'ಸರಿಗಮಪ' ವೇದಿಕೆಯಲ್ಲಿ ಸಂಚಲನ ಸೃಷ್ಟಿಸಿದ್ದ ಗಾಯಕಿ ಸುಹಾನಾ ಸೈಯದ್, ಇದೀಗ ತಮ್ಮ ಪ್ರೀತಿಯ ವಿಷಯವನ್ನು ಬಹಿರಂಗಪಡಿಸಿದ್ದಾರೆ. ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರೊಂದಿಗೆ ತಮ್ಮ ಮುಂದಿನ ಜೀವನವನ್ನು ಕಳೆಯುವ ನಿರ್ಧಾರವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಉಪೇಂದ್ರ ಮತ್ತು ಸುದೀಪ್ ಅಭಿನಯದ ಚಿತ್ರದ ಮುಕುಂದು ಮುರಾರಿಯ ನೀನೇ ರಾಮಾ, ನೀನೇ ಅಲ್ಲಾ, ನೀನೇ ಯೇಸು ಎಂದು ಹಾಡು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ ಗಾಯಕಿ ಸುಹಾನಾ ಸೈಯದ್. ಬುರ್ಕಾ ಹಾಕಿ ಈ ಹಾಡು ಹೇಳಿದ್ದರಿಂದ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹಿನ್ನೆಲೆ ಗಾಯಕಿಯಾಗಿರುವ ಸುಹಾನಾ ಸೈಯದ್ ಇದೀಗ ತಮ್ಮ ಪ್ರೀತಿ ವಿಷಯವನ್ನು ಹಂಚಿಕೊಂಡಿದ್ದಾರೆ.
25
ನಿತಿನ್ ಶಿವಾಂಶ್ ಜೊತೆ ಪ್ರೀತಿ
ರಂಗಭೂಮಿ ಕಲಾವಿದರಾಗಿರುವ ನಿತಿನ್ ಶಿವಾಂಶ್ ಜೊತೆ ತಮ್ಮ ಮುಂದಿನ ಜೀವನವನ್ನು ಕಳೆಯುವ ನಿರ್ಧಾರವನ್ನು ಸುಹಾನಾ ಸೈಯದ್ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪ್ರೀತಿಯ ವಿಷಯವನ್ನು ಸುಹಾನಾ ಮುಕ್ತವಾಗಿ ಹಂಚಿಕೊಂಡಿದ್ದಾರೆ. ನಿತಿನ್ ಶಿವಾಂಶ್ ಅವರ ನೀನಾಸಂನಿಂದ ತರಬೇತಿ ಪಡೆದ ಕಲಾವಿದರಾಗಿದ್ದಾರೆ.
35
ನಿಮ್ಮ ಆಶೀರ್ವಾದವಿರಲಿ
ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ. ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು. ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ. ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮ ಆಶೀರ್ವಾದವಿರಲಿ ಎಂದು ಸುಹಾನಾ ಬರೆದುಕೊಂಡಿದ್ದಾರೆ.
ಸರಿಗಮಪ ಸೀಸನ್ 13ರ ಮೆಗಾ ಆಡಿಷನ್‌ನಲ್ಲಿ ಸುಹಾನಾ ಸೈಯ್ಯದ್ "ಶ್ರೀಕಾರನೇ" ಎಂಬ ಹಾಡು ಹೇಳಿದ್ದರು. ಬುರ್ಖಾ ಧರಿಸಿದ್ದ ಮುಸ್ಲಿಂ ಮಹಿಳೆ ಹಿಂದೂ ಅಥವಾ ಧಾರ್ಮಿಕ ಗೀತೆಗಳನ್ನು ಹಾಡಬಹುದಾದ ಎಂಬ ಚರ್ಚೆಗಳು ನಡೆದಿದ್ದವು. ನಂತರ "ನೀನೇ ರಾಮ, ಅಲ್ಲಾ, ಯೇಸು" ಎಂಬ ಹಾಡು ಹೇಳಿ ಸುಹಾನಾ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು.
ತಮ್ಮ ಕುರಿತ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಸುಹಾನಾ, ನಾನು ಇಲ್ಲಿ ಹಾಡಲು ಬಂದಿದ್ದೇನೆ. ನನಗೆ ಪ್ರತಿಭೆ ಇರೋದರಿಂದ ನನ್ನನ್ನು ಆಯ್ಕೆ ಮಾಡಲಾಗಿದೆ. ಹಾಡು ಹಾಡುತ್ತಾ ಸಂಗೀತ ಕಲಿಯಲು ಈ ವೇದಿಕೆ ಬಂದಿದ್ದೇನೆ ಎಂದು ಹೇಳಿದ್ದರು. ಸುಹಾನಾ ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಸುಹಾನಾ ಯಕ್ಷಗಾನ ಕಲಾವಿದೆಯೂ ಆಗಿದ್ದಾರೆ.