ಮೆಡಿಕಲ್ ಓದ್ಬೇಕಿದ್ದ ಭಾಗ್ಯಲಕ್ಷ್ಮಿ ನಟಿ ಭೂಮಿಕಾ ನಟನಾ ಜಗತ್ತಿಗೆ ಎಂಟ್ರಿ ಕೊಟ್ಟಿದ್ದು ಹೇಗೆ?

First Published Jan 5, 2023, 5:56 PM IST

ಕನ್ನಡದ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕರ್ನಾಟಕದ ಮನೆಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಈ ಕಥೆಯು ಭಾಗ್ಯ ಮತ್ತು ಲಕ್ಷ್ಮಿ ಎಂಬ ಇಬ್ಬರು ಸಹೋದರಿಯರ ಕಥೆಯನ್ನು ಮತ್ತು ಹಿರಿಯ ಸಹೋದರಿ ಭಾಗ್ಯಾ ತನ್ನ ಸಹೋದರಿಯನ್ನು ಉತ್ತಮ ಮನೆಗೆ ಮದುವೆ ಮಾಡಿಕೊಡಲು ವರ ಅನ್ವೇಷಣೆ ಮಾಡುವ ಕಥೆಯನ್ನು ಹೊಂದಿದೆ.. 

ಇಬ್ಬರು ಸಹೋದರಿಯರ ನಡುವಿನ ಸುಂದರವಾದ ಬಂಧವನ್ನು ಚಿತ್ರಿಸುವುದರ ಜೊತೆಗೆ ಹಿರಿಯ ಸಹೋದರಿಯ ಪ್ರಕ್ಷುಬ್ಧ ವೈವಾಹಿಕ ಜೀವನವನ್ನು (married life) ತೋರಿಸುವ ಭಾಗ್ಯಲಕ್ಷ್ಮಿ ಸೀರಿಯಲ್ ಶುರುವಾಗಿ ಸ್ವಲ್ಪ ಸಮಯದಲ್ಲೇ ಅಭಿಮಾನಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. 

ಭಾಗ್ಯಲಕ್ಷ್ಮಿ ಸೀರಿಯಲ್ ನ ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್ ಹಲವಾರು ವರ್ಷಗಳ ನಂತ್ರ ಮತ್ತೆ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಕೊನೆಯದಾಗಿ  10 ವರ್ಷದ ಹಿಂದೆ ‘ಸೊಸೆ ತಂದ ಸೌಭಾಗ್ಯ’ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು, ಬಳಿಕ ನಿರೂಪಕಿಯಾಗಿ ಗುರುತಿಸಿಕೊಂಡಿದ್ದರು. ಇವರ ಜೊತೆಗೆ ಈ ಭಾಗ್ಯಳ ತಂಗಿಯಾಗಿ ಮೊದಲ ಬಾರಿಗೆ ನಟನಾ ಜಗತ್ತಿಗೆ ಕಾಲಿಟ್ಟಿರುವ ತಂಗಿ ಲಕ್ಷ್ಮಿ ಹೆಸರು ಭೂಮಿಕಾ ರಮೇಶ್.

ಭೂಮಿಕಾ ಈಗಾಗ್ಲೆ ಅಕ್ಕನ ಪ್ರೀತಿಯ ಲಡ್ಡು ಅಥವಾ ಲಕ್ಷ್ಮಿ ಪಾತ್ರದ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಕಮ್ಮನಿಗಾಗಿ ಏನು ಬೇಕಾದ್ರೂ ಮಾಡೋ, ಅಕ್ಕಮ್ಮನಿಗಾಗಿಯೇ ಬಾಳುತ್ತಿರುವ ಮುದ್ದು ಹುಡುಗಿಯಾಗಿ ಭೂಮಿಕಾ ನಟಿಸುತ್ತಿದ್ದಾರೆ. ಆದ್ರೆ ಈ ಹುಡುಗಿ ನಟನಾ ಜಗತ್ತಿಗೆ ಕಾಲಿಟ್ಟಿದ್ದೇ ಅಚ್ಚರಿ ವಿಷ್ಯ. 

ಧಾರಾವಾಹಿಯಲ್ಲಿ ತಂಗಿ ಲಕ್ಷ್ಮಿ ಪಾತ್ರದಲ್ಲಿ ನಟಿಸಿರುವ ನಟಿಗೆ ಕೇವಲ 19 ವರ್ಷ ವಯಸ್ಸು ಎಂದು ನಿಮಗೆ ತಿಳಿದಿದೆಯೇ? ಅವರ ಹೆಸರು ಭೂಮಿಕಾ ರಮೇಶ್. ಇವರು ಹುಟ್ಟಿರೋದು ಅವರು 2003ರಲ್ಲಿ. ಭಾಗ್ಯಲಕ್ಷ್ಮಿ (Bhagyalakshmi kannada serial) ಮೊದಲ ಬಾರಿಗೆ ತನ್ನ ನಟನಾ ಕೌಶಲ್ಯವನ್ನು ತೋರಿಸುತ್ತಾ ಜನಕ್ಕೆ ಹತ್ತಿರವಾಗಿದ್ದಾರೆ ಲಡ್ಡು.

ಭೂಮಿಕಾಗೆ ನಟನಾ ಜಗತ್ತು ಹೊಸತು. ಆದರೆ ಭೂಮಿಕಾ ಕ್ಯಾಮೆರಾವನ್ನು ಎದುರಿಸುವುದು ಹೊಸದೇನಲ್ಲ. ಅವರು ಈ ಹಿಂದೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ ಅವರು ಒಂದು ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡಿರೋದು ವಿಶೇಷವಾಗಿದೆ.

2016ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ಸ್ (dancing star juniors) ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಆದರೆ, ಅವರು ವೈಯಕ್ತಿಕ ಕಾರಣಗಳಿಗಾಗಿ ಕಾರ್ಯಕ್ರಮದಿಂದ ಹೊರನಡೆದರು. ಅವರು ಈ ಹಿಂದೆ 2012ರಲ್ಲಿ ಜೀ ತೆಲುಗು ನೃತ್ಯ ಕಾರ್ಯಕ್ರಮದಲ್ಲಿ ಸಹ ಭಾಗವಹಿಸಿದ್ದರು.

2021 ರಲ್ಲಿ, ಅವರು ತಮ್ಮ ಮೊದಲ ಆಲ್ಬಂ ಹಾಡು ಕೂಡ ಮಾಡಿದರು. ಭೂಮಿಕಾ ಇನ್ನೂ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ತನ್ನ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಬಿಸಿಎ) ಮಾಡ್ತಿದ್ದಾರೆ. ಮೆಡಿಕಲ್ ಓದ್ಬೇಕು ಅಂತ ಬಯಸಿದ್ದ ಇವರು, ನೀಟ್ ಗೆ ತಯಾರಿ ಕೂಡ ನಡೆಸಿದ್ದರು. ಬಳಿಕ ಪೋಷಕರ ಆಸೆ ಜೊತೆಗೆ, ತಾನು ಕೂಡ ನಟಿಯಾಗಬಹುದು ಎಂಬ ಭರವಸೆಯಿಂದ ನಟನಾ ಜಗತ್ತಿಗೆ ಕಾಲಿಟ್ಟರು.

ಭೂಮಿಕಾ ಈಗ ತನ್ನ ಅಧ್ಯಯನದೊಂದಿಗೆ ರಾಜಿ ಮಾಡಿಕೊಳ್ಳಲು ಬಯಸದ ಕಾರಣ ಈಗ ತಮ್ಮ ಶೈಕ್ಷಣಿಕ ಮತ್ತು ನಟನಾ ವೃತ್ತಿಜೀವನವನ್ನು ಏಕಕಾಲದಲ್ಲಿ ತೂಗಿಸಿಕೊಂಡು ಹೋಗ್ತಿದ್ದಾರೆ. ಭೂಮಿಕಾ ತರಬೇತಿ ಪಡೆದ ಶಾಸ್ತ್ರೀಯ ನೃತ್ಯಗಾರ್ತಿಯೂ ಹೌದು ಮತ್ತು ಅನೇಕ ವರ್ಷಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. 

click me!