ಕಥೆ ಪೂರ್ತಿಗೊಳಿಸದೆ ಪ್ರಸಾರ ನಿಲ್ಲಿಸಿದ Neenadhe Naa Serial; ಆ ಪ್ರಶ್ನೆಗಳಿಗೆ ಉತ್ತರ ಎಲ್ಲಿದೆ?

Published : Jun 29, 2025, 09:14 PM ISTUpdated : Jul 11, 2025, 12:22 PM IST

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗ್ತಿದ್ದ ನೀನಾದೆ ನಾ ಧಾರಾವಾಹಿ ಅಂತ್ಯ ಆಗಿದೆ. ಇದಕ್ಕೆ ಕಾರಣ ಏನು? ಯಾಕೆ ಹೀಗಾಯ್ತು?

PREV
15

ʼನೀನಾದೆ ನಾʼ ಧಾರಾವಾಹಿಯು ಏಕಾಏಕಿ ನಿಂತಿದೆ. ಈ ಹಿಂದೆ ಈ ಧಾರಾವಾಹಿಯ ಸೀಸನ್‌ 1 ಶುರು ಆಗಿತ್ತು. ಆಮೇಲೆ ಸೀಸನ್‌ 2 ಎಂದು ವಿಕ್ರಮ್‌, ವೇದಾ ಜೊತೆಗೆ ಹೊಸ ಕಥೆ ಶುರುವಾಗಿತ್ತು. ಈಗ ಈ ಸೀಸನ್‌ ಕೂಡ ಮುಕ್ತಾಯವಾಗಿದೆ.

25

ಚಿಕ್ಕ ವಯಸ್ಸಿನಲ್ಲೇ ಬಿಟ್ಟು ಹೋದ ತಾಯಿ, ಈಗ ಮತ್ತೆ ವಿಕ್ರಮ್‌ ಮನೆಗೆ ಬಂದರೂ ಕೂಡ ಅವನು ಇನ್ನೂ ಅವಳನ್ನು ಕ್ಷಮಿಸಿಲ್ಲ. ಇನ್ನೊಂದು ಕಡೆ ಕುಡಿದು ಮತ್ತಿನಲ್ಲಿ ವೇದಾಗೆ ವಿಕ್ರಮ್ ತಾಳಿ ಕಟ್ಟಿದ್ದಾನೆ. ಅವಳು ಅವನನ್ನು ಕ್ಷಮಿಸಿದರೂ ಕೂಡ ಇನ್ನೂ ವಿಕ್ರಮ್‌ಗೆ ಐ ಲವ್‌ ಯು ಹೇಳಿಲ್ಲ, ಮನಸ್ಸಾಕ್ಷಿಯಿಂದ ಗಂಡ ಎಂದು ಒಪ್ಪಿಕೊಂಡಿಲ್ಲ.

35

ತನ್ನ ಗಂಡ ರೌಡಿಸಂ ಬಿಟ್ಟು ಒಳ್ಳೆಯ ವ್ಯಕ್ತಿಯಾಗಬೇಕು ಎಂದು ವೇದಾ ಬಯಸಿದ್ದಳು. ಸದ್ಯಕ್ಕೆ ಅವನು ರೌಡಿಸಂ ಬಿಟ್ಟಿದ್ದಾನೆ. ವಿಕ್ರಮ್‌ ತಂದೆ, ಅಣ್ಣ, ಅಜ್ಜ ಎಲ್ಲರೂ ರೌಡಿಗಳೇ. ಅವರನ್ನು ಕೂಡ ರೌಡಿಸಂನಿಂದ ಹೊರಗಡೆ ತರಬೇಕು ಅಂತ ವೇದಾ ಕನಸು ಕಂಡಿದ್ದಳು. ಅದು ಕೂಡ ನೆರವೇರಿಲ್ಲ. ಇನ್ನು ವಿಕ್ರಮ್‌ ತಂದೆಗೆ ಅವನ ತಾಯಿ ಕಂಡರೆ ಆಗೋದಿಲ್ಲ. ಇವರಿಬ್ಬರು ಒಂದಾಗಿಲ್ಲ. ವಿಕ್ರಮ್‌ ಅತ್ತಿಗೆ ಗುಲಾಬಿಗೆ ಈ ಮನೆ ಒಡೆಯುವ ಆಸೆ ಇತ್ತು. ಅದು ಕೂಡ ನೆರವೇರಿಲ್ಲ.

45

ಒಟ್ಟಿನಲ್ಲಿ ಇಷ್ಟೆಲ್ಲ ಪ್ರಶ್ನೆಗಳು ಇದ್ದು, ಇವುಗಳಿಗೆ ಉತ್ತರ ಸಿಗದೆ ಧಾರಾವಾಹಿಯನ್ನು ಅಂತ್ಯ ಮಾಡಲಾಗಿದೆ. ಟಿಆರ್‌ಪಿ ಕಡಿಮೆ ಆಗಿದ್ದಕ್ಕೋ ಅಥವಾ ಬೇರೆ ಕಾರಣಗಳಿಂದಲೋ ಏನೋ ಈ ಧಾರಾವಾಹಿಯನ್ನು ಅಂತ್ಯ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಧಾರಾವಾಹಿ ತಂಡ ಅಧಿಕೃತ ಸ್ಪಷ್ಟನೆ ನೀಡಬೇಕಿದೆ.

55

ವಿಕ್ರಮ್‌ ಪಾತ್ರದಲ್ಲಿ ದಿಲೀಪ್‌ ಶೆಟ್ಟಿ, ವೇದಾ ಪಾತ್ರದಲ್ಲಿ ಖುಷಿ ಶಿವು, ಸ್ಪಂದನಾ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದರು.

Read more Photos on
click me!

Recommended Stories