ಐಟಿ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ನಟನೆಗೆ ಹಾಯ್ ಹೇಳಿದ ಸೇವಂತಿಯ ಅಶ್ವಿನ್ ಅಲಿಯಾಸ್ ವಿನಯ್ ಕಶ್ಯಪ್

First Published | Jul 26, 2020, 3:39 PM IST

ಕೈ ತುಂಬಾ ಸಂಬಳ ಬರುವ ಐಟಿ ಕ್ಷೇತ್ರವನ್ನು ಬಿಟ್ಟು ಸಿನಿಮಾ ಅಥವಾ ಧಾರವಾಹಿಗಳಿಗೆ  ಕೆಲಸ ಮಾಡಿ ಯಶಸ್ಸುಗಳಿಸಿರುವ ಸಾಕಷ್ಟು ಕಲಾವಿದರ ಉದಾಹರಣೆಗಳು ನಮ್ಮ ಕಣ್ಮುಂದಿವೆ ಅಂಥದೇ ಹಾದಿಯಲ್ಲಿ ತಮ್ಮ ಇಷ್ಟದ ಕ್ಷೇತ್ರವನ್ನೇ ಆರಿಸಿಕೊಂಡು ಅದರಲ್ಲಿ ಕಷ್ಟ ಪಟ್ಟು ಸಕ್ಸಸ್ ಕಾಣುವುದಕ್ಕೆ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದಾರೆ ಈ ಉದಯೋನ್ಮುಖ ನಟ ವಿನಯ್ ಕಶ್ಯಪ್ ಸಿಂಹ . 
 

ವಿನಯ್ ಕಶ್ಯಪ್ ಸಿಂಹ ಅಭಿನಯ ತರಂಗ ಸಂಸ್ಥೆಯ 2017-18 ನೇ ಸಾಲಿನ ವಿದ್ಯಾರ್ಥಿ. ಕೋಟಿಗೊಬ್ಬಳು, ಟ್ರೈನ್ ಟು ಪಾಕಿಸ್ತಾನ್, ಈ ಕೆಳಗಿನವರು ಹೀಗೆ ಹಲವಾರು ಬೀದಿ ನಾಟಕಗಳು ಮಾಡುವ ಮೂಲಕ ರಂಗಭೂಮಿಯಲ್ಲಿ ನಟನೆಯ ತರಬೇತಿ ಪಡೆದು ಒಳ್ಳೆಯ ತಯಾರಿ ನಡೆಸಿ ಕಿರುತೆರೆಗೆ ಕಾಲಿಟ್ಟಿದ್ದಾರೆ.
undefined
2018 ರ ಸೈಮಾ ಪ್ರಶಸ್ತಿಗೆ ಆಯ್ಕೆಯಾಗಿದ್ದ ಒಂದು ಸ್ಟ್ರಾಂಗ್ ಕಾಫಿ ಕಿರುಚಿತ್ರದಲ್ಲಿನ ಅಭಿನಯಕ್ಕೆ ಉತ್ತಮ ರೀತಿಯಲ್ಲಿ ಪ್ರಶಂಸೆ ಪಡೆದುಕೊಂಡಿದ್ದಾರೆ.
undefined
Tap to resize

ಅಲ್ಲದೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಅಪ್ಪು ಅವರ ಜೊತೆ ಡ್ಯಾನ್ಸ್ ಮಾಡಿ ಗಮನ ಸೆಳೆದ ಇವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿತ್ತು.
undefined
ಬಿಡುಗಡೆಗೆ ಸಿದ್ದವಾಗಿರುವ ಮೃಗಶಿರಾ ಚಿತ್ರದ ನಿರ್ದೇಶಕ ಶ್ರೀವತ್ಸ ಅವರ ನಿರ್ದೇಶನದ ಗದಾಯುದ್ಧ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
undefined
2019 ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಅರಮನೆ ಗಿಳಿ ಧಾರಾವಾಹಿಯ ಅರುಣ್ ಪಾತ್ರಧಾರಿಯಾಗಿ ಉತ್ತಮವಾಗಿ ನಟಿಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
undefined
ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿ ಸೇವಂತಿಯಲ್ಲಿ ಅಶ್ವಿನ್ ಪಾತ್ರದ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ ಜೊತೆಗೆ ಇನ್ನಷ್ಟು ಅವಕಾಶಗಳೊಂದಿಗೆ ಬೆಳ್ಳಿತೆರೆಯಲ್ಲೂ ಮಿಂಚಲು ತುದಿಗಾಲಲ್ಲಿ ನಿಂತಿದ್ದಾರೆ.
undefined

Latest Videos

click me!