ಮೇಡಮ್ಮೋರಿಗೆ ಐ ಲವ್ ಯೂ ಎಂದೇ ಬಿಟ್ರು ಸಿದ್ದೇಗೌಡ್ರು... ಕೊನೆಗೂ ಸಿದ್ದು ಪ್ರೀತೀನಾ ಒಪ್ಪಿಕೊಂಡ್ರ ಭಾವನಾ !
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಕೊನೆಗೂ ನಮ್ ಲವರ್ ಬಾಯ್ ಸಿದ್ದೇ ಗೌಡ್ರು, ಭಾವನಾಗೆ ಐ ಲವ್ ಯೂ ಎಂದು ಹೇಳಿಯೇ ಬಿಟ್ಟರು. ಅದನ್ನ ಭಾವನಾ ಮೇಡಂ ಒಪ್ಪಿಕೊಂಡಿರೋದೆ ಖುಷಿಯ ವಿಚಾರ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಕೊನೆಗೂ ನಮ್ ಲವರ್ ಬಾಯ್ ಸಿದ್ದೇ ಗೌಡ್ರು, ಭಾವನಾಗೆ ಐ ಲವ್ ಯೂ ಎಂದು ಹೇಳಿಯೇ ಬಿಟ್ಟರು. ಅದನ್ನ ಭಾವನಾ ಮೇಡಂ ಒಪ್ಪಿಕೊಂಡಿರೋದೆ ಖುಷಿಯ ವಿಚಾರ.
ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಸದ್ಯ ಶ್ರೀಲಂಕಾ ಎಪಿಸೋಡ್ ಗಳು ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಒಂದು ಕಡೆ ಜಾನು ಮತ್ತು ಜಯಂತ್ ನಡುವಿನ ಸಂಘರ್ಷಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಸಿದ್ದು ಮತ್ತು ಭಾವನಾ ಪ್ರೀತಿಯ ಮಾತುಕತೆ ನಡೆಯುತ್ತಿದೆ.
ಈ ಮೊದಲು ಸೀರಿಯಲ್ ನಲ್ಲಿ ತೋರಿಸಿರುವಂತೆ, ಭಾವನಾ ತಾಳಿಯನ್ನು ಕಳೆದುಕೊಂಡಿದ್ದು, ಅದನ್ನು ಹುಡುಕಿ ಸಿದ್ದು ತಂದುಕೊಟ್ಟಾಗ, ಅಮ್ಮ ಹೇಳಿದಂತೆ, ಅದನ್ನು ಸಿದ್ಧು ಕೈಯಲ್ಲೇ ತನ್ನ ಕುತ್ತಿಗೆಗೆ ಹಾಕಿಸಿಕೊಂಡಿದ್ದಳು ಭಾವನಾ, ಇದರಿಂದ ಸಿದ್ಧು ಸಿಕ್ಕಾಪಟ್ಟೆ ಖುಷಿಪಟ್ಟಿದ್ದರು.
ಇತ್ತೀಚಿನ ದಿನಗಳಲ್ಲಿ ಭಾವನಾ ಮತ್ತು ಸಿದ್ದೇ ಗೌಡ್ರ (Bhavana Sidde Gowda)ನಡುವಿನ ಅಂತರ ಕಡಿಮೆಯಾಗುತ್ತಿದೆ. ಸಿದ್ದು ಅಂದ್ರೆ ಮೂಗು ಮುರಿಯುತ್ತಿದ್ದ ಭಾವನಾ ನಿಧಾನವಾಗಿ ಸಿದ್ದೇ ಗೌಡರತ್ತ ವಾಲುತ್ತಿದ್ದಾಳೆ. ಅದಕ್ಕೆ ಈ ಶ್ರೀಲಂಕಾ ಹನಿಮೂನ್ ಟೂರ್ ಮತ್ತಷ್ಟು ಸಹಾಯ ಮಾಡಿದ್ದು, ಇಬ್ಬರ ನಡುವಿನ ಅಂತರ ಕಡಿಮೆಯಾಗಿ, ಇಬ್ಬರು ಜೊತೆಯಾಗಿದ್ದಾರೆ.
