ಸೋಷಿಯಲ್ ಮೀಡಿಯಾ ಟ್ರೋಲ್ ಕ್ವೀನ್, ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಈ ಮಳೆಗಾಲದಲ್ಲಿ ಗೋವಾ ಕಡೆ ಪಯಣ ಮಾಡುತ್ತಿದ್ದಾರೆ.
ಕಳೆದ ಎರಡು ಮೂರು ವಿಡಿಯೋಗಳಲ್ಲಿ ಗೋವಾ ಟ್ರಿಪ್‌ಗೆಂದು ಸುಮಾಉ 20 ಸಾವಿರ ರೂಪಾಯಿಗಳನ್ನು ಖರ್ಚು ಶಾಪಿಂಗ್ ಮಾಡಿರುವ ವಿಡಿಯೋ ಅಪ್ಲೋಡ್ ಮಾಡಿದ್ದರು.
ವಿಮಾನ ಏರುವ ಮುನ್ನ ಏರ್ಪೋರ್ಟ್‌ನಲ್ಲಿ ಕೊಂಚ ಸಮಯ ಕಳೆದ ಸೋನು ಗೌಡ ಫೋಟೋಶೂಟ್ ಮಾಡಿದ್ದಾರೆ. ಅದಕ್ಕೆ Goa Calling ಎಂದು ಬರೆದುಕೊಂಡಿದ್ದಾರೆ.
ಅಕ್ಕಾ ಮಾಲ್ಡೀವ್ಸ್ ಕಡೆಗೆ ಹೋದಾಗ ರೂಮಿನಲ್ಲಿ ಇದ್ದ ಲಾಕರ್‌ನ ನೋಡಿ ನೀನು ಓವನ್ ಎಂದು ಹೇಳಿ ಪೆಕ್ರಿ ಆಗಿದ್ದೆ ಈ ಸಲ ಆ ಕೆಲಸ ಮಾಡಬೇಡ ಎಂದಿದ್ದಾರೆ ನೆಟ್ಟಿಗರು.
ಎಲ್ಲಿ ನೋಡಿದರೂ ಮಳೆ ಮಳೆ ಈ ಸಮಯದಲ್ಲಿ ಪ್ರಯಾಣ ಯಾಕೆ ಎಂದು ಫಾಲೋವರ್ಸ್ ಪ್ರಶ್ನೆ ಮಾಡಿದ್ದಾರೆ. ಸೋನು ಯಾವ ಕಾಮೆಂಟ್‌ಗೂ ರಿಪ್ಲೈ ಮಾಡಿಲ್ಲ.
ಸದ್ಯ ಸೋನು ಗೌಡ ಯೂಟ್ಯೂಬ್ ವ್ಲಾಗ್ ಮತ್ತು ರೀಲ್ಸ್ ಮೂಲಕ ಸಂಪಾದನೆ ಮಾಡುತ್ತಿದ್ದಾರೆ. ಸಿನಿಮಾ ನಾಯಕಿಯಾಗಿ ಮಿಂಚಬೇಕು ಎಂದು ಕನಸು ಕಾಣುತ್ತಿದ್ದರು.
Vaishnavi Chandrashekar