವೆ. ಮತ್ತೊಮ್ಮೆ ನಿಮ್ಮೆಲ್ಲರ ಸಹಕಾರ ಪ್ರೀತಿ ಬೇಡುವೆ. ಪ್ರೀತಿ ಇರಲಿ, ಶೈನ್ ಶರಶ್ ಶೆಟ್ಟಿ (Shine Sharash Shetty) ಎಂದು ಶೈನ್ ಭಾವುಕ ಪೋಸ್ಟ್ ಮಾಡಿದ್ದಾರೆ. 
 

Latest Videos

click me!