ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಬಿಂದು ಗೌಡ (Bindu Gowda) ಕೂಡ ಒಬ್ಬರು.
ಇನ್‌ಸ್ಟಾಗ್ರಾಂ ರೀಲ್ಸ್, ಯೂಟ್ಯೂಬ್ ವಿಡಿಯೋ, ಶಾರ್ಟ್, ಬ್ರಾಂಡ್ ಪ್ರಮೋಷನ್, ಮೇಕಪ್ ಆರ್ಟಿಸ್ಟ್ ಫೋಟೋಶೂಟ್ ಮತ್ತು ಆನ್‌ಲೈನ್ ಪ್ರಮೋಷನ್ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಸುಮಾರು 1 ಮಿಲಿಯನ್ ಅಂದ್ರೆ 10 ಲಕ್ಷ ಫಾಲೋವರ್ಸ್‌ನ ಬಿಂದು ಗೌಡ ಗಳಿಸಿದ್ದಾರೆ. ಹೀಗಾಗಿ ಇನ್‌ಸ್ಟಾಗ್ರಾಂನಿಂದ ಆದಾಯವೂ ಹೆಚ್ಚಾಗಿದೆ ಎನ್ನಲಾಗಿದೆ.
ಲಕ್ಷದಲ್ಲಿ ಫಾಲೋವರ್ಸ್ ಹೊಂದಿರುವ ವ್ಯಕ್ತಿಗಳೇ ಕೈ ತುಂಬಾ ಹಣ ಸಂಪಾದನೆ ಮಾಡುತ್ತಾರೆ ಇನ್ನು 1 ಮಿಲಿಯನ್ ಫಾಲೋವರ್ಸ್ ಇರುವಾಗ ಸಂದಾಪನೆ ಹೆಚ್ಚಿರುತ್ತದೆ ಅಂತಾರೆ ನಟ್ಟಿಗರು.
ಕೆಲವು ವರ್ಷಗಳ ಹಿಂದೆ ಬಿಂದು ಗೌಡ ಸಿಕ್ಕಾಪಟ್ಟೆ ಟ್ರೋಲ್‌ಗಳನ್ನು ಎದುರಿಸಿದ್ದರು. ಯಾವ ಬಟ್ಟೆ ಧರಿಸಿದ್ದರು, ಕನ್ನಡ ಉಚ್ಚಾರಣೆ, ಕೆಟ್ಟ ಡ್ಯಾನ್ಸ್ ಎಂದು ಕಾಲೆಳೆದುಬಿಟ್ಟರು.
ಈಗ ಬಿಂದು ಗೌಡ ಸಂಪಾದನೆ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಅಲ್ಲದೆ ಖಾಸಗಿ ಟಿವಿ ಕಾರ್ಯಕ್ರಮಗಳು, ಸಿನಿಮಾ ಅವಾರ್ಡ್ ಶೋಗಳಲ್ಲಿ ಬಿಂದು ಗೌಡ ಭಾಗಿಯಾಗುತ್ತಿದ್ದಾರೆ.