ವಾವ್! ಸೀರೆಲಿ ಎಷ್ಟು ಮುದ್ದು ಮುದ್ದಾಗಿ ಕಾಣಿಸ್ತಿದ್ದಾರೆ ನಿವೇದಿತಾ ಗೌಡ
ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ ಮಿನಿ ಸ್ಕರ್ಟ್, ಡ್ರೆಸ್ ಬಿಟ್ಟು ಮುದ್ದಾಗಿ ಸೀರೆಯುಟ್ಟು ಪೋಸ್ ಕೊಟ್ಟಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಇವರ ಅಂದವನ್ನು ಹೋಗಳುತ್ತಾ ಕಳೆದು ಹೋಗಿದ್ದಾರೆ ಪಡ್ಡೆ ಹುಡುಗರು.
ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ ಮಿನಿ ಸ್ಕರ್ಟ್, ಡ್ರೆಸ್ ಬಿಟ್ಟು ಮುದ್ದಾಗಿ ಸೀರೆಯುಟ್ಟು ಪೋಸ್ ಕೊಟ್ಟಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಇವರ ಅಂದವನ್ನು ಹೋಗಳುತ್ತಾ ಕಳೆದು ಹೋಗಿದ್ದಾರೆ ಪಡ್ಡೆ ಹುಡುಗರು.
ಕನ್ನಡ ಬಿಗ್ ಬಾಸ್ ಮೂಲಕ ಜನಪ್ರಿಯತೆ ಗಳಿಸಿದ ಬೆಡಗಿ ನಿವೇದಿತಾ ಗೌಡ (Niveditha Gowda), ಬಳಿಕ ತಮ್ಮ ರೀಲ್ಸ್ ಗಳಿಂದಾಗಿ ಜನಮನ ಗೆದ್ದರು. ನಿವೇದಿತಾ ದಿನಕ್ಕೊಂದು ರೀಲ್ಸ್ ಮಾಡುತ್ತಾ, ಟ್ರೋಲ್ ಗಳಿಗೆ ಆಹಾರವಾಗುತ್ತಿರುತ್ತಾರೆ.
ಅದರಲ್ಲೂ ನಿವೇದಿತಾ ಡ್ರೆಸ್ಸಿಂಗ್ ಸ್ಟೈಲ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತಾರೆ. ಹೆಚ್ಚಾಗಿ ಮಿನಿ ಸ್ಕರ್ಟ್, ಶಾರ್ಟ್ ಡ್ರೆಸ್ ಧರಿಸಿ, ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದರು, ಅಷ್ಟೇ ಬೋಲ್ಡ್ ಆಗಿ ಡ್ಯಾನ್ಸ್ ರೀಲ್ಸ್ (Dance reels) ಕೂಡ ಮಾಡುತ್ತಿದ್ದರು. ಹಾಗಾಗಿ ಟ್ರೋಲಿಗರಿಗೆ ಆಹಾರ ಕೂಡ ಆಗುತ್ತಿದ್ದರು.
ಯಾವುದೇ ಟ್ರೋಲ್ ಗಳಿಗೆ, ಕಾಮೆಂಟ್ ಗಳಿಗೆ ತಲೆ ಕೆಡಿಸಿಕೊಳ್ಳದ ನಿವೇದಿತಾ ಗೌಡ, ತಮಗೆ ಏನು ಇಷ್ಟ ಇದೆಯೋ, ಅದನ್ನೇ ಮಾಡುತ್ತೇನೆ, ಎನ್ನುತ್ತಾ, ತಮಗೆ ಬೇಕಾದ ಡ್ರೆಸ್, ಡ್ಯಾನ್ಸ್ ಮಾಡುತ್ತಾ, ಪಡ್ಡೆಗಳ ನಿದ್ದೆ ಕೆಡಿಸುತ್ತಿರುತ್ತಾರೆ.
ಇದೀಗ ಕೊಂಚ ಡಿಫರೆಂಟ್ ಎನ್ನುವಂತೆ ನಿವೇದಿತಾ ಗೌಡ, ಸೀರೆಯುಟ್ಟು (Niveditha Gowda in Saree) ಫೋಟೊ ಶೂಟ್ ಮಾಡಿಸಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಸಿಂಪಲ್ ಆಗಿರುವ ಈ ಲುಕ್ ಜನರಿಗೆ ಸಖತ್ ಇಷ್ಟವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಿವೇದಿತಾ, ಫೋಟೊ ಶೇರ್ ಮಾಡುವ ಮುನ್ನ ಇದೇ ಸೀರೆಯಲ್ಲಿ ರೀಲ್ಸ್ ಕೂಡ ಶೇರ್ ಮಾಡಿದ್ದರು. ಒಲವೇ, ಒಲವೇ, ಒಲವೇ.. ಈ ನದಿಗೆ ಕಡಲಾಗಿರುವೆ.. ಎಂಬ ಸುಂದರವಾದ ಹಾಡಿಗೆ ನಿವೇದಿತಾ ಗೌಡ ಅಷ್ಟೇ ಮುದ್ದಾಗಿ ರೀಲ್ಸ್ ಮಾಡಿದ್ದರು.
ನಿವೇದಿತಾ ಬಿಳಿ ಬಣ್ಣದ ಟ್ರಾನ್ಸ್ಪರೆಂಟ್ ಸೀರೆ ಮೇಲೆ , ಕೆಂಪು ಹಳದಿ ಬಣ್ಣದ ಪ್ಲೋರಲ್ ಪ್ರಿಂಟ್ ಇದೆ. ಇದಕ್ಕೆ ಮ್ಯಾಚ್ ಆಗುವಂತೆ ನಿವ್ವಿ, ಕೆಂಪು ಬಣ್ಣದ ಸುಂದರವಾದ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದಾರೆ. ಜೊತೆಗೆ ಪುಟ್ಟದಾದ ಬಿಂದಿ ಕೂಡ ಇಟ್ಟಿದ್ದಾರೆ. ಈ ಲುಕ್ ನಲ್ಲಿ ನಿವೇದಿತಾ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ.
ನಿವೇದಿತಾ ಗೌಡ ಈ ಲುಕ್ ನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಮುದ್ದು ಗೊಂಬೆ, ಮುದ್ದು ರಾಜಕುಮಾರಿ, ಡಾರ್ಲಿಂಗ್, ವೈಟ್ ಬ್ಯೂಟಿ, ದೇವಲೋಕ ದಿಂದ ಬಂದ್ರ, ತುಂಬ ಸುಂದರವಾಗಿ ಇದ್ದೀರ, ಸುಂದರವಾದ ಹೂವಿನಂತೆ ನೀವು ಚೆನ್ನಾಗಿ ಕಾಣಿಸ್ತಿದ್ದೀರಿ ಎಂದಿದ್ದಾರೆ.