Bigg Boss ಮನೆಯೊಳಕ್ಕೆ ಪ್ರಿಯಾ ಸುದೀಪ್ ಎಂಟ್ರಿ​? ಕುತೂಹಲ ಕೆರಳಿಸಿದ ಕಿಚ್ಚನ ಹೇಳಿಕೆ- ಫ್ಯಾನ್ಸ್​ ಏನಂದ್ರು?

Published : Oct 21, 2025, 11:32 AM IST

ಬಿಗ್​ಬಾಸ್​ 12ರ ವೇದಿಕೆಯ ಮೇಲೆ ನಿರೂಪಕ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಕಾಣಿಸಿಕೊಂಡಿದ್ದು, ಮನೆಯೊಳಗೆ ಹೋಗಿಬರಲು ಸುದೀಪ್ ಕೇಳಿದ್ದಾರೆ.  ಇದಕ್ಕೆ ಪ್ರಿಯಾ ಸುದೀಪ್​ ಹೇಳಿದ್ದೇನು? ನಿಜಕ್ಕೂ ಅವರ ದೊಡ್ಮನೆಗೆ ಎಂಟ್ರಿ ಕೊಡ್ತಾರಾ? 

PREV
17
ಬಿಗ್​ಬಾಸ್​ ಯಶಸ್ವಿಗೆ ಕಾರಣ

ಬಿಗ್​ಬಾಸ್​ 12 (Bigg Boss 12) ಇದಾಗಲೇ ಭಾರಿ ಜನಪ್ರಿಯತೆಯೊಂದಿಗೆ ಮುನ್ನಡೆಯುತ್ತಿದೆ. ಅದಕ್ಕೆ ಕಾರಣ ಅಷ್ಟೇ ಚೆನ್ನಾಗಿ ನಿರೂಪಣೆ ಮಾಡುವ ಸುದೀಪ್​​ ಅವರೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕೆ ಕಳೆದ ವರ್ಷದ ಬಿಗ್​ಬಾಸ್​​ ಬಳಿಕ ಇದೇ ನನ್ನ ಕೊನೆಯ ಬಿಗ್​ಬಾಸ್​ ಷೋ ಎಂದು ತಮ್ಮದೇ ಆದ ಕಾರಣ ಕೊಟ್ಟು ಸಾಕಷ್ಟು ಹಲ್​ಚಲ್​ ಸೃಷ್ಟಿಸಿದವರು ಸುದೀಪ್​.

27
ದಿಢೀರ್​ ಸರ್​ಪ್ರೈಸ್​ ಕೊಟ್ಟಿದ್ದ ಕಿಚ್ಚ

ಬಿಗ್​ಬಾಸ್​​ ಒಪ್ಪಿಕೊಂಡರೆ ಏನೆಲ್ಲಾ ಕಷ್ಟ, ತಮ್ಮ ಸಿನಿಮಾ, ವೈಯಕ್ತಿಕ ಜೀವನ, ಫ್ಯಾಮಿಲಿ ಯಾವುದಕ್ಕೂ ಟೈಮ್​ ಕೊಡಲು ಆಗುವುದಿಲ್ಲ, ಆದ್ದರಿಂದ ಷೋ ಇಲ್ಲಿಗೇ ಮುಗಿಸುತ್ತಿದ್ದೇನೆ ಎಂದು ಸಕತ್​ ಸದ್ದು ಮಾಡಿದ್ದ ಸುದೀಪ್​ ಅವರು ನಾಲ್ಕು ವರ್ಷಗಳ ಕಾಂಟ್ರ್ಯಾಕ್ಟ್​ಗೆ ಸಹಿ ಹಾಕಿ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ.

37
ಪ್ರಿಯಾ ಸುದೀಪ್​ ಆಗಮನ

ಇದರ ನಡುವೆಯೇ ಈಗ ಬಿಗ್​ಬಾಸ್ ವೇದಿಕೆಯಲ್ಲಿ ಅವರ ಪತ್ನಿ ಪ್ರಿಯಾ ಸುದೀಪ್​ (Priya Sudeep) ಅವರು ಕಾಣಿಸಿಕೊಂಡಿರುವ ವಿಡಿಯೋ ಒಂದು ವೈರಲ್​ ಆಗ್ತಿದೆ. ಇದರಲ್ಲಿ ಪ್ರಿಯಾ ಅವರನ್ನು ನೋಡಿದ ಸುದೀಪ್​ ಅವರು ಯಾವಾಗ ಬಂದ್ರಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರಿಯಾ ಆಗಲೇ ಬಂದೆ. ಆದರೆ ಬಿಗ್​ಬಾಸ್​ ಮನೆಯೊಳಕ್ಕೆ ಕಳುಹಿಸುವ ಪ್ರಯತ್ನ ಮಾಡಬೇಡಿ ಎಂದಿದ್ದಾರೆ.

