ಛೂ ಮಂತರ್ ಸಿನಿಮಾ ಪ್ರಮೋಷನ್‌ಗಾಗಿ ನಟ ಶರಣ್ ಮತ್ತು ನಟಿ ಅದಿತಿ ಪ್ರಭುದೇವ ಬಿಗ್ ಬಾಸ್ ಸೀಸನ್ 11ಕ್ಕೆ ಕಾಲಿಟ್ಟಿದ್ದರು. ಈ ವೇಳೆ ಟಿಕೆಟ್ ಟು ಫಿನಾಲೆ ಕೂಡ ಅದ್ಧೂರಿಯಾಗಿ ನಡೆಯಿತ್ತು.
ಹನುಮಂತುಗೆ ಟಿಕೆಟ್ ಟು ಫಿನಾಲೆಯನ್ನು ಕೈಗೆ ಕೊಟ್ಟು ಶರಣ್ ಮನೆಯಲ್ಲಿ ಇರುವ ಸ್ಪರ್ಧಿಗಳ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ತಮ್ಮ ಮನೆಯಲ್ಲಿ ಖುಷಿಯಿಂದ ನೋಡುವ ಶೋ ಎಂದಿದ್ದಾರೆ.
'ನೀವೆಲ್ಲಾ ಈಗ ಸೆಲೆಬ್ರಿಟೀಸ್ ಆಗಿದ್ದೀರಿ. ನೀವೆಲ್ಲಾ ಈಗ ಸ್ಟಾರ್ಸ್ ಆಗಿದ್ದೀರಿ. ನೀವೆಲ್ಲಾ ಈಗ ನಮ್ಮ ಮನೆಯೊಳಗೆ ಒಬ್ಬರಾಗಿ ಇದ್ದೀರಾ' ಎಂದು ಶರಣ ಸ್ಪರ್ಧಿಗಳ ಜೊತೆ ಮಾತನಾಡುತ್ತಾರೆ.
'ನಮ್ಮ ಮನೆಯಲ್ಲಿ ನಿಮಗೆ ಯಾವ ರೇಂಜಿಗೆ ಫ್ಯಾನ್ಸ್ ಆಗಿದ್ದಾರೆ ಅಂದ್ರೆ. ಇಂದು ಟಿವಿ ಇತ್ತು ಮಕ್ಕಳು ಹಠ ಮಾಡಿ ಆ ಟಿವಿಯನ್ನು ಕೊಟ್ಟು ಈಗ ದೊಡ್ಡ ಟಿವಿ ತೊಗೊಂಡಿದ್ದೀವಿ'
'ನೀವೆಲ್ಲಾ ಈಗ ಕಾಣಿಸ್ತಿರೋ ಸೈಜ್‌ಗಿಂತ ಟಿವಿಯಲ್ಲಿ ದೊಡ್ಡದಾಗಿ ಕಾಣಿಸುತ್ತಿದ್ದೀರಿ. ನನ್ನ ಮಗಳು ಉಗ್ರಂ ಮಂಜುರವರ ಫ್ಯಾನ್ ಎಂದು ಹೇಳಲು ಹೇಳಿದ್ದಾಳೆ'
'ಇದನ್ನ ಹೇಳು ಅಂತಲೇ ಹೇಳಿ ಮಗಳು ಕಳುಹಿಸಿದ್ದಾಳೆ. ನನ್ನ ಫೇವರಿಟ್ ಈಗ ಮ್ಯಾಕ್ಸ್ ಮಂಜು ಅಂತಲೇ ಹೇಳಬೇಕು. ಅದೇ ಅವರಿಗೆ ಇಷ್ಟ ಅಂತ ಹೇಳಿದ್ದಾರೆ'
'ಒಂದು ಎಪಿಸೋಡ್ ಕೂಡ ಮನೆಯಲ್ಲಿ ಬಿಡಲ್ಲ. ಎಲ್ಲವನ್ನೂ ನೋಡ್ತಾರೆ. ಅಷ್ಟು ಪ್ರೀತಿ ನಿಮ್ಮೆಲ್ಲರ ಮೇಲೆ ನಮ್ಮ ಮನೆಯವರು ಮತ್ತು ವೀಕ್ಷಕರು ಇಟ್ಟಿದ್ದಾರೆ'
'ಇಡೀ ಕರ್ನಾಟಕದ ಜನತೆ ನಿಮ್ಮನ್ನು ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. 100 ಡೇಸ್ ಅನ್ನೋದು ಒಂದು ಸಿನಿಮಾಗೆ ಸೂಪರ್ ಡ್ಯೂಪರ್ ಹಿಟ್ ಲೆಕ್ಕ. ಬ್ಲಾಕ್ ಬಸ್ಟರ್ ಅಂದ್ರೆ 100 ಡೇಸ್'
'ಆ ನಿಟ್ಟಿನಲ್ಲಿ ನೀವಿಷ್ಟೂ ಜನ 100 ಡೇಸ್ ಇಲ್ಲಿ ಇದ್ದೀರಿ. ಸೋ ನೀವೆಲ್ಲಾ ಸೂಪರ್ ಡ್ಯೂಪರ್ ಹಿಟ್ ಬ್ಲಾಕ್ ಬಸ್ಟರ್ ಕಂಟಸ್ಟೆಂಟ್ಸ್. ಇನ್ನು ಎರಡು ವಾರ ಉಳಿದಿದೆ ನಿಮ್ಮ ಎಫರ್ಟ್ ಹಾಕಿ ನಿಮಗೆಲ್ಲರಿಗೂ ಒಳ್ಳೆಯದಾಗಲಿ' ಎಂದು ಶರಣ್ ಮಾತನಾಡಿದ್ದಾರೆ.