ಬಿಗ್ ಬಾಸ್ ಚೆಲುವೆ ದೀಪಿಕಾ ದಾಸ್ ಸೋಶಿಯಲ್ ಮೀಡಿಯಾ ಮೂಲಕ ಮತ್ತೆ ಹಾಜರಿ ಕೊಟ್ಟಿದ್ದಾರೆ. ಈ ಸಾರಿ ಅಭಿಮಾನಿಗಳಿಗೆ ದೀಪಿಕಾ ದರ್ಶನ ಕೊಟ್ಟಿದ್ದಾರೆ. ಬಿಗ್ ಬಾಸ್ ಮೂಲಕ ಮನೆ ಮಾತಾಗಿದ್ದ ದೀಪಿಕಾ ದಾಸ್ ಈಗೇನು ಮಾಡ್ತಿದ್ದಾರೆ? 'ನಾಗಿಣಿ' ಧಾರಾವಾಹಿ ಮಾಡಿ ಫೇಮಸ್ ಆಗಿದ್ದ ನಟಿ ದೀಪಿಕಾ ದಾಸ್. ಬಿಗ್ ಬಾಸ್ ನಲ್ಲಿ ತಮ್ಮ ಬೋಲ್ಡ್ ನಡೆ ಮೂಲಕವೇ ಮನಗೆದ್ದವರು. ಬಿಗ್ ಬಾಸ್ ಸೀಸನ್ 7 ಫೈನಲ್ ಹಂತದವರೆಗೆ ತಲುಪಿದ್ದರು. ಬಿಗ್ ಬಾಸ್ ನಂತರ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಜತೆ ಕರಾವಳಿ ತೀರದಲ್ಲಿಯೂ ಕಾಣಿಸಿಕೊಂಡಿದ್ದರು. ಈ ಮನಸೇ, ದೂದ್ ಸಾಗರ್ ಸಿನಿಮಾದಲ್ಲಿಯೂ ದೀಪಿಕಾ ಕಾಣಿಸಿಕೊಂಡಿದ್ದರು. ತೆಲುಗು ಸಿನಿಮಾದಲ್ಲಿಯೂ ದೀಪಿಕಾ ದಾಸ್ ಅಭಿನಯಿಸಿದ್ದರು. ಒಳ್ಳೆ ನೃತ್ಯಗಾರ್ತಿಯಾಗಿಯೂ ದೀಪಿಕಾ ಹೆಸರು ಮಾಡಿದ್ದಾರೆ. ಸಿನಿಮಾ, ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ದೀಪಿಕಾ ದಾಸ್ ಹೆಸರು ಮಾಡಿದ್ದು ಮಾತ್ರ ಬಿಗ್ ಬಾಸ್ ನಿಂದ. ಸೋಶಿಯಲ್ ಮೀಡಿಯಾದಲ್ಲಿ ಬಹುದಿನಗಳ ನಂತರ ಹಾಜಾರದಾದ ದೀಪಿಕಾ ದಾಸ್ bigg boss Kannada 7 deepika das bold look goes viral in social media