ಹಿಂದೂ ಗೀತೆ ಹಾಡಿದ್ದಕ್ಕೆ ಝಡ್​ ಪ್ಲಸ್​ ರೀತಿ ಭದ್ರತೆ ಕೊಡ್ಬೇಕಾಯ್ತು: ಕರಾಳ ದಿನ ನೆನೆದ ಸುಹಾನಾ ಸೈಯದ್​

Published : Apr 09, 2026, 10:02 PM IST

ಸರಿಗಮಪ ಶೋನಲ್ಲಿ 'ಶ್ರೀಕರನೇ ಶ್ರೀನಿವಾಸನೇ' ಹಾಡಿ ವಿವಾದಕ್ಕೆ ಗುರಿಯಾಗಿದ್ದ ಗಾಯಕಿ ಸುಹಾನಾ ಸೈಯದ್, ತಮಗೆ ಝಡ್​ಪ್ಲಸ್​ ಮಾದರಿ ಭದ್ರತೆ ನೀಡಿದ್ದ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 15 ವರ್ಷಗಳ ಕಾಲ ಪ್ರೀತಿಸಿದ್ದ ನಿತಿನ್ ಶಿವಾಂಶ್ ಜೊತೆ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ವಿವಾಹವಾಗಿದ್ದಾರೆ.

PREV
16
ಶ್ರೀಕರನೇ ಶ್ರೀನಿವಾಸನೇ ಹಾಡಿನ ಕಾಂಟ್ರವರ್ಸಿ

ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಶ್ರೀಕರನೇ ಶ್ರೀನಿವಾಸನೇ ಎಂದು ಹಾಡಿ ಕಲಾಭಿಮಾನಿಗಳ ಮನಸ್ಸು ಕದ್ದಿದ್ದ ಮುಸ್ಲಿಂ ಯುವತಿ ಸುಹಾನಾ ಸೈಯದ್ 4 ತಿಂಗಳ ಹಿಂದೆ ನಿತಿನ್ ಶಿವಾಂಶ್ ಎಂಬುವವರ ಜೊತೆ ಮದುವೆಯಾಗಿದ್ದಾರೆ. 15 ವರ್ಷಗಳ ಕಾಲ ಪ್ರೀತಿಸಿದ್ದ ಜೋಡಿ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆ ಆಗಿದ್ದಾರೆ. ಇದೀಗ ಹಿಂದೂ ಗೀತೆಯನ್ನು ಹಾಡಿದ್ದಕ್ಕೆ ತಾವು ಎದುರಿಸಿದ ಕರಾಳ ದಿನಗಳ ಬಗ್ಗೆ Keerthi ENT Clinic ಯೂಟ್ಯೂಬ್ ಚಾನಲ್ ಷೋನಲ್ಲಿ ಮಾತನಾಡಿದ್ದಾರೆ ಸುಹಾನಾ.

26
ಹಿಂದೂ ಗೀತೆ ಹಾಡಿದ್ದಕ್ಕೆ...

. 'ಶ್ರೀಕಾರನೇ' ಹಾಗೂ 'ನೀನೆ ರಾಮ ನೀನೆ ಶ್ಯಾಮ' ಹಾಡುಗಳನ್ನು ಹಾಡಿದ್ದಕ್ಕೆ ಆಗ ಸುಹಾನಾ, ಮುಸ್ಲಿಂ ಮೌಲ್ವಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸುಹಾನಾ ಗಾಯಕಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ತಮ್ಮ ಬೋಲ್ಡ್ ಲುಕ್ಸ್ ಹಾಗೂ ಡೊಂಟ್ ಕೇರ್ ಸ್ವಭಾವದ ಮೂಲಕ ಅವರು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದರೆ ಆಗ ಅದೆಷ್ಟು ಘೋರ ದಿನಗಳಾಗಿದ್ದವು ಎಂದರೆ, ವಿವಿಐಪಿಗಳಿಗೆ ನೀಡುವ ಝಡ್​ಪ್ಲಸ್​ ರೀತಿಯಲ್ಲಿ ತಮಗೆ ಭದ್ರತೆ ನೀಡಲಾಗಿತ್ತು ಎಂದಿದ್ದಾರೆ.

