ಪಾಪ್ಸ್ ಝೂಮ್ ಮಾಡಿದ್ರೂ ಚಿಂತೆಯಿಲ್ಲ, ಹಿಂಭಾಗ ಚಂದ ಕಾಣಲು ವರ್ಕೌಟ್ ಮಾಡುತ್ತೇನೆಂದ ಶೆಫಾಲಿ!

First Published | Aug 5, 2024, 8:51 PM IST

ಪಾಪರಾಜಿಗಳು ನಟಿಯರು, ಮಾಡೆಲ್‌ಗಳನ್ನು ಹಿಂಭಾಗದಿಂದ ಸೆರೆ ಹಿಡಿದಾಗ ಹಲವರು ಗರಂ ಆಗಿದ್ದಾರೆ. ಹಿಂಭಾಗದಿಂದ ಝೂಮ್ ಮಾಡಿ ಕ್ಲಿಕ್ಕಿಸಿದಾಗ ವಿರೋಧಿಸಿದ್ದಾರೆ. ಆದರೆ ಶೆಫಾಲಿ ಮಾತ್ರ ಇದ್ಯಾವುದು ಚಿಂತೆ ಇಲ್ಲ ಎಂದಿದ್ದಾರೆ. ಹಿಂದೆ ಚಂದ ಕಾಣಲು ನಾನು ವರ್ಕೌಟ್ ಮಾಡಿದ್ದೇನೆ ಎಂದಿದ್ದಾರೆ.

ನಟಿಯರು, ಮಾಡೆಲ್ ಎಲ್ಲೇ ಹೋದರೂ ಪಾಪರಾಜಿಗಳು ಝೂಮ್ ಮಾಡಿ ಫೋಟೋ ವಿಡಿಯೋ ತೆಗೆಯುವುದು ಸಾಮಾನ್ಯ. ಹಲವರು ಹಿಂಭಾಗಿಂದ ವಿಡಿಯೋ, ಫೋಟೋ ಝೂಮ್ ಮಾಡಿ ತೆಗೆದಾಗ ಗರಂ ಆಗಿದ್ದಾರೆ. ಆದರೆ ಬಿಗ್ ಬಾಸ್ ಖ್ಯಾತಿಯ ಶೆಫಾಲಿ ಮಾತ್ರ ಯಾವುದೇ ಚಿಂತೆ ಇಲ್ಲ ಎಂದಿದ್ದಾರೆ.

ಬಿಗ್ ಬಾಸ್ 13ರಲ್ಲಿ ಕಾಣಿಸಿಕೊಂಡ ಶೆಫಾಲಿ ಜರಿವಾಲ ಪಾಪರಾಜಿಗಳ ಝೂಮ್ ಅಸ್ತ್ರಕ್ಕೆ ಅಂಜಿಕೆ ಇಲ್ಲ ಎಂದಿದ್ದಾರೆ. ಹಿಂಭಾಗ ಚಂದ ಕಾಣಲು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತೇನೆ. ಹೀಗಾಗಿ ಝೂಮ್ ಮಾಡಿದರೂ ಪರ್ವಾಗಿಲ್ಲ ಎಂದಿದ್ದಾರೆ.

Tap to resize

ಅಬ್ರ ಕಾ ಡಬ್ರಾ ಪೋಡ್‌ಕಾಸ್ಟ್‌ನಲ್ಲಿ ಶೆಫಾಲಿ ಪಾಪರಾಜಿಗಳು ಝೂಮ್ ಮಾಡಿ ಕ್ಲಿಕ್ಕಿಸುವ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಪರಾಗ್ ಜೊತೆ ನಿಮ್ಮ ರೀಲ್ಸ್ ನೋಡಿದ್ದೇನೆ. ಆದರೆ ನಿಮ್ಮ ರಿಂಗ್ ಕೆಳಗೆ ಬಿದ್ದಾಗ ನೀವು ಬಗ್ಗಿ ಹೆಕ್ಕಿದ್ದೀರಿ. ಆದರೆ ಕ್ಯಾಮೆರಾಮ್ಯಾನ್ ಇದ್ದರೆ ಝೂಮ್ ಮಾಡುತ್ತಿದ್ದರು ಎಂದು ಸಂದರ್ಶಕ ಹೇಳಿದ್ದಾನೆ.

ಇದಕ್ಕೆ ಉತ್ತರಿಸಿದ ಶೆಫಾಲಿ, ನಾನು ಪಾಪ್ಸ್ ಝೂಮ್ ಮಾಡುತ್ತಾರೋ ಇಲ್ಲವೋ ಎಂದು ತಲೆಕೆಡಿಸಿಕೊಳ್ಳುವುದಿಲ್ಲ. ಕಾರಣ ಜಿಮ್‌ನಲ್ಲಿ ಹಿಂಭಾಗ ಚೆನ್ನಾಗಿ ಕಾಣಬೇಕು ಎಂದು ವರ್ಕೌಟ್ ಮಾಡುತ್ತೇನೆ ಎಂದಿದ್ದಾರೆ.

ಪಾಪ್ಸ್ ಝೂಮ್ ಮಾಡಿ ರೆಕಾರ್ಡ್ ಮಾಡುವ ಪರಿಪಾಠಕ್ಕೆ ನಾನು ಅಂಜುವುದಿಲ್ಲ. ಹೀಗಾಗಿ ನಾನು ಅವರಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶೆಫಾಲಿ ಹೇಳಿದ್ದಾರೆ. ನನ್ನ ಹಿಂಭಾಕ ಪಾಪ್ಸ್ ಕ್ಯಾಮೆರಾದಲ್ಲಿ ಚಂದ ಕಂಡರೆ ತಪ್ಪೇನು ಎಂದು ಶೆಫಾಲಿ ಪ್ರಶ್ನಿಸಿದ್ದಾರೆ.

ಜಾಹ್ನವಿ ಕಪೂರ್, ಮೃಣಾಲ್ ಠಾಕೂರ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಹಿಂಭಾಗದಿಂದ ಫೋಟೋ ತೆಗೆಯಬೇಡಿ ಎಂದು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಶೆಫಾಲಿ ಇವರೆಲ್ಲರಿಗಿಂತ ಭಿನ್ನವಾಗಿ ಉತ್ತರ ನೀಡಿದ್ದಾರೆ.

ಬಿಗ್ ಬಾಸ್ ಖ್ಯಾತಿ ಬಳಿಕ ಶೆಫಾಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಜನಪ್ರಿಯವಾಗಿದ್ದಾರೆ. ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

ಶೆಫಾಲಿ ಹಲವು ಬಾರಿ ಬಿಕಿನಿ ಮೂಲಕವೂ ಕಾಣಿಸಿಕೊಂಡಿದ್ದಾರೆ. ಇನ್ನು ಟಿವಿ ರಿಯಾಲಿಟಿ ಶೋ, ಟಿವಿ ಸೀರಿಯಲ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಶೆಫಾಲಿ ಸಕ್ರಿಯರಾಗಿದ್ದಾರೆ.

Latest Videos

click me!