ಟ್ರಿಡೆಷನಲ್ ಡ್ರೆಸ್ಸಲ್ಲೂ ಕನ್ನಡತಿಯ ವರೂಧಿನಿ ಎಷ್ಚು ಚೆಂದ ಕಾಣಿಸ್ತಾರೋ ನೋಡಿ!

First Published | Jan 4, 2023, 4:57 PM IST

ಸಾರಾ ಅಣ್ಣಯ್ಯ ಅನ್ನೋದಕ್ಕಿಂತ ‘ವರೂಧಿನಿ’ ಅಂತಾನೆ ಕಿರುತೆರೆ ಮನೆಮಂದಿಗೆ ಹತ್ತಿರವಾಗಿರುವ ತನ್ನ ರೀಲ್ ಲೈಫ್ ಜೊತೆ ರಿಯಲ್ ಲೈಫಿನಲ್ಲೂ ಸಹ ಜನಕ್ಕೆ ತುಂಬಾನೆ ಇಷ್ಟವಾಗಿದ್ದಾರೆ. ಕನ್ನಡತಿಯ ನಟಿ ಸೀರೆಯಲ್ಲೂ, ಮಿನಿ ಡ್ರೆಸ್ ನಲ್ಲೂ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿದೆ ನೋಡಿ ಅವರ ಬೋಲ್ಡ್ ಫೋಟೋಗಳು. 

ಸಾರಾ ಅಣ್ಣಯ್ಯ (Sara Annaiah) ಕನ್ನಡತಿ ಸೀರಿಯಲ್‌ನ ವರೂಧಿನಿ ಅಂತಲೇ ಫೇಮಸ್. ಭುವಿಯ ಬೆಸ್ಟ್ ಫ್ರೆಂಡ್, ಹರ್ಷನನ್ನು ಹುಚ್ಚಿಯಂತೆ ಪ್ರೀತಿಸೋ, ಪ್ರೀತಿಗೋಸ್ಕರ ಏನು ಬೇಕಾದರೂ ಮಾಡೋ ಈ ಹುಡುಗಿ, ತನ್ನ ವಿಭಿನ್ನ ಪಾತ್ರದಿಂದಲೇ ಈ ನಟಿ ಜನಮನ ಸೆಳೆದಿದ್ದಾರೆ. ಸಾರಾ ಕೂಡ ವರೂಧಿನಿ ಪಾತ್ರದಂತೆ ಇಂಡಿಪೆಂಡೆಂಟ್ ಗರ್ಲ್.

ನೇರ ಮಾತು, ನೇರ ನಡೆಗಳಿಂದ ಗಮನ ಸೆಳೆಯೋ ಈ ನಟಿ ಸೋಷಿಯಲ್ ಮೀಡಿಯಾದಲ್ಲೂ (Social Media) ಸಖತ್ ಆಕ್ಟಿವ್ ಆಗಿದ್ದಾರೆ. ಕೆಲವೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸಾರಾ ಹಾಟ್ ಲುಕ್‌ನ, ಸ್ವಿಮ್ ಸೂಟ್‌ನ ಫೋಟೋ ಹಾಕೋದುಂಟು.  ಈ ನಟಿ ಸೀರೆಯಲ್ಲೂ, ಮಿನಿ ಡ್ರೆಸ್ ನಲ್ಲೂ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. 

Tap to resize

ಕನ್ನಡತಿ ಧಾರಾವಾಹಿಯ ವರೂಧಿನಿ  ಪಾತ್ರದ ಮೂಲಕ ಜನಮನ ತಲುಪಿರುವ ಈ ನಟಿ ಆಗಾಗ ವಿಭಿನ್ನ ಲುಕ್‌ನ ಫೋಟೋಗಳನ್ನು (bold photos) ಫ್ಯಾನ್ಸ್ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ. ಜೊತೆಗೆ ಹಲವಾರು ರೀಲ್ಸ್ ಮಾಡುತ್ತಾ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. 
 

ಈ ನಟಿ ಸೀರಿಯಲ್‌ನಲ್ಲಿ ತುಂಬಾ ಸಿರಿಯಸ್ ಆಗಿರೋ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಜೊತೆಗೆ ಅಲ್ಲೂ ಸಹ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ರಿಯಲ್ ನಲ್ಲಿ ಈ ನಟಿ ಮಾತಿನ ಮಲ್ಲಿಯಂತೆ. ಸೀರಿಯಲ್ ಸೆಟ್‌ನಲ್ಲಿ ಲೈಟ್ ಬಾಯ್ ಯಿಂದ ಹಿಡಿದು, ಡೈರೆಕ್ಟರ್‌ವರೆಗೆ ಎಲ್ಲರ ಜೊತೆ ಮಾತನಾಡುತ್ತಾ, ತಮಾಷೆ ಮಾಡುತ್ತಾ, ಎಂಜಾಯ್ ಮಾಡ್ತಾರಂತೆ ಈ ನಟಿ.
 

