ಲಕ್ಷ್ಮೀ ನಿವಾಸ ಜಯಂತ್ ಸೈಕೋ ಕ್ಯಾರೆಕ್ಟರ್ ನೋಡಿ ಹುಡುಗಿಯರು ಮದ್ವೆಯಾಗೋಲ್ಲ ಅಂತಿದ್ದಾರೆ!

First Published | May 10, 2024, 7:47 PM IST

ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಉಳಿದೆಲ್ಲಾ ಪಾತ್ರಗಳ ಕಥೆ ವಿಭಿನ್ನವಾಗಿದ್ದರೂ, ಜಯಂತ್ ಮತ್ತು ಜಾಹ್ನವಿ ಕಥೆ ತುಂಬಾನೆ ವಿಭಿನ್ನವಾಗಿದೆ. ಸದ್ಯ ಜಯಂತ್ ಕ್ಯಾರೆಕ್ಟರ್ ಬಗ್ಗೆ ಭಾರಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಹಲವು ಜೋಡಿಗಳಿವೆ, ಎಲ್ಲಾ ಜೋಡಿಯ ಕಥೆ ಒಂದು ರೀತಿಯದ್ದಾಗಿದ್ದರೆ, ಜಯಂತ್ ಜಾಹ್ನವಿಯ ಕಥೆಯೇ ವಿಭಿನ್ನ. ಯಾಕಂದ್ರೆ ಜಯಂತ್ ಒಬ್ಬ ಸೈಕೋ ಪ್ರೇಮಿ. ಜಯಂತ್ ನನ್ನು ಆರಂಭದಲ್ಲಿ ಪ್ರೇಕ್ಷಕರು ಹೊಗಳಿ ಕೊಂಡಾಡಿದೋರು ಇದೀಗ ಅಯ್ಯೋ ಯಾಕಪ್ಪ ಇವನನ್ನ ತೋರಿಸ್ತಿರಿ ಅಂತಿದ್ದಾರೆ. ಒಟ್ಟಲ್ಲಿ ಜಯಂತ್ ಬಗ್ಗೆ ಸೋಶಿಯಲ್ ಮೀಡೀಯಾದಲ್ಲಿ ಪರ ವಿರೋಧ ಚರ್ಚೆ ಜೋರಾಗಿಯೇ ನಡೀತಾ ಇದೆ.
 

ಹೊಸ ಪ್ರೋಮೋದಲ್ಲಿ (promo) ತನ್ನ ಪ್ರೀತಿಯ ಚಿನ್ನುಮರಿ ಜಾಹ್ನವಿಯನ್ನು ಹೊರಗಡೆ ಸುತ್ತಾಡುವ ಎಂದು ಮನೆಯಿಂದ ಹೊರಕ್ಕೆ ಕರೆದುಕೊಂಡು ಬಂದಿರುವ ಜಯಂತ್, ಇದಕ್ಕೆ ಜಾಹ್ನವಿ ಪಂಜರದ ಗಿಳಿ ಹೊರಗೆ ಬಂದಿರೋ ತರ ಅನಿಸ್ತಿದೆ ಅಂತಾಳೆ, ಅದಕ್ಕೆ ಉತ್ತರವಾಗಿ ಜಯಂತ್, ಹಾಗಂದ್ರೆ ನನ್ನ ಹೃದಯ ಗೂಡಿದ್ದಾಗೆ, ತುಂಬಾ ಸಣ್ಣದು, ನಿಮಗೆ ಅಲ್ಲಿ ಜಾಗ ಇಲ್ಲ ಅಂತ ಅರ್ಥಾನಾ ಅಂತ ಕೇಳ್ತಾನೆ, ಹಾಗೆ ಹೇಳಿ ಮಾತನಾಡುತ್ತಲೇ ಜಾಹ್ನವಿಯನ್ನು ಸ್ವಿಮ್ಮಿಂಗ್ ಪೂಲ್‌ಗೆ ತಳ್ಳುತ್ತಾನೆ ಪಾಗಲ್ ಪ್ರೇಮಿ ಜಯಂತ್. 
 

Tap to resize

ಜಯಂತ್ ಸೈಕೋ ಕ್ಯಾರೆಕ್ಟರ್ ನೋಡಿ ವೀಕ್ಷಕರು ಪರ ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆ. ಜಾನು ನೀನು ಇವನ ಬದುಕಿನಲ್ಲಿ ಪಂಜರದ ಗಿಳಿ ನೇ ಹಾರಡೋ ಹಕ್ಕಿಗೆ ರೆಕ್ಕೆ ಕತ್ತರಿಸಿ ಬಿಟ್ಟ ಹಾಗೆ ಆಯ್ತು ನಿನ್ನ ಪಾಡು. ಈ ಸೈಕೋ ಜೊತೆ ಅದು ಹೇಗೆ ಬದುಕುತ್ತಿಯೋ? ಇದಿನ್ನೂ ಆರಂಭ ಮುಂದೆ ಎನ್ ಇದೀಯೋ ಕರ್ಮ. ಡೈರೆಕ್ಟರ್ ಇವರ ಕಥೆಯನ್ನು ರದ್ದು ಮಾಡಿ. ಇವರ ಅವಶ್ಯಕತೆ ಇಲ್ಲ ಅನ್ಸುತ್ತೆ ಇಲ್ಲಿ ಎಂದಿದ್ದಾರೆ ಒಬ್ಬರು. 
 

ಇನ್ನೊಬ್ರು ಥೂ ರಾಕ್ಷಸ ಜಾನು ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ತಳ್ಳಿದ ಇವನು ನಾಗವಲ್ಲಿ ತರ ಸಡನ್ ಆಗಿ ಬದಲಾಗೋದನ್ನ ಜಾನು ಅರ್ಥ ಮಾಡಿಕೋ, ಇವನು ಸರಿ ಇಲ್ಲ. ಇವನು ಮನುಷ್ಯ ರೂಪದ ರಾಕ್ಷಸ. ಜಯಂತ್ ಬಂದ್ರೆ ಆ ಧಾರಾವಾಹಿ ನೋಡೋ ಇಂಟ್ರೆಸ್ಟ್  ಇರೋದಿಲ್ಲ ಅಂದಿದ್ದಾರೆ. 
 

ಮತ್ತೊಬ್ಬರು ಈ ಸಿರಿಯಲ್ ನೋಡಿದ ಹುಡುಗಿಯರು ನಿಜವಾಗಿಯೂ ಮದುವೆ ಆಗಲ್ಲ. ಜಯಂತ್ ಬಂದ್ರೆ ಫುಲ್ ಭಯ ಆಗುತ್ತೆ. ನಿಜವಾಗಿಯೂ ಯಾರು ಈ ಸೀರಿಯಲ್ (serial) ನೋಡಲ್ಲ ಮುಂದೆ. ಜಯಂತ್ ನ ನೋಡಿದ್ರೆ ಸೈಕೋ ಅದಂಗೆ ಕಾಣುತ್ತೆ. ನಿಜವಾಗಿ ಹುಡುಗರ ಬಗ್ಗೆ ಕೆಟ್ಟ ಅಭಿಪ್ರಾಯ ಕೊಟ್ಟ ಹಾಗೆ ಇದೆ ಎಂದಿದ್ದಾರೆ. 
 

