Srimurali Viral Video: ರೋರಿಂಗ್ ಸ್ಟಾರ್ ಶ್ರೀಮುರಳಿಯವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶ್ರೀಮುರಳಿ ಪುಟ್ಟ ಮಗುವಿನೊಂದಿಗೆ ಆಟವಾಡುತ್ತಾ, ತರಲೆ ಮಾಡುತ್ತಿರುವುದು ಕಂಡು ಬಂದಿದೆ. ಈ ಮಗು ಈಗ ಕಿರುತೆರೆಯ ಸ್ಟಾರ್. ಯಾರು ಗೊತ್ತಾ?
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪುಟಾಣಿ ಮಗುವಿನೊಂದಿಗೆ ಶ್ರೀಮುರಳಿ ತರಲೆ ಮಾಡುತ್ತಾ ಹರಟೆ ಹೊಡೆಯುತ್ತಿರುವುದು ಕಾಣಬಹುದು. ಅಷ್ಟಕ್ಕೂ ಈ ವಿಡೀಯೋದಲ್ಲಿ ಕಾಣಿಸಿಕೊಂಡಿರುವ ಆ ಪುಟ್ಟ ಮಗು ಯಾರು ಗೊತ್ತಾ?
26
ಶ್ರೀಮುರಳಿಯ ಹಳೆಯ ವಿಡಿಯೋ
ಇದು ಶ್ರೀಮುರಳಿಯವರ ಹಳೆಯ ವಿಡಿಯೋ ಆಗಿದ್ದು, ಇದರಲ್ಲಿ ಮುರಳಿಯವರು ಮಗುವಿನೊಂದಿಗೆ ಮಾತನಾಡುತ್ತಾ, ಇನ್ನೊಂದು ಚಿಪ್ಸ್ ಕೊಡು ಎಂದು ಮಗುವಿನಲ್ಲಿ ಕೇಳಿದ್ದಾರೆ, ಆದರೆ ಮಗು ಕೊಡುವುದಿಲ್ಲ ಎನ್ನುವಂತೆ ನಕ್ಕಿದೆ. ಬಳಿಕ ಮುರಳಿ ಮಗುವಿಗೆ ಬಿಸ್ಕೆಟ್ ಕೊಟ್ಟು ಏನು ನಿನ್ನ ಹೆಸರು ಎಂದು ಕೇಳಿದ್ದಕ್ಕೆ, ಮಗು ದುಷ್ಯಂತ್ ಎಂದು ಜೋರಾಗಿಯೇ ಹೇಳಿದ್ದಾನೆ.
36
ಶ್ರೀಮುರಳಿಗೆ ಚಿಪ್ಸ್ ಕೊಟ್ಟು ಫ್ರೆಂಡ್ ಶಿಪ್ ಮಾಡ್ಕೊಂಡ ದುಷ್ಯಂತ್
ಕೊನೆಗೆ ಶ್ರೀಮುರಳಿ ಮಗುವಿಗೆ ನಾನು ಬಿಸ್ಕೆಟ್ ಕೊಡ್ತೀನಿ, ನೀವು ಚಿಪ್ಸ್ ಕೊಡು, ನಾವಿಬ್ರು ಫ್ರೆಂಡ್ ತಾನೆ ಎಂದಿದ್ದಾರೆ. ಅದಕ್ಕೆ ಮಗು ಕೊನೆಗೂ ಒಪ್ಪಿ, ಮುರಳಿಗೆ ಚಿಪ್ಸ್ ತಿನ್ನಿಸಿದ್ದಾರೆ. ಮುರಳಿ ಖುಷಿಯಾಗಿ ನೀನು ನಂಗೆ ತುಂಬಾ ಇಷ್ಟವಾದೆ ಎಂದು, ತಮ್ಮ ಕೈಯನ್ನ ಮಗುವಿನ ತಲೆ ಮೇಲೆ ಇಟ್ಟು ಆಶೀರ್ವಾದ ಮಾಡಿದ್ದಾರೆ.
ಶ್ರೀಮುರಳಿ ಜೊತೆ ಹೀಗೆ ಮುದ್ದಾಗಿ ಹರಟೆ ಹೊಡೆತ್ತಿರುವ ಮಗು ಬೇರೆ ಯಾರೂ ಅಲ್ಲ, ಇವರು ಸದ್ಯ ಕಿರುತೆರೆಯ ಚೋಟಾ ಸ್ಟಾರ್. ಹೌದು ಝೀ ಕನ್ನಡ ವಾಹಿನಿಯ ಜನಪ್ರಿಯ ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಅವರ ಮುದ್ದಿನ ಮಗ ಆಕಾಶ್. ಅಂದರೆ ಆನಂದ್ ಅವರ ರಿಯಲ್ ಪುತ್ರ ದುಷ್ಯಂತ್ ಚಕ್ರವರ್ತಿ.
56
ಮದಗಜ ಸಿನಿಮಾದಲ್ಲಿ ನಟಿಸಿದ್ದ ದುಷ್ಯಂತ್
ಅಂದ ಹಾಗೆ ದುಷ್ಯಂತ್ 3-4 ವರ್ಷ ಇರುವಾಗಲೇ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಇವರು ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ಅಭಿನಯದ ‘ಮದಗಜ’ ಸಿನಿಮಾದಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದರು. ಆ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ತೆಗೆದಿರುವಂತಹ ಹಳೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
66
ಏನು ಮಾಡ್ತಿದ್ದಾರೆ ದುಷ್ಯಂತ್
ದುಷ್ಯಂತ್ ಪುನೀತ್ ರಾಜ್‌ಕುಮಾರ್ ನಟನೆಯ ‘ರಾಜಕುಮಾರ’ ಸಿನಿಮಾದಲ್ಲೂ ನಟಿಸಿದ್ದರು. ಇನ್ನು 'ನನ್ನಮ್ಮ ಸೂಪರ್‌ಸ್ಟಾರ್ ಸೀಸನ್ 3' ರಿಯಾಲಿಟಿ ಶೋನಲ್ಲಿ ದುಷ್ಯಂತ್ ರನ್ನರ್ ಅಪ್ ಆಗಿದ್ದರು. ಅಷ್ಟೇ ಅಲ್ಲದೇ ‘ನಿನಗಾಗಿ’ ಧಾರಾವಾಹಿಯಲ್ಲಿ ಕೂಡ ದುಷ್ಯಂತ್ ನಟಿಸಿದ್ದರು. ಸದ್ಯ ಅಮೃತಧಾರೆಯಲ್ಲಿ ನಟಿಸುತ್ತಿದ್ದಾರೆ ದುಷ್ಯಂತ್ ಚಕ್ರವರ್ತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.