ನಟ ದರ್ಶನ್‌ ಭೇಟಿಯಾಗಿದ್ದೇಕೆ Lakshmi Nivasa Serial ನಟಿ ವಿಜಯಲಕ್ಷ್ಮೀ? ವಿಶೇಷ ಸುದ್ದಿ ಇದ್ಯಾ?

Published : Jun 29, 2025, 11:49 AM IST

ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ವಿಜಯಲಕ್ಷ್ಮೀ ಅವರು ನಟ ದರ್ಶನ್‌ ಜೊತೆಗಿನ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಇದರ ಹಿಂದಿನ ಕಾರಣ ಏನು?

PREV
16

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವಿಶ್ವನ ತಾಯಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ವಿಜಯಲಕ್ಷ್ಮೀ ಸುಬ್ರಹ್ಮಣಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ದಾರೆ. ಈಗ ಅವರು ನಟ ದರ್ಶನ್‌ ಜೊತೆ ಇರುವ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರೋದು ಸಾಕಷ್ಟು ಕುತೂಹಲ ಸೃಷ್ಟಿಸಿದೆ.

26

ವಿಜಯಲಕ್ಷ್ಮೀ ಅವರು ನಟ ದರ್ಶನ್‌ ಜೊತೆಗಿರುವ ಫೋಟೋದಲ್ಲೊಂದು ಕತೆಯಿದೆ. ಹೌದು, ನಟ ದರ್ಶನ್‌ ಅಭಿನಯದ ʼಡೆವಿಲ್ʼ‌ ಸಿನಿಮಾದಲ್ಲಿ ವಿಜಯಲಕ್ಷ್ಮೀ ಕೂಡ ನಟಿಸಿದ್ದಾರೆ ಎನ್ನಲಾಗಿದೆ. ಅಂದಹಾಗೆ ಆ ಫೋಟೋ ನೋಡಿದರೆ ಯಾವುದೋ ಕ್ಯಾರವಾನ್‌ನಲ್ಲಿ ತೆಗೆದ ಫೋಟೋ ಎಂಬಂತೆ ಕಾಣುವುದು. ಹೀಗಾಗಿ ʼಡೆವಿಲ್‌ʼ ಸಿನಿಮಾದಲ್ಲಿ ವಿಜಯಲಕ್ಷ್ಮೀ ನಟಿಸಿರುವಂತಿದೆ.

36

ವಿಜಯಲಕ್ಷ್ಮೀ ಅವರು ಬಿಎಡ್‌ ಓದಿದ್ದು, ಸೇಲಂ ಇವರ ಊರಾಗಿತ್ತು. ಅಷ್ಟೇ ಅಲ್ಲದೆ ಸುಂದರವಾಗಿ ಹಳೆಗನ್ನಡ ಮಾತನಾಡಿರುವ ವಿಜಯಲಕ್ಷ್ಮೀ ಅವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಇವರ ಮಗ ಆಸ್ಟ್ರೇಲಿಯಾದಲ್ಲಿದ್ದಾರೆ.

46

“ಸಂಬಂಧಿಕರು ದೂರ ಇದ್ದಾರೆ, ನನ್ನ, ತವರುಮನೆಯ ಸಂಬಂಧವಂತೂ ಹಾಳಾಗಿ ಹೋಗಿದೆ. ನನಗೆ ಶ್ವಾನಗಳು ಅಂದರೆ ತುಂಬ ಇಷ್ಟ. ನಾನು ವಿವಿಧ ರೀತಿಯ ಶ್ವಾನವನ್ನು ಸಾಕಿದ್ದೇನೆ” ಎಂದು ನಟಿ ವಿಜಯಲಕ್ಷ್ಮೀ ಅವರು ನಿರ್ದೇಶಕ ರಘುರಾಮ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

56

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಟಾಕಿ ಪೋರ್ಷನ್ ಕೆಲಸವು ಕಂಪ್ಲೀಟ್ ಆಗಿದೆ. ಕೆಲ ತಿಂಗಳುಗಳ ಹಿಂದೆ ಡೆವಿಲ್ ತಂಡವು ಸಿನಿಮಾ ಹೊಸ ಪೋಸ್ಟರ್​​ನ ರಿಲೀಸ್ ಮಾಡಿತ್ತು. ಆ ಪೋಸ್ಟರ್‌ನಲ್ಲಿ ದರ್ಶನ್ ಅವರು ಕನ್ವರ್​ ಲಾಲ್ ಅವತಾರ ತಾಳಿದ್ದರು. ಒಂದು ಕ್ಷಣ ಆ ಪೋಸ್ಟರ್​ ನೋಡಿದ್ರೆ ಇದು ದರ್ಶನ್ ಅವರಾ ಅಥವಾ ಅಂಬರೀಶ್‌ ಅವರಾ ಎಂಬ ಅನುಮಾನ ಶುರುವಾಗುವುದು. 

66

ಪ್ರಕಾಶ್‌ ವೀರ್‌ ಅವರು ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಜೆ ಜಯಮ್ಮ ಅವರು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ.

Read more Photos on
click me!

Recommended Stories