ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ನಟಿ ಮಾನಸ ಜೋಶಿ

First Published | Jul 4, 2022, 3:59 PM IST

 ಸಿಂಪಲ್ ಫೋಟೋಶೂಟ್‌ ಮೂಲಕ ಜೀವನದ ಹೊಸ ಫೇಸ್‌ ಆರಂಭವಾಗುತ್ತಿರುವುದರ ಬಗ್ಗೆ ರಿವೀಲ್ ಮಾಡಿದ ಕಿರುತೆರೆ ಮಹಾದೇವಿ....

ಮಹಾದೇವಿ, ಮಂಗಳ ಗೌರಿ ಮದುವೆ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡ ನಟಿ ಮಾನಸ ಜೋಶಿ.

 ಮಾನಸ ಜೋಶಿ ಮತ್ತು ಪತಿ ಸಂಕರ್ಷಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 'ಜೀವನದ ಹೊಸ ಫೇಸ್‌ಗೆ ಹೆಜ್ಜೆ ಇಡುತ್ತಿರುವೆ. We are Pregnant' ಎಂದು ಬರೆದುಕೊಂಡಿದ್ದಾರೆ. 

Tap to resize

2015ರಲ್ಲಿ ಮಾನಸ ಮತ್ತು ಸಂಕರ್ಷಣ ಡಿಸೆಂಬರ್‌ ತಿಂಗಳಿನಲ್ಲಿ ಬೆಂಗಳೂರಿನ ದೇಗುಲದಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 

ಕೆಂಪು ಮತ್ತು ಕಪ್ಪು ಬಣ್ಣದ ಸೀರಿಯಲ್ಲಿ ಮಾನಸ, ಪಿಂಕ್ ಜುಬ್ಬಾದಲ್ಲಿ ಸಂಕರ್ಷಣ ಕಾಣಿಸಿಕೊಂಡಿದ್ದಾರೆ.  ಕೆಂದು ಬ್ಯಾಗ್ರೌಂಡ್‌ನಲ್ಲಿ ಈ ಫೋಟೋ ಕ್ಲಿಕ್ ಮಾಡಿರುವುದಕ್ಕೆ ಡಿಫರೆಂಟ್‌ ಲುಕ್ ಕೊಟ್ಟಿದೆ. 

ಫೋಟೋದ ಮತ್ತೊಂದು ವಿಶೇಷತೆ ಏನೆಂದರೆ, ಸಂಕರ್ಷಣ ಗರ್ಭಿಣಿ ರೀತಿ ಹೊಟ್ಟೆ ಬಂದಂತೆ ಕಾಣಿಸಿಕೊಂಡಿರುವುದು. ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

ಧಾರಾವಾಹಿ ಮಾತ್ರವಲ್ಲ ಬೆಳ್ಳಿ ತೆರೆಯಲ್ಲೂ ಮಾನಸ ಮಿಂಚಿದ್ದಾರೆ.  ಲಾಸ್ಟ್‌ ಬಸ್, ಅಮೃತ ಅಪಾರ್ಟ್‌ಮೆಂಟ್ಸ್‌, ಯಶೋಗಾಥೆ, ಹರಿವು, ಹಜ್, ಕಿರುಗೂರಿನ ಗಯ್ಯಾಳಿಗಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Latest Videos

click me!