ಮತ್ತೊಂದಿಷ್ಟು ಜನ ಸುಂದರ ಜೋಡಿ. ಕಥೆ ಚೆಂದ ಇದ್ದಿದ್ದರೆ ಫೇಮಸ್ ಜೋಡಿ, ನಂ 1 ಜೋಡಿ ಆಗಿರುತ್ತಿದ್ದರು. ಅಂದ್ರೆ ಇನ್ನೊಬ್ಬರು ಗಂಡು ಮಕ್ಕಳು ಕೂಡ ಎಷ್ಟೋ ಜನ ಈ ಸೀರಿಯಲ್ ನೋಡ್ತಾ ಇದ್ದಾರೆ ಅಂದ್ರೆ ಅದಕ್ಕೆ ಕಾರಣ ಜಯಂತ್ ನ ಸೈಕೋ ಪಾತ್ರನೇ ಎಂದಿದ್ದಾರೆ. ಅಲ್ಲದೇ ಮತ್ತೊಬ್ಬರು ನಾನು ಈ ಸೀರಿಯಲ್ ನೋಡೋದೇ ಜಯಂತ್ ಅವರಿಗೋಸ್ಕರ. ಇಲ್ಲ ಅಂದ್ರೆ ಏನಿದೆ ಅಂಥ ನೋಡ್ಬೇಕು ಇದನ್ನ. ಅದೇ ಫ್ಯಾಮಿಲಿ ಡ್ರಾಮಾ, ಅಜ್ಜ ಅಜ್ಜಿ, ಆಂಟಿ ಅಂಕಲ್ ಗೋಳು ಯಾರು ನೋಡ್ತಾರೆ ಎಂದಿದ್ದಾರೆ. 
 

ಇನ್ನೂ ಕೆಲವರು ಜಯಂತ್ ನಂತಹ ಗಂಡಂದಿರುವ ನಮ್ಮ ನಿಮ್ಮ ನಡುವೆ ಈ ಸಮಾಜದಲ್ಲಿ ಇದ್ದಾರೆ. ಅವರ ಸೈಕೋ ಪ್ರೀತಿ, ಸಂಶಯದಿಂದ ಎಷ್ಟೋ ಜನ ಹೆಣ್ಣುಮಕ್ಕಳು ಪ್ರತಿನಿತ್ಯ ನರಳುತ್ತಲೂ ಇರಬಹುದು. ಆದರೆ ಅವರು ಅದನ್ನು ಯಾರ ಬಳಿಯೂ ಹೇಳೋದಕ್ಕೆ ಸಾಧ್ಯವಾಗದೆ ಒಳಗೊಳಗೆ ಕೊರಗ್ತಿದ್ದಾರೆ. ಇಂತಹ ಪಾತ್ರ ಪರಿಚಯಿಸಿದ್ದು ಒಳ್ಳೆಯದೇ ಆಯ್ತು ಎಂದಿದ್ದಾರೆ. 
 

ಇನ್ನು ಜಯಂತ್ ಪಾತ್ರ ತಪ್ಪೋ ಸರಿಯೋ, ಎಲ್ಲರೂ ಜಯಂತ್ ಪಾತ್ರದಲ್ಲಿ ಅಮೋಘವಾಗಿ ನಟಿಸುತ್ತಿರುವ ದೀಪಕ್ ಸುಬ್ರಹ್ಮಣ್ಯ ಅವರ ನಟನೆಗೆ ಸೋತಿರೋದು ಅಕ್ಷರಶಃ ನಿಜ. ಒಂದೇ ಸೀರಿಯಲ್ ನಲ್ಲಿ ಎರಡೆರಡು ತರ ಕ್ಯಾರೆಕ್ಟರ್ ನಲ್ಲಿ ನಟಿಸುತ್ತಾ, ಸೈಕೋ ಆಗಿಯಾದರೂ ಸರಿ, ಬ್ಯುಸಿನೆಸ್ ಮೆನ್ ಆಗಿಯೂ ಸರಿ, ಅತ್ತೆ ಮಾವನ ಮುಂದೆ ವಿನಯವಂತಿಕೆಯಿಂದ ಕೂಡಿದ ಅಳಿಯನಾಗಿಯೂ ಇವರ ನಟನೆ ಮಾತ್ರ ಅದ್ಭುತ ಅಂತಿದ್ದಾರೆ ಪ್ರೇಕ್ಷಕರು. 

Latest Videos

click me!