ಇದೀಗ ಶ್ರೀಲಂಕಾದ( Srilanka) ಸುಂದರ ಪ್ರದೇಶಗಳಲ್ಲಿ ಸುತ್ತಾಡುತ್ತಾ, ಸಿದ್ದೇ ಗೌಡ್ರು, ಕೊನೆಗೂ ತಮ್ಮ ಮನದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಭಾವನಾ ಬಳಿ ಕೂಗಿ ಐ ಲವ್ ಯೂ ಭಾವನಾ ಮೇಡಂ ಎಂದಿದ್ದಾನೆ. ಇದನ್ನು ಕೇಳಿ ಭಾವನಾ ಕೂಡ ನಾಚಿ ನೀರಾಗಿದ್ದಾಳೆ.
ತಾನು ಐ ಲವ್ ಯೂ ಹೇಳಿದ್ರು ಸುಮ್ಮನಿರುವ ಭಾವನಾ ಬಳಿ ಹೋಗುವ ಸಿದ್ದು, ಇದೇನು ಮೇಡಂ, ನಾನು ನನ್ನ ಮನಸ್ಸಲ್ಲಿರುವ ಪ್ರೀತಿಯನ್ನು ಇಷ್ಟು ಜೋರಾಗಿ ಹೇಳ್ತಿದ್ರೆ , ನೀವ್ಯಾಕೆ ಸುಮ್ಮನಿದ್ದೀರಿ ಎಂದು ಕೇಳುತ್ತಾನೆ. ಅದಕ್ಕೆ ಭಾವನಾ ನಾಚುತ್ತಲೇ ಕೈಯಲ್ಲಿ ಹೃದಯ ಮಾಡಿ ಸಿದ್ದೇಗೌಡ್ರಿಗೆ ತೋರಿಸಿದ್ದಾಳೆ.
ಇವರಿಬ್ಬರ ಸುಂದರವಾದ ಪ್ರೇಮಕಾವ್ಯವನ್ನು ಒಂದು ಸುಂದರವಾದ ರೊಮ್ಯಾಂಟಿಕ್ ಹಾಡಿನ (romantic song) ಮೂಲಕ ಪ್ರಸ್ತುತ ಪಡಿಸಿದ್ದು, ಈ ಮುದ್ದಾದ ಜೋಡಿಯ ಪ್ರೀತಿಯ ಕ್ಷಣಗಳನ್ನು ಅಭಿಮಾನಿಗಳು, ವೀಕ್ಷಕರು ಇಷ್ಟಪಟ್ಟಿದ್ದಾರೆ. ಇದು ನಿಜವಾಗಿಯೇ ಇರಲಿ, ಕನಸಾಗದೇ ಇರಲಿ ಎಂದು ಬೇಡಿಕೊಂಡಿದ್ದಾರೆ.
ಅಷ್ಟೇ ಅಲ್ಲ ಈ ಮುದ್ದಾದ ಜೋಡಿಯನ್ನು ನೋಡಿ ಸದಾ ಹೀಗೆ ನಗುನಗುತ್ತಾ ಖುಷಿಯಾಗಿರಲಿ ಈ ಜೋಡಿ, ಸೂಪರ್ ಆಗಿದೆ ಈ ಸೀನ್ ಅಂತೂ ತುಂಬಾ ಇಷ್ಟ ಆಯ್ತು, ಕೊನೆಗೆ ಕನಸ್ಸು ಕಾಣ್ತಾ ಇದ್ದರೂ ಅಂತ ಹೇಳಬೇಡಿ ಡೈರೆಕ್ಟ್ sir , ಇವರ ಜೋಡಿಗೆ ಯಾವ ದೃಷಿ ಬೀಳದೇ ಇರಪ್ಪ, ಭಾವನಾ ಎಷ್ಟು ಕ್ಯುಟ ಆಗಿ ಮುದ್ದಾಗಿ ಕಾಣುತ್ತಿದ್ದಾರೆ ಎಂದು ಕಾಮೆಂಟ್ ಮೂಲಕ ತಿಳಿಸಿದಾರೆ.