ಕ್ರಾಪ್ ಟಾಪ್ , ಜೀನ್ಸಲ್ಲಿ ಮಿಂಚಿದ ತನಿಷಾ ಕುಪ್ಪಂಡ: ಸೀರೆ ಉಟ್ಕೊಳಿ ಮೇಡಂ ಎಂದ ಜನ

Published : Feb 21, 2024, 04:36 PM IST

ಬಿಗ್ ಬಾಸ್ ಸೀಸನ್ 10 ರ ಬೆಂಕಿ ಖ್ಯಾತಿಯ ತನಿಷಾ ಕುಪ್ಪಂಡ ಸೋಶಿಯಲ್ ಮಿಡಿಯಾದಲ್ಲಿ ಕ್ರಾಪ್ ಟಾಪ್ ಜೀನ್ಸ್ ಧರಿಸಿದ ಫೋಟೋ ಶೇರ್ ಮಾಡಿದ್ದು, ಜನ ಏನೇನೋ ಕಾಮೆಂಟ್ ಮಾಡಿದ್ದಾರೆ.   

PREV
18
ಕ್ರಾಪ್ ಟಾಪ್ , ಜೀನ್ಸಲ್ಲಿ ಮಿಂಚಿದ ತನಿಷಾ ಕುಪ್ಪಂಡ: ಸೀರೆ ಉಟ್ಕೊಳಿ ಮೇಡಂ ಎಂದ ಜನ

ಈ ಬಾರಿ ಹೆಚ್ಚು ಸದ್ದು ಮಾಡಿದ್ದ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್ ಸೀಸನ್ 10. ಈ ಸೀಸನ್ ನಲ್ಲಿ ತಮ್ಮ ಆಟ, ಮಾತಿನ ಮೂಲಕ ಬೆಂಕಿ ಅಂತಾನೆ ಫೇಮಸ್ ಆದವರು ತನಿಷಾ ಕುಪ್ಪಂಡ (Tanisha Kuppanda). 
 

28

ಬಿಗ್ ಬಾಸ್ ಗೂ ಮುಂಚೆ ಹೆಚ್ಚಿನ ಜನಕ್ಕೆ ಪರಿಚಿತರಾಗಿಲ್ಲದ ತನಿಷಾ, ಬಿಗ್ ಬಾಸ್ ಮೂಲಕ ರಾಜ್ಯದ ಜನರಿಗೆ ಹೆಚ್ಚು ಪರಿಚಿತರಾದರು. ತನಿಷಾ ಅವರಿಗಾಗಿ ಬೆಂಕಿ ಬಂತು ಬೆಂಕಿ (fire) ಎನ್ನುವ ಹಾಡನ್ನು ಸಹ ಬಿಡುಗಡೆ ಮಾಡಲಾಗಿತ್ತು. ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದರು ತನಿಷಾ. 

38

ಇದೀಗ ಬಿಗ್ ಬಾಸ್ (Bigg Boss Season 10)ನಿಂದ ಹೊರ ಬಂದ ಮೇಲೂ ಸಹ ತನಿಷಾ ಹವಾ ಕಡಿಮೆಯಾಗಿಲ್ಲ. ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ತನಿಷಾ ಜನರ ಜೊತೆ ಮತ್ತಷ್ಟು ಕನೆಕ್ಟ್ ಆಗಲು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

48

ಇತ್ತೀಚೆಗೆ ಅವರು ಪಿಂಕ್ ಕ್ರಾಪ್ ಟಾಪ್ (crop top) ಜೊತೆ ನೀಲಿ ಜೀನ್ಸ್ ಧರಿಸಿರುವ ಫೋಟೋಗಳ ಸೀರೀಸ್ ಶೇರ್ ಮಾಡಿದ್ದು, ಬೋಲ್ಡ್ ಆಗಿ ಪೋಸ್ ನೀಡಿರುವ ತನಿಷಾ ಫೋಟೋಗೆ ಅಭಿಮಾನಿಗಳು, ಜನರು ಏನೇನೋ ಕಾಮೆಂಟ್ ಮಾಡಿದ್ದಾರೆ.
 

58

ತನಿಷಾ ಅಭಿಮಾನಿಗಳು ಒನ್ಸ್ ಎ ಬೆಂಕಿ, ಆಲ್ವೇಸ್ ಎ ಬೆಂಕಿ, ನಿಮ್ಮುಂದೆ ಸರಿಸಾಟಿ ಯಾರಿಲ್ಲ. ಯಾಕೋ ನನ್ ಮೊಬೈಲ್ ಹೀಟ್ ಆಗ್ತಾ ಇದೆ, ಓಹ್ ಇದು ನಮ್ ಬೆಂಕಿ ಫೋಟೋಸ್ ಅಲ್ವಾ ಅದ್ಕೆ ಇರಬೇಕು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

68

ಇನ್ನು ಬಿಗ್ ಬಾಸ್ ಮನೆಯಲ್ಲಿ ಉತ್ತಮ ಭಾಂದವ್ಯ ಹೊಂದಿದ್ದ ವರ್ತೂರ್ ಸಂತೋಷ್ (Varthur Santhosh) ಅವರ ಹೆಸರು ಹೇಳಿ ಸಹ ಕೆಲವರು ಕಾಮೆಂಟ್ ಮಾಡಿದ್ದು, ನಿಮ್ಮ ಈ ಫೋಟೋಸ್ ನೋಡಿದ್ರೆ ವರ್ತೂರ್ ನಿದ್ದೆ ಮಾಡಿರಲ್ಲ ನೋಡಿ ಎಂದು ಹೇಳಿದ್ದಾರೆ. 
 

78

ಆದ್ರೆ ಇನ್ನು ಕೆಲವು ಜನರು ಎಷ್ಟು ಅಂತ ಮೆಕಪ್ ಮಾಡ್ಕೊತೀಯ ತಾಯಿ, ನ್ಯಾಚುರಲ್ ಫೋಟೋ ಪೋಸ್ಟ್ ಹಾಕು , ಹೆಂಗ ಕಾಣುತ್ತಿಯ ನೋಡೋಣ ಎಂದು ಮೇಕಪ್ ಪ್ರಿಯೆಯಾಗಿರುವ ತನಿಷಾಗೆ ಕಾಮೆಂಟ್ ಮೂಲಕ ಕೇಳಿಕೊಂಡಿದ್ದಾರೆ. 
 

88

ಮತ್ತೊಬ್ಬರು ಕಾಮೆಂಟ್ ಮಾಡಿ ಬಿಗ್ ಬಾಸ್ ಅಲ್ಲಿ ಟ್ಯಾಲೆಂಟ್ ತೋರ್ಸು ಅಂದ್ರೆ ಆಚೆ ಬಂದು ಹೀಗೆಲ್ಲಾ ಪೋಸ್ ಕೊಡ್ತೀರ ಮೇಡಂ, ಇದು ಸರಿ ಅಲ್ಲ ಅಂದ್ರೆ, ಮತ್ತೊಬ್ಬರು ಬಿಗ್ ಬಾಸ್ ಮನೆಯೊಳಗೆ ಸೀರೆ ಉಟ್ಕೊಂಡು ಚೆನ್ನಾಗಿದ್ರಲ್ವ ಮೇಡಂ, ಈವಾಗ ಯಾಕೆ ಹೀಗೆ ಎಂದು ಕೇಳಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories