ಬಾಲಿಯಲ್ಲಿ ಹನಿಮೂನ್ : ಪತಿ ಜೊತೆ ರೊಮ್ಯಾಂಟಿಕ್ ಫೋಟೋಸ್ ಹಂಚಿ ಕೊಂಡ ಕೌಸ್ತುಭ ಮಣಿ

Published : May 10, 2024, 05:04 PM IST

ನನ್ನರಸಿ ರಾಧೆ ಖ್ಯಾತಿಯ ನಟಿ ಕೌಸ್ತುಭ ಮಣಿ ಇತ್ತೀಚೆಗಷ್ಟೇ ಹಸೆಮಣೆ ಏರಿದ್ದು, ಇದೀಗ ಪತಿ ಜೊತೆ ಬಾಲಿಗೆ ಹನಿಮೂನ್ ಗೆ ತೆರಳಿದ್ದು ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ.   

PREV
17
ಬಾಲಿಯಲ್ಲಿ ಹನಿಮೂನ್ : ಪತಿ ಜೊತೆ ರೊಮ್ಯಾಂಟಿಕ್ ಫೋಟೋಸ್ ಹಂಚಿ ಕೊಂಡ ಕೌಸ್ತುಭ ಮಣಿ

ಇತ್ತೀಚೆಗಷ್ಟೇ ಸರಳ ಮತ್ತು ಸಾಂಪ್ರದಾಯ ಬದ್ಧವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಹಸೆಮಣೆ ಏರಿದ ನನ್ನರಸಿ ರಾಧೆ ಸೀರಿಯಲ್ ನಟಿ ಕೌಸ್ತುಭ ಮಣಿ  (Kasutubha Mani) ಸದ್ಯ ಹನಿಮೂನ್ ನಲ್ಲಿ ಎಂಜಾಯ್ ಮಾಡ್ತಿದ್ದಾರೆ. 
 

27

ಕೌಸ್ತುಭ ಮಣಿಯವರು ಸಿದ್ಧಾಂತ್ ಸತೀಶ್ ಎನ್ನುವವರ ಜೊತೆ ಎಪ್ರಿಲ್ ಅಂತ್ಯದಲ್ಲಿ ಅಯ್ಯಂಗಾರ್ ಶೈಲಿಯಲ್ಲಿ ವಿವಾಹವಾಗಿದ್ದರು. ಇದೀಗ ನಟಿ ಪರಿ ಜೊತೆ ಬಾಲಿಗೆ ಹನಿಮೂನ್‌ಗೆ ತೆರಳಿದ್ದು, ಅಲ್ಲಿನ ಸುಂದರ ರೊಮ್ಯಾಂಟಿಕ್ ಫೋಟೋಗಳನ್ನು (romantic photo) ನಟಿ ಹಂಚಿಕೊಂಡಿದ್ದಾರೆ. 
 

37

ಸೋಶಿಯಲ್ ಮೀಡಿಯಾದಲ್ಲಿ (social media) ಒಂದಷ್ಟು ಮುದ್ದಾದ ಫೋಟೋಗಳನ್ನು ಹಂಚಿಕೊಂಡಿರುವ ಕೌಸ್ತುಭ ಜೀವನದ ದೊಡ್ಡ ಸಂತೋಷಗಳು ವಸ್ತುಗಳಲ್ಲ; ಅವು ಕ್ಷಣಗಳು. ನನ್ನ ಪ್ರೀತಿಯೊಂದಿಗಿನ ಸ್ವರ್ಗೀಯ ಕ್ಷಣಗಳು ಎಂದು ಕ್ಯಾಪ್ಶನ್ ಕೂಡ ಹಂಚಿಕೊಂಡಿದ್ದಾರೆ. 
 

47

ಪ್ರಕೃತಿ ರಮಣೀಯತೆಗೆ ಹೆಸರುವಾಸಿಯಾಗಿರುವ ಇಂಡೋನೇಷ್ಯಾದ ಬಾಲಿಯ (Bali) ಸುಂದರ ತಾಣಗಳಿಗೆ ಕೌಸ್ತುಭ ಮಣಿ ತೆರಳಿದ್ದು, ಅಲ್ಲಿ ಹೆವೆನ್ಸ್ ಗೇಟ್ ಎಂದೇ ಕರೆಯಲಾಗುವ ಲೇಂಪುಯಾಗ್ ಟೆಂಪಲ್, ಸುಂದರವಾದ ಲೇಕ್, ಪರ್ವತಶ್ರೇಣಿಯ ತಪ್ಪಲಲ್ಲಿ ಈ ಜೋಡಿ ಹಕ್ಕಿಗಳು ಫೋಟೋ ತೆಗೆಸಿಕೊಂಡಿದ್ದಾರೆ. 
 

57

ನನ್ನರಸಿ ರಾಧೆ (Nannarasi Radhe) ಸೀರಿಯಲ್ ಮೂಲಕ ನಟನೆಗೆ ಕಾಲಿಟ್ಟ ಕೌಸ್ತುಭ, ಸೀರಿಯಲ್ ನಲ್ಲಿ ಇಂಚರಾ ಆಗಿ ಗಮನ ಸೆಳೆದಿದ್ದರು. ಇದಾದ ಬಳಿಕ ತಮಿಳು, ತೆಲುಗು ಸೀರಿಯಲ್ ಗಳಲ್ಲೂ ನಟಿಸಿದ್ದರು. ಇನ್ನು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಗೌರಿ ಶಂಕರ ಸೀರಿಯಲ್ ನ ಮೊದಲ ಕೆಲವು ಎಪಿಸೋಡ್ ಗಳಲ್ಲೂ ಕೌಸ್ತುಭ ನಟಿಸಿದ್ದರು. 
 

67

ಗೌರಿ ಶಂಕರದಲ್ಲಿ ಮದುವೆಯ ಸೀನ್ ಬಳಿಕ ನಾಯಕಿ ಬದಲಾಗಿದ್ದರು. ಸೀರಿಯಲ್ ನಿಂದ ಇದ್ದಕ್ಕಿದ್ದಂತೆ  ಹೊರ ಬಂದಿದ್ದಕ್ಕೆ  ಕೌಸ್ತುಭ ಕಾರಣ ನೀಡಿರಲಿಲ್ಲ, ಆದರೆ ಕೆಲವೇ ದಿನಗಳ ಬಳಿಕ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ  ಮದುವೆ ಆಗುವ ಸೂಚನೆ ಕೊಟ್ಟಿದ್ದರು. 
 

77

ಕೌಸ್ತುಭ ಮಣಿ ಪತಿ ಸಿದ್ಧಾಂತ್ ವಿದೇಶದಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮುಂದೆ ಈ ನಟಿಯೂ ಕೂಡ ಫಾರೆನ್‌ಗೆ ಹಾರಿ ಅಲ್ಲಿಯೇ ನೆಲೆಸಬಹುದು ಎನ್ನಲಾಗಿದೆ. ಹಾಗಾಗಿಯೇ ಇವರು ಸೀರಿಯಲ್ ನಿಂದ ದೂರವಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. 
 

Read more Photos on
click me!

Recommended Stories