36
ಇಂಟರ್​ಕಾಮ್​ ವ್ಯವಸ್ಥೆ

ಮನೆಗೆ ಸಿಕ್ಕಾಪಟ್ಟೆ ಭದ್ರತೆ ನೀಡಲಾಗಿತ್ತು. ಪೊಲೀಸರು ಕಾವಲು ಇರುತ್ತಿದ್ದರು. ಇಂಟರ್​ಕಾಮ್​ ವ್ಯವಸ್ಥೆ ಮಾಡಲಾಗಿತ್ತು. ಯಾರಾದರೂ ಮನೆಗೆ ಬಂದು ಡೋರ್​ ನಾಕ್​ ಮಾಡಿದ್ರೆ, ರಿಸೆಪ್ಷನ್​ಗೆ ಕಾಲ್​ ಮಾಡಿ ಯಾರೋ ಡೋರ್​ ಬಡೀತಾ ಇದ್ದಾರೆ ಯಾರು ಅಂತ ನೋಡಿ ಅನ್ನಬೇಕಿತ್ತು. ಆಗ ಅವರು ಸಿಸಿಟಿವಿಯಲ್ಲಿ ನೋಡಿ, ನನಗೆ ಹೇಳ್ತಾ ಇದ್ದರು. ಆ ಬಳಿಕ ನಾನು ಬಾಗಿಲು ತೆರೆಯಬೇಕಿತ್ತು. ಅಂಥ ಸ್ಥಿತಿ ಬಂದಿತ್ತು ಎಂದಿದ್ದಾರೆ.

46
ಭದ್ರತೆ ವ್ಯವಸ್ಥೆ

ಆಗ ನನಗೆ 20 ವರ್ಷ ವಯಸ್ಸು. ಇಷ್ಟೆಲ್ಲಾ ಸಮಸ್ಯೆ ನಡುವೆ ನನಗೆ ಒಳ್ಳೆ ಜನಪ್ರಿಯತೆ ಸಿಕ್ಕಿತ್ತು. ಸಚಿವರು ಕೂಡ ಭದ್ರತೆ ಕೊಡುವ ಭರವಸೆ ಕೊಟ್ಟಿದ್ರು ಎಂದಿದ್ದಾರೆ. ಆಗ ಜೀ ಕನ್ನಡದ ಕಡೆಯಿಂದ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ರು.. ನನ್ನ ರೂಮ್ ಅಕ್ಕ ಪಕ್ಕದ ರೂಮ್‌ನಲ್ಲಿ ಪೊಲೀಸರು ಇರುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

56
ನಿತಿನ್ ಶಿವಾಂಶ್ ಯಾರು?

ಅಂದಹಾಗೆ, ಸುಹಾನಾ ಪತಿ ಕಲಾವಿದ ನಿತಿನ್ ಶಿವಾಂಶ್. ಪ್ರಸಿದ್ಧ ರಂಗ ತರಬೇತಿ ಕೇಂದ್ರ ನೀನಾಸಂನಲ್ಲಿ ತರಬೇತಿ ಪಡೆದಿರುವ ನಿತಿನ್ ಹಾಗೂ ಸುಹಾನಾ ಕಳೆದ 16 ವರ್ಷಗಳಿಂದ ಪರಸ್ಪರ ಒಡನಾಟ ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಪ್ರೇರಕವಾಗಿದೆ.

66
ಪ್ರತಿ ಜೀವಿಯ ಅನ್ವೇಷಣೆ

ಪ್ರತಿ ಜೀವಿಯ ಅನ್ವೇಷಣೆ ಪ್ರೇಮಕ್ಕಾಗಿಯೇ, ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ........ ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು.. ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ.. ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.. ನಿಮ್ಮ ಆಶೀರ್ವಾದವಿರಲಿ ಎಂದು ಸುಹಾನಾ ಮದುವೆ ಸಂದರ್ಭದಲ್ಲಿ ಪೋಸ್ಟ್​ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories