ಸಿನಿಮಾ ಸೆಲೆಬ್ರಿಟಿಗಳು ಕಾಂಟ್ರವರ್ಸಿಯಲ್ಲಿ ಸಿಲುಕಿಕೊಳ್ಳುವುದು ತುಂಬಾನೇ ಕಾಮನ್. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಕಾಂಟ್ರವರ್ಸಿಸಿ ಮಾಡಿಕೊಳ್ಳುವುದು ಹೆಚ್ಚಾಗುತ್ತಿದೆ.
ತುಂಬಾ ಸೇಫ್ ಗೇಮ್ ಆಡುವುದು ಕಿರುತೆರೆಯಲ್ಲಿ ಮಿಂಚುವವರು. ಆದರೆ ಈಗ ತೆಲುಗು ಕಿರುತೆರೆ ಖ್ಯಾತ ನಿರೂಪಕಿ ಸುಮಾ ಕನಕಾಲ ಖಾಸಗಿ ಪ್ರಚಾರ ಮಾಡಿ ಕಾಂಟ್ರವರ್ಸಿಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.
ಆಂಧ್ರದ ರಾಜಮಂಡ್ರಿಯಲ್ಲಿ ಇರುವ ರಾಕಿ ಅವೆನ್ಯೂ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮಧ್ಯಮ ವರ್ಗದ ಜನರಿಗೆ ಕಡಿಮೆ ಹಣದಲ್ಲಿ ಅಪಾರ್ಟ್‌ಮೆಂಟ್ ಫ್ಲಾಟ್ ಕೊಡುವುದಾಗಿ ಪ್ರಚಾರ ಮಾಡಿತ್ತು.
ಜಾಹೀರಾತು ನಂಬಿ ಮೋಸ ಹೋಗಿರುವ ಜನರು ಈಗ ನಿರೂಪಕಿ ಸುಮಾ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಸುಮಾರಿಂದ 88 ಕೋಟಿ ರೂಪಾಯಿ ನಷ್ಟವಾಗಿದೆ.
ರಾಕಿ ಅವೆನ್ಯೂ ಸಂಸ್ಥೆ ನಿರ್ಮಿಸಿದ ಫೇಸ್ 1 ಬಿಲ್ಡಿಂಗ್ ನೋಡಿದ್ದೀನಿ ಫೇಸ್ 2 ಕೂಡ ಶೀಘ್ರದಲ್ಲಿ ನಿರ್ಮಾಣವಾಗುತ್ತಿದೆ ಎಂದು ನಿರೂಪಕಿ ಸುಮಾ ಪ್ರಚಾರ ಮಾಡಿದ್ದರು.
ಇದನ್ನು ನಂಬಿ ಜನರು ಹಣ ಕಟ್ಟಿದ್ದರು...ತಲಾ 25 ಲಕ್ಷ ರೂಪಾಯಿಯಂತೆ ತ್ರಿಬಲ್ ಬೆಡ್‌ರೂಂ ಮನೆಗಳಿಗೆ 1 ಕೋಟಿ ರೂ ಕೊಟ್ಟಿರುವುದಾಗಿ ಹೇಳಿದ್ದಾರೆ.
ಸುಮಾ ಮಾತ್ರವದಲ್ಲ ಪತಿ ನಟ ರಾಜು ಕನಕಾಲ ಸಹ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ನಿರೂಪಕಿ ಹೇಳಿದ ಮಾತುಗಳನ್ನು ನಾವು ನಂಬಿ ಮೋಸ ಹೋಗಿದ್ದೀವಿ ಎಂದು ಮನೆ ಬಳಿ ಜನರು ದಾಂಧಲೆ ಎಬ್ಬಿಸುತ್ತಿದ್ದಾರೆ.