ಹೆಚ್ಚಾಗಿ ಫ್ರೆಂಡ್ಸ್ ಜೊತೆ ವಿವಿಧ ತಾಣಗಳಿಗೆ ಟ್ರಾವೆಲ್ (Travel) ಮಾಡುವ ಈ ನಟಿಗೆ ಪ್ರವಾಸ ಮಾಡೋದು ಅಂದ್ರೆ ತುಂಬಾನೆ ಇಷ್ಟವಂತೆ. ಲೇಹ್, ಲಡಾಕ್, ಊಟಿ, ವಯನಾಡ್ ಎಂದು ಸಮಯ ಸಿಕ್ಕಾಗಲೆಲ್ಲಾ ಅವರು ತಮ್ಮ ಗೆಳತಿಯರ ಜೊತೆಗೆ ಟ್ರಾವೆಲ್ ಮಾಡುತ್ತಿರುತ್ತಾರೆ. 

ಮಾಡೆಲಿಂಗ್ ಮೂಲಕ ಕರಿಯರ್ (career started with modeling)  ಆರಂಭಿಸಿದ ಸಾರಾ ಅಣ್ಣಯ್ಯ, ನಮ್ಮೂರ ಹೈಕ್ಳು ಮೂಲಕ ನಟನೆಗೆ ಕಾಲಿಟ್ಟರು. ಬಳಿಕ ತಮಿಳು ಸೀರಿಯಲ್ ಮಲರ್ ಮೂಲಕ ಅವರು ಕಿರುತೆರೆಗೆ ಕಾಲಿಟ್ಟರು. ಕನ್ನಡದಲ್ಲಿ ಇವರ ಮೊದಲ ಸೀರಿಯಲ್ ಮತ್ತು ಜನಪ್ರಿಯತೆ ತಂದುಕೊಟ್ಟದ್ದು ‘ಕನ್ನಡತಿ’ ಸೀರಿಯಲ್ ನ ವರೂಧಿನಿ ಪಾತ್ರ. ಇನ್ನೂ ಇವರು ‘ಪಬ್ ಗೋವಾ’ ವೆಬ್ ಸೀರೀಸ್ ನಲ್ಲೂ ಕೂಡ ಬೋಲ್ಡ್ ಆಗಿ ನಟಿಸಿದ್ದಾರೆ.

ಹರ್ಷ-ಭುವಿ ದಾಂಪತ್ಯಕ್ಕೆ ಕಾಲಿಡದಂತೆ ಶತಾಯ ಗತಾಯ ಯತ್ನಿಸಿದ ವರೂಧಿನಿ, ಇದೀಗ ಅವರಿಬ್ಬರನ್ನು ಹೇಗಾದರೂ ಬೇರೆ ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದಾರೆ. ಯಾರಿಗೂ ಗೊತ್ತಾಗದಂತೆ ಭುವಿಯಿಂದ ಬಂದಂತೆ ಹರ್ಷನಿಗೆ ಡೈವೋರ್ಸ್ ನೋಟಿಸ್ ಸಹ ಕಳುಹಿಸಿದ್ದಾರೆ.

ಕನ್ನಡತಿ ಸೀರಿಯಲ್ ಕೂಡ ಇದೀಗ ಅದ್ಭುತವಾಗಿ ಮೂಡಿ ಬರುತ್ತಿದೆ, ವರೂಧಿನಿ ಪಾತ್ರವೂ ತುಂಬಾನೆ ಇಂಟರೆಸ್ಟಿಂಗ್ ಆಗಿದೆ. ಇನ್ನು ಮುಂದೆ ವರೂ ಏನು ಮಾಡ್ತಾರೆ? ಹರ್ಷ -ಭುಮಿ ಬೇರೆ ಮಾಡೋವಲ್ಲಿ ಸಕ್ಸಸ್ ಆಗ್ತಾಳಾ? ಅನ್ನೋದನ್ನೆಲ್ಲಾ ನೀವು ಕಾದು ನೋಡಬೇಕು. 

Latest Videos

click me!