ಕನ್ನಡ ಸಿನಿಮಾ, ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ವಿವಿಧ ಪಾತ್ರಗಳಲ್ಲಿ ನಟಿಸುತ್ತಾ, ಜನರನ್ನು ರಂಜಿಸುತ್ತಾ ಬಂದಿರುವ ನಟಿ ಕಾವ್ಯಾ ಶಾಸ್ತ್ರೀ. (Kavya Shashtry)
tv-talk Jun 06 2023
Author: Suvarna News Image Credits:social media
Kannada
ಉದಯ ಟಿವಿ ಸೀರಿಯಲ್
ಕಾವ್ಯಾ ಉದಯ ಟಿವಿಯಲ್ಲಿ ಪ್ರಸಾರ ಕಾಣುತ್ತಿರುವ ‘ರಾಧಿಕಾ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಈ ಅವರು ಇತ್ತೀಚೆಗೆ ಸೀರಿಯಲ್‌ನಿಂದ ಹೊರ ಬಂದರು.
Image credits: social media
Kannada
ಪ್ರೇಕ್ಷಕರಿಂದ ಪ್ರಶ್ನೆ
ಜನಪ್ರಿಯ ಧಾರವಾಹಿಯ ನಾಯಕಿಯ ಪಾತ್ರ ತೊರೆದಿರುವ ಬಗ್ಗೆ ಅಭಿಮಾನಿಗಳು, ಪ್ರೇಕ್ಷಕರು ಕಾವ್ಯಾ ಅವರನ್ನು ಪ್ರಶ್ನೆ ಮಾಡುತ್ತಿದ್ದು, ಇದೀಗ ಕಾವ್ಯಾ ಅದಕ್ಕೆ ಸೋಶಿಯಲ್ ಮೀಡೀಯಾ (social media) ಮೂಲಕ ಉತ್ತರಿಸಿದ್ದಾರೆ.
Image credits: social media
Kannada
ಪ್ರೊಡಕ್ಷನ್ ಹೌಸ್ ಬಗ್ಗೆ ತಕರಾರು
ಇದು ಚಾನೆಲ್, ಪ್ರೊಡಕ್ಷನ್ ಹೌಸ್ ಮತ್ತು ನಾನು ಸೇರಿ ತೆಗೆದುಕೊಂಡ ನಿರ್ಧಾರ. ಪ್ರೊಡಕ್ಷನ್ ಹೌಸ್ ನನ್ನನ್ನು ದುಡಿಸಿಕೊಳ್ಳುವ ಬಗ್ಗೆ, ಸೀರಿಯಲ್ ಟೀಮ್ ಮತ್ತು ಆರ್ಟಿಸ್ಟ್ ಬಗ್ಗೆ ಒಂದಿಷ್ಟು ತಕರಾರು ಇತ್ತೆಂದಿದ್ದಾರೆ.
Image credits: social media
Kannada
ರಾಧಿಕಾ ಪಾತ್ರಕ್ಕೆ ನನ್ನ ಅಗತ್ಯ ಇಲ್ಲ
ಎಲ್ಲಾ ಸೇರಿ ರಾಧಿಕಾ ಪಾತ್ರಕ್ಕೆ ನನ್ನ ಅಗತ್ಯ ಮುಗಿದಿದೆ. ಇನ್ಯಾರೋ ಹೊಸಬರು ಆ ಪಾತ್ರಕ್ಕೆ ಜೀವ ತುಂಬಬಲ್ಲರು ಅನ್ನೋ ಅನಿಸಿಕೆ ಎಲ್ಲರಿಗೂ ಬಂತು. ಹಾಗಾಗಿ ನಾನು ಸೀರಿಯಲ್‌ನಿಂದ ಹೊರ ಬಂದೆ ಎಂದ ನಟಿ.
Image credits: social media
Kannada
ಇನ್ನು ಮುಂದೇನೂ ನೋಡ್ತೀರಿ
ಇರ್ಲಿ ಇನ್ನೊಂದು ಪಾತ್ರ ಬರುತ್ತೆ. ಕಳೆದ ಇಪ್ಪತ್ತು ವರ್ಷಗಳಿಂದ ನನ್ನ ನೋಡ್ತಾ ಇದ್ದೀರಾ… ಇನ್ನು ಮುಂದೇನೂ ನೋಡ್ತೀರಾ ಎಂದು ನಟಿ ಕಾವ್ಯಾ ಶಾಸ್ತ್ರಿ ಅಭಿಮಾನಿಗಳಿಗೆ ಉತ್ತರ ನೀಡಿದ್ದಾರೆ.
Image credits: social media
Kannada
ಕನ್ನಡ, ತಮಿಳು ಸೀರಿಯಲ್
ಕನ್ನಡ ಸಿನಿಮಾ ಮತ್ತು ಹಲವಾರು ಸೀರಿಯಲ್‌ಗಳಲ್ಲಿ ನಟಿಸಿದ್ದ ಕಾವ್ಯಾ ಹಲವಾರು ತಮಿಳು ಸೀರಿಯಲ್‌ಗಳಲ್ಲೂ ನಟಿಸಿ, ಅಲ್ಲೂ ಸಹ ಜನಪ್ರಿಯತೆ ಪಡೆದಿದ್ದಾರೆ.