ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ ಸೀರೆ ಚೆನ್ನಾಗಿದೆ ಅಂದ್ರು ಫ್ಯಾನ್ಸ್!

First Published | Feb 22, 2024, 1:18 PM IST

ಕನ್ನಡ ಕಿರುತೆರೆ, ಹಿರಿತೆರೆ ನಟಿ, ನಿರೂಪಕಿಯಾಗಿ ಗುರುತಿಸಿಕೊಂಡ ಕಾವ್ಯಾ ಶಾಸ್ತ್ರಿ ಇದೀಗ ತಿರುಪತಿ ತಿಮ್ಮಪ್ಪನ ದರ್ಶನ ಪದೆದಿದ್ದು, ಅಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

ಕನ್ನಡ ಕಿರುತೆರೆಯಲ್ಲಿ ಮತ್ತು ಹಿರಿತೆರೆಯಲ್ಲಿ ಮಿಂಚಿದ ನಟಿ ಕಾವ್ಯಾ ಶಾಸ್ತ್ರಿ (Kavya Shastry). ಇವರು ಇದೀಗ ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ. 
 

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ (Tirupathi Tirumala Temple) ನಿಂತು ಫೋಟೋ ತೆಗೆಸಿಕೊಂಡಿರುವ ಕಾವ್ಯಾ ಶಾಸ್ತ್ರಿ, ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೀಲಿ ಸೀರೆಯಲ್ಲಿ ನಟಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. 
 

Tap to resize

ನೀಲಿ ಸೀರೆ ಜೊತೆ ಸ್ಟೋನ್ ನೆಕ್ ಲೆಸ್, ಅದಕ್ಕೆ ಮ್ಯಾಚ್ ಆಗುವ ಜುಮ್ಕಿ, ಮೂಗು ಬೊಟ್ಟು ತೊಟ್ಟಿರುವ ನಟಿಯ ಫೋಟೋವನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಕಾವ್ಯಾ ಮೇಡಂ ಅಂದ್ರೆ ಫ್ಲವರ್ ಅಲ್ಲ ಫೈರ್ ಎಂದು ಕಾಮೆಂಟ್ ಮಾಡಿದ್ದಾರೆ. 
 

ನಿಮ್ಮ ಸೀರೆಯೂ ಅಂದವಾಗಿದೆ, ಸೀರೆಯುಟ್ಟ ನೀವು ಅಂದವಾಗಿ ಕಾಣುತ್ತೀರಿ. ಡಿವೈನ್ ಜಾಗದಲ್ಲಿ ನಿಮ್ಮನ್ನು ನೋಡೋದೆ ಖುಷಿ, ನಿಮ್ಮ ಅಂದಕ್ಕೆ ಆ ನಗು ಮತ್ತಷ್ಟು ಚೆನ್ನಾಗಿ ಕಾಣುವಂತೆ ಮಾಡಿದೆ. ಈ ಅಂದಕ್ಕೆ ಕಿರೀಟ ಒಂದೇ ಮಿಸ್ಸಿಂಗ್ ಎಂದು ಕಾಮೆಂಟ್ ಮಾಡಿದ್ದಾರೆ ಅಭಿಮಾನಿಗಳು. 
 

ಹೆಚ್ಚಾಗಿ ರಾಜ್ಯದ ಮತ್ತು ದೇಶದ ವಿವಿಧ ದೇಗುಲಗಳ ದರ್ಶನ ಪಡೆಯುತ್ತಲೆ ಇರುವ ಕಾವ್ಯಾ ಶಾಸ್ತ್ರಿ ಅವರಿಗೆ ದೇವರ ಮೇಲೆ ಭಕ್ತಿ ಜಾಸ್ತೀನೆ. ಇವರು ತಮ್ಮ ಸೋಶಿಯಲ್ ಮಿಡಿಯಾದಲ್ಲೂ (social media) ಸಹ ಹೆಚ್ಚಾಗಿ ಆಧ್ಯಾತ್ಮಿಕತೆಯ ಬಗ್ಗೆ ಮಾಹಿತಿ ನೀಡುತ್ತಲೇ ಇರುತ್ತಾರೆ. 
 

ಈ ಹಿಂದೆ ನಟಿ ಮುಳಬಾಗಿಲು ವೀರಾಂಜನೇಯ ದೇವಸ್ಥಾನ, ಗುವಾಹಟಿಯಲ್ಲಿರುವ ಕಾಮಾಖ್ಯ ದೇವಾಲಯ, ಚಾಮುಂಡೇಶ್ವರಿ ಸನ್ನಿಧಿ, ಕೇದರಾನಾಥ ದೇವಾಲಯಗಳಿಗೆ ತೆರಳಿ ಅಲ್ಲಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದರು. 
 

ಇನ್ನು ಕರಿಯರ್ ವಿಷಯಕ್ಕೆ ಬಂದ್ರೆ ಕಾವ್ಯಾ ಕೊನೆಯದಾಗಿ ರಾಧಿಕಾ (Radhika) ಧಾರಾವಾಹಿಯಲ್ಲಿ ನಟಿಸಿದ್ದರು. ಆ ಸೀರಿಯಲ್ ನಿಂದ ಅರ್ಧದಲ್ಲೇ ಹೊರ ಬಂದ ನಂತರ ನಟಿ ಯಾವುದೇ ಸೀರಿಯಲ್ ನಲ್ಲಿ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ, ವಿವಿಧ ಪ್ರಾಡಕ್ಟ್ ಗಳನ್ನು ಪ್ರೊಮೋಟ್ ಮಾಡುತ್ತಾ, ಟ್ರಾವೆಲ್ ಮಾಡುತ್ತಾ ಜೀವನ ಎಂಜಾಯ್ ಮಾಡ್ತಿದ್ದಾರೆ. 
 

Latest Videos

click me!