ಇದಪ್ಪಾ ಸಾಧನೆ ಅಂದ್ರೆ.. ಹಿಂದಿ ಸೀರಿಯಲ್‌ ಹೀರೋಯಿನ್‌ ಆದ ಉಡುಪಿ ಮೂಲದ ನಟಿ! ಯಾರದು?

Published : Sep 21, 2025, 06:39 PM IST

ಉಡುಪಿ ಮೂಲದ ನಟಿ ಈಗ ಹಿಂದಿ ಧಾರಾವಾಹಿಯಲ್ಲಿ ಹೀರೋಯಿನ್‌ ಆಗುವ ಅವಕಾಶವನ್ನು ಪಡೆದಿದ್ದಾರೆ. ಈ ಮೂಲಕ ಅವರ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೀರಿಯಲ್‌ಗಳಲ್ಲಿ ಕೂಡ ಆ ನಟಿ ನಟಿಸಿದ್ದಾರೆ, ಹಾಗಾದರೆ ಅವರು ಯಾರು?

PREV
15
ಕನ್ನಡತಿ ಯಾರು?

ಹೌದು, ಕನ್ನಡತಿ, ನಟಿ ಆಶಿಕಾ ಪಡುಕೋಣೆ ಅವರು ಈಗ ಸ್ಟಾರ್‌ ಪ್ಲಸ್‌ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ.

25
ತ್ರಿನಯನಿ ಧಾರಾವಾಹಿ ನಟಿ

ಸದ್ಯ ಜೀ ತೆಲುಗು ಧಾರಾವಾಹಿಯಲ್ಲಿ ತ್ರಿನಯನಿ ಧಾರಾವಾಹಿ ಮೂಲಕ ಅವರು ತೆಲುಗು ಕಿರುತೆರೆಯಲ್ಲಿ ಎಲ್ಲರ ಮನೆಮಾತಾಗಿದ್ದರು. ಈ ಸೀರಿಯಲ್‌ ತೆಲುಗಿನಲ್ಲಿ ನಂ 1 ಇತ್ತು.

35
ಕನ್ನಡದಲ್ಲಿ ನಟನೆ

ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯವರಾದ ಇವರು, ಸ್ಟಾರ್‌ ಸುವರ್ಣ ವಾಹಿನಿಯ ನಿಹಾರಿಕಾ ಧಾರಾವಾಹಿಯಲ್ಲಿ, ಉದಯ ಟಿವಿಯ ಬ್ರಹ್ಮಾಸ್ತ್ರ ಧಾರಾವಾಹಿಯಲ್ಲಿ ನಟಿಸಿದ್ದರು. ಆಮೇಲೆ ಸ್ಟಾರ್ ಸುವರ್ಣ ವಾಹಿನಿಯ ತ್ರಿವೇಣಿ ಸಂಗಮ ಧಾರಾವಾಹಿಯಲ್ಲಿ ಕೂಡ ನಟಿಸಿದ್ದರು

45
ತೆಲುಗು, ತಮಿಳು ಧಾರಾವಾಹಿಗಳಲ್ಲಿ ನಟನೆ

ತೆಲುಗಿನ ಸ್ಟಾರ್‌ ಮಾ ವಾಹಿನಿಯ ಕಥಾಲೋಕರಾಜಕುಮಾರಿ, ತಮಿಳು ಸನ್‌ಟಿವಿ ತಮಿಳ್‌ ಸೆಲ್ವಿ, ಜೀ ತಮಿಳು ವಾಹಿನಿಯ ಮಾರಿ ಧಾರವಾಹಿಗಳಲ್ಲಿ ನಟಿಸಿದ್ದಾರೆ.

55
ಹಿಂದಿಯಲ್ಲಿ ನಟನೆ!

ಈಗ ಅವರು Star Plus ವಾಹಿನಿಯ "ಶೆಹಜಾದಿ ಹೈ ತು ದಿಲ್ ಕಿ " ಧಾರಾವಾಹಿಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಕಥೆ ತಮಿಳಿನ #ಚೆಲ್ಲಮ್ಮ ಧಾರವಾಹಿಯ ರಿಮೇಕ್ ಆಗಿದೆ. ಇದು ಕನ್ನಡದ ಶಾರದೆ ಧಾರಾವಾಹಿ ರಿಮೇಕ್‌ ಆಗಿದೆ.

Read more Photos on
click me!

Recommended Stories