47
ಮನೆಯೊಳಕ್ಕೆ ಹೋಗಿ ಎಂದ ಸುದೀಪ್​

ಆಗ ಸುದೀಪ್​ ಅವರು ಇಷ್ಟು ದೂರ ಬಂದಿದ್ದೀರಂತೆ. ಒಂದು ದಿನವಾದರೂ ಒಳಗೆ ಹೋಗಿ ಬನ್ನಿ. ಅಲ್ಲಿ ನಿಮ್ಮ ಅಕ್ಕಂದಿರೆಲ್ಲಾ ಇದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ನಾನು ಒಳಗೆ ಹೋಗುವುದಿಲ್ಲ ಎಂದು ಪ್ರಿಯಾ ಹೇಳಿದ್ದಾರೆ.

57
ಕಮೆಂಟಿಗರು ಏನಂದ್ರು?

ಇದರ ವಿಡಿಯೋ ವೈರಲ್​ ಆಗ್ತಿದ್ದಂತೆಯೇ ಕೆಲವು ಕಮೆಂಟಿಗರು ಅಚ್ಚರಿಯ ಕಮೆಂಟ್ಸ್​ ಮಾಡಿದ್ದಾರೆ. ಕೆಲವರು ಒಳಗೆ ಹೋಗಿ ಅಲ್ಲಿದ್ದವರಿಗೆ ಬುದ್ಧಿ ಹೇಳಿ ಬನ್ನಿ ಅಂತಿದ್ದರೆ, ಇನ್ನು ಹಲವರು ಮೇಡಂ ಅಂಥವರಲ್ಲ ಸರ್​, ಪ್ಲೀಸ್​ ಅವರನ್ನು ಒಳಗೆ ಕಳುಹಿಸಬೇಡಿ ಎಂದಿದ್ದರೆ, ಮತ್ತೆ ಒಂದಿಷ್ಟು ಮಂದಿ ಮೇಡಂ ಅವರಿಗೆ ಗೌರವ ಇದೆ, ಅವರು ಇದಕ್ಕೆಲ್ಲಾ ಒಪ್ಪಿಕೊಳ್ಳಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವರು ಮೇಡಂ ಯಾಕೆ ಒಳಗೆ ಹೋಗುವುದಿಲ್ಲ ಎಂದು ಬಾಯ್ಬಿಟ್ಟು ಹೇಳಬೇಕಿಲ್ಲ, ಅದು understood ಎನ್ನುತ್ತಿದ್ದಾರೆ.

67
ತಮಾಷೆಯ ಕಮೆಂಟ್ಸ್​

ಕೆಲವರು ತಮಾಷೆಯನ್ನೂ ಮಾಡುತ್ತಿದ್ದಾರೆ. ಸುದೀಪ್​ ಸರ್​ಗೆ ಒಂದು ದಿನವಾದರೂ ರಿಲ್ಯಾಕ್ಸ್​ ಆಗಿ ಇರಬೇಕು, ಅದ್ಕೇ ಹೋಗಿ ಬನ್ನಿ ಅಂತಿದ್ದಾರೆ ಎಂದು ಹೇಳಿದ್ದರೆ ಅದಕ್ಕೆ ಕೆಲವರು ನಿಜ ನಿಜ ಎಂದು ಹಾಸ್ಯ ಮಾಡಿದ್ದಾರೆ. ಒಟ್ಟಿನಲ್ಲಿ ಬಿಗ್​ಬಾಸ್​​ ಹಲವರಲ್ಲಿ ಯಾವ ರೀತಿಯ ಅಭಿಪ್ರಾಯಗಳು ಇವೆ ಎನ್ನುವುದು ಈ ಕಮೆಂಟ್ಸ್​ ಮೂಲಕ ತಿಳಿದುಬರುತ್ತಿದೆ.

77
24 ವರ್ಷಗಳ ದಾಂಪತ್ಯ

ಅಂದಹಾಗೆ ಈಚೆಗೆ ಬಿಗ್​ಬಾಸ್​​, ಸುದೀಪ್​ ಮತ್ತು ಪ್ರಿಯಾ ಅವರ 24ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿತ್ತು. ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಸುದೀಪ್ ಅವರನ್ನು ಕೂರಲು ಹೇಳಿ ಪತ್ನಿ ಪ್ರಿಯಾ ಅವರನ್ನು ವೇದಿಕೆಗೆ ಕರೆದು ಬಿಗ್‌ಬಾಸ್ ಅಚ್ಚರಿ ಮೂಡಿಸಿದ್ದರು. ಬಳಿಕ ಇಬ್ಬರು ವಿವಾಹ ವಾರ್ಷಿಕೋತ್ಸವ ವಿಚಾರ ನೆನಪಿಸಿದ್ದರು. ಸುದೀಪ್ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಲು ಪರದಾಡುತ್ತಿದ್ದ ಸಮಯದಲ್ಲೇ ಇಬ್ಬರೂ ಪ್ರೀತಿಸಿ ಮದುವೆ ಆದವರು.

ಇದರ ವಿಡಿಯೋ ಅನ್ನು ಚಿಗೋರಮೇಶ್​ ಎನ್ನುವವರು ಶೇರ್​ ಮಾಡಿದ್ದು ಅದು ಈ ಕೆಳಗಿನ ಲಿಂಕ್ಸ್​ನಲ್ಲಿ ನೋಡಿ…

ವಿಡಿಯೋಗಾಗಿ ಇದರ ಮೇಲೆ ಕ್ಲಿಕ್​ ಮಾಡಿ

Read more Photos on
click me!

Recommended Stories