'ದೃಷ್ಟಿ ಹಾಕ್ಬೇಡಿʼ-ರಾಶಿ ರಾಶಿ ಗೋಲ್ಡ್‌ ಕಲೆಕ್ಷನ್‌ ತೋರಿಸಿದ ಕನ್ನಡ ಯುಟ್ಯೂಬರ್‌ ಮಧು ಗೌಡ; ಹೌಹಾರಿದ ವೀಕ್ಷಕರು

Published : Apr 09, 2026, 09:56 PM IST

Kannada Youtuber Madhu Gowda: ಈಗ ಬಹುತೇಕ ಯುಟ್ಯೂಬರ್‌ಗಳು ಖಾಸಗಿ ವಿಷಯ, ರಹಸ್ಯವಾಗಿಡಬೇಕು ಎಂದು ಯೋಚನೆ ಮಾಡದೆ ಈಗ ಎಲ್ಲವನ್ನು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡ್ತಾರೆ. ಈಗ ಮಧು ಗೌಡ ಅವರು ತಮ್ಮ ಬಳಿ ಇರುವ ಗೋಲ್ಡ್‌ ಕಲೆಕ್ಷನ್‌ ವಿಡಿಯೋವನ್ನು ಅಪ್‌ಲೋಡ್‌ ಮಾಡಿದ್ದಾರೆ. 

PREV
15
ಬಳೆ ಮಾಡಿಸಿದ್ರು

ಜೀವನದಲ್ಲಿ ಫಸ್ಟ್‌ ಟೈಮ್‌ ನಾನು ಗೋಲ್ಡ್‌ ತಗೊಂಡಿದ್ದು ಬಳೆ. ಬಳೆಯನ್ನು ರೆಡಿ ಮಾಡಿಸಿದ್ದೆ. ನಾನು ಅಂದುಕೊಂಡ ಹಾಗೆ ಬಂದಿಲ್ಲ ಎಂದು ಮಧು ಗೌಡ ಅವರು ಹೇಳಿದ್ದಾರೆ.

25
ಎಷ್ಟೋ ಆಭರಣ ಹಾಕಿಲ್ಲ

ಚೋಕರ್‌ನ್ನು ಕೂಡ ಹೆಚ್ಚಿಗೆ ಹಾಕಿಲ್ಲ. ಮದುವೆಗೋಸ್ಕರ ಚೋಕರ್‌, ಲಾಂಗ್‌ ನಕ್ಲೇಸ್‌ನ್ನು ಕೂಡ ಖರೀದಿ ಮಾಡಿದ್ದೆವು. ಜನ್ಮದಿನಕ್ಕೋಸ್ಕರ ನಿಖಿಲ್‌ ನನಗೆ ರಿಂಗ್‌ ಕೊಡಿಸಿದ್ದರು. ಇನ್ನು ಡೈಮೆಂಡ್‌ ರಿಂಗ್‌, ನಕ್ಲೇಸ್‌ ಕೂಡ ಇದೆಯಂತೆ.

35
ಏನೇನು ಇವೆ?

ಒಟ್ಟಿನಲ್ಲಿ ಬಳೆ, ಸರ, ಕಿವಿ ರಿಂಗ್‌, ಉಂಗುರ ರಿಂಗ್‌, ನಕ್ಲೇಸ್ ಎಂದು ಮಧು ಗೌಡ ಅವರು ಒಂದಿಷ್ಟು ಕಲೆಕ್ಷನ್‌ಗಳನ್ನು ತೋರಿಸಿದ್ದಾರೆ. ಇದರಲ್ಲಿ ಎಷ್ಟೋ ಆಭರಣವನ್ನು ಅವರು ಹಾಕಿಕೊಂಡೇ ಇಲ್ವಂತೆ.

45
ತಾಳಿ ಸರ ಎಷ್ಟು ಗ್ರಾಂ ಇದೆ?

ಈ ಕಲೆಕ್ಷನ್‌ ನೋಡಿ ಅನೇಕರು ಹೌಹಾರಿದ್ದಾರೆ. ಮದುವೆ ಚೈನ್‌ ತಾಳಿಯೇ 55 ಗ್ರಾಂ ಇದೆಯಂತೆ. ಈ ಡಿಸೈನ್‌ಗೆ ಭಾರೀ ಡಿಮ್ಯಾಂಡ್‌ ಇದೆಯಂತೆ.

55
ವೀಕ್ಷಕರು ಬೇಸರ

ನಮ್ಮ ಬಳಿ ಇಷ್ಟು ಆರ್ಟಿಫಿಶಿಯಲ್‌ ಆಭರಣ ಕೂಡ ಇಲ್ಲ ಎಂದು ಅನೇಕರು ಬೇಸರ ಹೊರಹಾಕಿದ್ದಾರೆ. ಈ ರೀತಿ ಗೋಲ್ಡ್‌ ಕಲೆಕ್ಷನ್‌ ವಿಡಿಯೋ ಮಾಡಿದ್ರೆ ದೃಷ್ಟಿ ಆಗಬಹುದು ಎಂದು ಹೇಳುತ್ತಾರೆ. ಹೀಗಿದ್ದರೂ ಕೂಡ ವಿಡಿಯೋ ಮಾಡಿ ಅಪ್‌ಲೋಡ್‌ ಮಾಡಿದ್ದಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories