ಮಹೇಂದ್ರ ಥಾರ್ ಮಾರಿ ಐಷಾರಾಮಿ Benz ಖರೀದಿಸಿದ ಅನುಪಮಾ ಗೌಡ; ಎಲ್ಲೂ ಪೋಸ್ಟ್‌ ಹಾಕಲ್ಲ ಎಂದ ನಟಿ!

First Published | May 10, 2024, 5:39 PM IST

ಇದ್ದಕ್ಕಿದ್ದಂತೆ ಮನೆ ಮುಂದೆ ಐಷಾರಾಮಿ ಕಾರು ತಂದು ನಿಲ್ಲಿಸಿದ ಅನುಪಮಾ ಗೌಡ. Benz ಬೆಲೆ ಕೇಳಿ ನೆಟ್ಟಿಗರು ಶಾಕ್....

ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ತಮ್ಮ ಕೆಂಪು ಬಣ್ಣದ ಥಾರ್ (ಜೀಪ್) ಮಾರಾಟ ಮಾಡಿದ್ದಾರೆ. ಈಗ ಐಷಾರಾಮಿ Benz ಖರೀದಿಸಲು ಕಾರಣ ರಿವೀಲ್ ಮಾಡಿದ್ದಾರೆ. ಆದರೆ ಎಲ್ಲೂ ಪೋಸ್ಟ್‌ ಮಾಡುವುದಿಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

ನಾನು ಥಾರ್ ಮಾರಾಟ ಮಾಡಿ ಅನಂತರ Benz ಖರೀದಿಸಿರುವೆ. ಇಲ್ಲಿ Benz ಅಥವಾ Audi ಐಷಾರಾಮಿ ಕಾರುಗಳು ಅನ್ನೋ ಪ್ರಶ್ನೆಗಳು ಬರಲ್ಲ. 

Tap to resize

ಏಕೆಂದರೆ ನಾನು ಖರೀದಿ ಮಾಡಿದ ಥಾರ್ ಸುಮಾರು 6 ಕಿಮೀ. ಮೈಲೇಜ್ ಕೊಡುತ್ತಿತ್ತು. ಇಷ್ಟೋಂದು ಹಣ ಪೆಟ್ರೋಲ್‌ಗೆ ವೇಸ್ಟ್‌ ಆಗುತ್ತಿದೆ ಎಂದು ಥಾರ್ರ ಓಡಿಸಲು ಬೇಸರ ಆಗುತ್ತಿತ್ತು.

ಹೀಗಾಗಿ ದ್ವಿಚಕ್ರವಾಹನ ಖರೀದಿ ಮಾಡಿದೆ. ಸುಮಾರು ಕಡೆ 2 ವೀಲರ್‌ ಬಳಸುತ್ತಿದ್ದೆ. ನೀನು ಆರ್ಟಿಸ್ಟ್‌ ಕಣೆ ಕಾರಿನಲ್ಲಿ ಓಡಾಡಬೇಕು ಎಂದು ಅಮ್ಮ ಹೇಳುತ್ತಿದ್ದರು.

ನಾನು ಎಂದೂ ಆ ಥಾರ್‌ನಿಂದ ಖುಷಿಯಾಗಿ ಇರಲಿಲ್ಲ ಹೀಗಾಗಿ ಬದಲಾಯಿಸಬೇಕು ಅನ್ನೋ ಯೋಚನೆ ಬಂದಿತ್ತು. ಕಾರುಗಳು ನಮ್ಮನ್ನು ಕಾಪಾಡುತ್ತದೆ,ನನ್ನ ಸೀಕ್ರೆಟ್‌ಗಳು ಅದಕ್ಕೆ ಗೊತ್ತಿದೆ.

 ನನಗೆ ಕಾರು ಒಂದು ವಸ್ತು ಅಲ್ಲ ಅದು ನನ್ನ ಸ್ಪೆಷಲ್ ಜಾಗ. ಅಲ್ಲಿ ಅತ್ತಿದ್ದೀನಿ ಕೋಪ ಮಾಡಿಕೊಂಡಿದ್ದೀನಿ ಆದರೂ ನನ್ನನ್ನು ಅಷ್ಟೇ ಸುರಕ್ಷೆ ಮಾಡಿದೆ.

ಇದುವರೆಗೂ ಯಾವ ಕಾರು ಓಡಿಸಿದರೂ ಒಂದು ಗಾಯ ಆಗಿಲ್ಲ. ಶೋಕಿಯಲ್ಲಿ ನಾನು ಥಾರ್‌ ಖರೀದಿ ಮಾಡಿದ್ದು ಆದರೆ ಒಂದು ತಿಂಗಳಿನಲ್ಲಿ ಅದರ ಬಂಡವಾಳ ಗೊತ್ತಾಗಿತ್ತು. 

ಬೇರೆ ಕಾರು ಖರೀದಿ ಮಾಡಲು ನಿರ್ಧಾರ ಮಾಡಿದಾಗ ಪ್ರೀಮಿಯಮ್‌ ಕಾರು ಖರೀದಿಸಬೇಕು ಎಂದು ಹೇಳಿದ ಮೇಲೆ ನಾನು Benz ಖರೀದಿ ಮಾಡಿದೆ. 

ಆಡಿ ಕಾರು ಖರೀದಿ ಮಾಡಬೇಕು ಅನ್ನೋ ಆಸೆ ತುಂಬಾನೇ ಇತ್ತು ಆದರೆ Benz ಖುಷಿ ಕೊಡುತ್ತಿದೆ. ಬಜೆಟ್‌ ಜಾಸ್ತಿನೇ ಇದೆ ಆದರೂ ಸುಮಾರು 5-6 ವರ್ಷಗಳು ಬದಲಾಯಿಸುವುದಿಲ್ಲ.

ನಾನು ಕಾರು ಖರೀದಿ ಮಾಡಿರುವುದನ್ನು ಬೇಕು ಎಂದು ಎಲ್ಲೂ ಹಾಕಿಲ್ಲ, ಹಾಕಬೇಕು ಅನಿಸಿಲ್ಲ. ಮನೆ ಮುಂದೆ ಕಾರು ತೊಳೆಯುತ್ತಿದ್ದರು ಆಶ್ಚರ್ಯದಲ್ಲಿ ನನ್ನನ್ನು ನೋಡುತ್ತಾರೆ. 

Latest Videos

click me!