ಉದ್ದ ಕೂದಲಿದ್ದರೂ ಎಷ್ಟು ಸಿಂಪಲ್ ನೋಡಿ ನಿವೇದಿತಾ ಗೌಡ ಹೇರ್‌ಸ್ಟೈಲ್!

First Published | Jul 5, 2022, 2:49 PM IST

ನಿವೇದಿತಾ ಗೌಡ ಸ್ಟೈಲಿಂಗ್‌ಗೆ ಫಿದಾ ಆದ ನೆಟ್ಟಿಗರು.  ಉದ್ದ ಕೂದಲೆಂದು ಕೊರಗುವುದು ಬೇಡ..... 
 

ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ತಮ್ಮ ಡಿಫರೆಂಟ್ ಹೇರ್‌ ಸ್ಟೈಲ್‌ ಮತ್ತು ಔಟ್‌ಫಿಟ್‌ ಮೂಲಕ ವೀಕ್ಷಕರ ಗಮನ ಸೆಳೆದಿದ್ದಾರೆ. 

ಬಿಗ್ ಬಾಸ್‌ ರಿಯಾಲಿಟಿ ಶೋ, ರಾಜ ರಾಣಿ ರಿಯಾಲಿಟಿ ಶೋ ಹಾಗೂ ಮತ್ತು ಗಿಚ್ಚಿ ಗಿಲಿಗಿಲಿ ಶೋನಲ್ಲಿ ಸ್ಪರ್ಧಿಸಿರುವ ನಿವಿ ಪ್ರತಿ ಸಲವೂ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. 

Tap to resize

ಗೌನ್ ಧರಿಸುವುದಕ್ಕೆ ಮಾತ್ರ ಬಾರ್ಬಿ ಎಂದು ಕರೆಸಿಕೊಂಡಿಲ್ಲ ಆಕೆಯ ಉದ್ದ ಕೂದಲು, ಅದನ್ನು ಸ್ಟೈಲ್ ಮಾಡುವ ರೀತಿಗೆ ಎಂದರೆ ತಪ್ಪಾಗದು.

ಉದ್ದ ಕೂದಲಿದ್ದರೆ ಕಿರಿಕಿರಿ ಮಾಡಿಕೊಳ್ಳುವ ಜನರು ನಿವಿ ನೋಡಿ ವಾವ್ ನಮಗೂ ಇಷ್ಟೇ ಉದ್ದ ಕೂದಲು ಇರಬೇಕು ಎಂದ ಕಾಮೆಂಟ್ ಕೂಡ ಮಾಡಿದ್ದಾರೆ. 

 ಉದ್ದ ಕೂದಲು ಇದ್ದರೆ ಹೇಗೆಲ್ಲಾ ಹೇರ್‌ಸ್ಟೈಲ್ ಮಾಡಿಕೊಳ್ಳಬಹುದು ಎಂದು ನಿವಿ ತೋರಿಸಿದ್ದಾರೆ. ಒಂದು ಸಲ ಲೂಸ್ ಹೇರ್, ಒಂದು ಸಲ ಟೈಟ್ ಬನ್ ಮತ್ತೊಂದು ಸಲ ಫ್ರೆಂಚ್ ಸ್ಟೈಲ್.

ಇತ್ತೀಚಿಗೆ ಯೂಟ್ಯೂಬ್ ಲೋಕಕ್ಕೆ ಕಾಲಿಟ್ಟಿರುವ ನಿವಿ ಬ್ಯೂಟಿಷಿಯನ್ ಸಹಾಯದಿಂದ ಸುಲಭವಾಗಿ ಮಾಡಿಕೊಳ್ಳಬಹುದಾದ 5 ಹೇರ್‌ ಸ್ಟೈಲ್‌ನಲ್ಲಿ ತೋರಿಸಿಕೊಟ್ಟಿದ್ದಾರೆ. 

 ನಿವಿ ಯಾವ ಕೂದಲ ಎಣ್ಣೆ ಬಳಸುತ್ತಾರೆ, ಏನೆಲ್ಲಾ ಹೇರ್‌ ಮಾಸ್ಕ್‌ ಬಳಸುತ್ತಾರೆ, ಬಳಸುವ ಬಾಚಣಿಗೆ ಹೇಗಿದೆ ಎಂದೆಲ್ಲಾ ಜನರಿಗೆ ತೋರಿಸಿಕೊಟ್ಟಿದ್ದಾರೆ. 

Latest Videos

click me!