ಗೋವಾದಲ್ಲಿ ರೊಮ್ಯಾಂಟಿಕ್ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿದ ಕಿರುತೆರೆ ಜೋಡಿ ಪ್ರಿಯಾ- ಸಿದ್ದು

First Published | Jan 5, 2023, 5:16 PM IST

ಪ್ರಿಯಾ ಆಚಾರ್ ಮತ್ತು ಸಿದ್ಧು ಪ್ರೀ-ವೆಡ್ಡಿಂಗ್ ಶೂಟ್‌ ಫೋಟೋಗಳು ಸಖತ್ ವೈರಲ್..... 
 

ಕಿರುತೆರೆ ಕ್ಯೂಟ್ ಲವರ್ಸ್‌ ಪ್ರಿಯಾ ಆಚಾರ್ ಮತ್ತು ಸಿದ್ದು ಮೂಲಿಮನಿ ಶೀಘ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದರೆ. ಇದರ ಬೆನ್ನಲ್ಲೇ ರೊಮ್ಯಾಂಟಿಕ್ ಫೋಟೋಶೂಟ್ ಮಾಡಿಸಿದ್ದಾರೆ. 

ನವೆಂಬರ್ 20, 2022ರಲ್ಲಿ ದಾವಣಗೆರೆಯಲ್ಲಿ ಸಿದ್ಧು ಮತ್ತು ಪ್ರಿಯಾ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಹಲವು ದಿನಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ನಿಶ್ಚಿತಾರ್ಥದ ಮೂಲಕ ಅಫೀಶಿಯಲ್ ಮಾಡಿದ್ದರು. 

Tap to resize

 ಮದುವೆ ದಿನಾಂಕ ರಿವೀಲ್ ಮಾಡಿಲ್ಲ ಆದರೆ ಸೋಷಿಯಲ್ ಮೀಡಿಯಾದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಅಪ್ಲೋಡ್ ಮಾಡಿದ್ದಾರೆ. ಈ ರೊಮ್ಯಾಂಟಿಕ್ ಶೂಟ್ ಮಾಡಿರುವುದು ಗೋವಾದಲ್ಲಿ ಎನ್ನಲಾಗಿದೆ. 

ಫೋಟೋ ಶೂಟ್ ಮಾಡಿಸಲು ಎರಡು ಕಲರ್‌ ಥೀಮ್ ಆಯ್ಕೆ ಮಾಡಿಕೊಂಡಿದ್ದಾರೆ. ಒಂದರಲ್ಲಿ ಕ್ರೀಮ್ ಸೂಟ್‌ನಲ್ಲಿ ಸಿದ್ಧು ಧರಿಸಿದ್ದರೆ ಫೇರಿ ರೀತಿ ವೈಟ್‌ ಗೌನ್‌ನಲ್ಲಿ ಪ್ರಿಯಾ ಮಿಂಚಿದ್ದಾರೆ.

ಎರಡನೇ ಲುಕ್‌ಗೆ ವೈಟ್‌ ಟೀ-ಶರ್ಟ್‌ ಅಂಡ್ ಆರೇಂಜ್‌ ಚಡ್ಡಿನಲ್ಲಿ ಸಿದ್ದು ಕಾಣಿಸಿಕೊಂಡರೆ, ಆರೇಂಜ್ ಟೀಗೆ ವೈಟ್‌ ಸ್ಕರ್ಟ್‌ನಲ್ಲಿ ಪ್ರಿಯಾ ರೆಡಿಯಾಗಿದ್ದಾರೆ. 

 ಕೆಲವು ದಿನಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ನಡೆದ ಹೊಸ ವರ್ಷ ಆಚರಣೆಯಲ್ಲಿ ಸಿದ್ಧು ಮಂಡಿಯೂರಿ ಕವಿ ಹೇಳಿ ಪ್ರಪೋಸ್ ಮಾಡಿದ್ದಾರೆ. ಎಲ್ಲೆಡೆ ವಿಡಿಯೋ ವೈರಲ್ ಆಗುತ್ತಿದೆ.

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಪ್ರಿಯಾ ಮತ್ತು ಸಿದ್ದು ಮೊದಲು ಭೇಟಿ ಮಾಡಿದ್ದು. ಆರಂಭದಲ್ಲಿ ಸ್ನೇಹಿತರಾಗಿ ಆನಂತರ ಪ್ರೀತಿಸಲು ಆರಂಭಿಸಿದ್ದರು. 

Latest Videos

click me!