ಬ್ಯ್ಲಾಕ್ ಟಾಪ್, ಜೀನ್ಸ್ ಚಡ್ಡಿ ಧರಿಸಿ ಛತ್ರಿ ಹಿಡಿದ ಸೋನು ಗೌಡ: ಮಳೆಯಲಿ ನಿಮ್ಗೆ ಚಳಿ ಆಗಲ್ವ ಎಂದ ನೆಟ್ಟಿಗರು

First Published | Aug 7, 2024, 8:49 PM IST

ಟಿಕ್ ಟಾಕ್ ಮೂಲಕ ಸದ್ದು ಮಾಡಿ ಬಳಿಕ ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಎಲ್ಲರಿಗೂ ಪರಿಚಯವಾದ ಸೋನು ಶ್ರೀನಿವಾಸ್ ಗೌಡ ಇದೀಗ ಗೋವಾದಲ್ಲಿ ಕಾಣಿಸಿಕೊಂಡಿದ್ದು, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಬಿಗ್‌ಬಾಸ್ ಒಟಿಟಿ​ ಸ್ಪರ್ಧಿಯಾಗಿದ್ದ ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಸದಾ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಆಗಾಗ ಫೋಟೋಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ತಾರೆ. ಅವರ ಫೊಟೋಸ್‌ಗಳು ಸಹ ವೈರಲ್ ಆಗುತ್ತವೆ.

ಸೋನು ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ವೆಕೇಷನ್, ಟ್ರಿಪ್ ಸೇರಿದಂತೆ ಹಲವಾರು ಕಂಟೆಂಟ್​ಗಳನ್ನು ಸೋನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಮಳೆಯಲ್ಲಿ ಛತ್ರಿ ಹಿಡಿದು ಸಖತ್ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

Tap to resize

ಸದ್ಯ ಸೋನು ಈಗ ಗೋವಾ ಟ್ರಿಪ್‌ನಲ್ಲಿ ಬ್ಯುಸಿಯಾಗಿದ್ದಾರೆ. ತುಂಡು ಬಟ್ಟೆ ತೊಟ್ಟು ಸಖತ್ ಗ್ಲ್ಯಾಮರಸ್‌ ಆಗಿ ಮಿಂಚಿದ್ದಾರೆ. ಬ್ಯ್ಲಾಕ್ ಟಾಪ್‌ಗೆ ನೀಲಿ ಬಣ್ಣದ ಚಿಕ್ಕದಾದ ಜೀನ್ಸ್ ಚಡ್ಡಿಯನ್ನು ಸೋನು ಧರಿಸಿದ್ದಾರೆ. 
 

ಕಾಲಿಗೆ ಬಿಳಿ ಬಣ್ಣದ ಶೂ ಧರಿಸಿದ್ದು, ಕಣ್ಣಿಗೆ ಕಲರ್‌ಫುಲ್ ಸನ್ ಗ್ಲಾಸ್ ಕಲರ್‌ಫುಲ್ ಹಾಕಿದ್ದಾರೆ. ವಿಶೇಷವಾಗಿ ಕೈಯಲ್ಲಿ ಛತ್ರಿ ಹಿಡಿದು ಕ್ಯಾಮೆರಾಗೆ ತರೇಹವಾರಿ ಪೋಸ್ ಕೊಟ್ಟಿದ್ದಾರೆ.

ನೆಟ್ಟಿಗರು ಸೋನು ಫೋಟೋಸ್ ನೋಡಿ ಲೈಕ್ಸ್ ಕೊಟ್ಟು, ಮಳೆಯಲ್ಲಿ ನಿಮ್ಗೆ ಚಳಿ ಆಗಲ್ವ, ಮಳೆಯಲಿ ಜಾಸ್ತಿ ನೆನಿಬೇಡಿ ನೆಗಡಿ ಆಗುತ್ತೆ, ಚಡ್ಡಿ ಸ್ವಲ್ಪ ದೊಡ್ಡದು ಅಯ್ತು, ಬ್ಯೂಟಿಫುಲ್‌ ಎಂದು ತರೇಹವಾರಿ ಕಮೆಂಟ್ ಮಾಡಿದ್ದಾರೆ.

ನಟ ದರ್ಶನ್ ಪರವಾಗಿ ನಾನು ಮಾತನಾಡಿಲ್ಲ ಎಂದು ಕೆಟ್ಟ, ಕೆಟ್ಟದಾಗಿ ದರ್ಶನ್‌ ಫ್ಯಾನ್ಸ್‌ ಕಮೆಂಟ್ಸ್ ಮಾಡುತ್ತಿದ್ದಾರೆ ಎಂದು ಸೋನು ಗೌಡ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಬೇಸರವನ್ನು ಹೊರ ಹಾಕಿದ್ದರು.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಸೋನು ಗೌಡ ಅವರು 1 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಮಗುವೊಂದನ್ನು ದತ್ತು ಪಡೆದು ಕೇಸ್ ಹಾಕಿಸಿಕೊಂಡು ಪರಪ್ಪನ ಅಗ್ರಹಾರ ಜೈಲಿಗೂ ಹೋಗಿ ಬಂದಿದ್ದಾರೆ.

Latest Videos

click me!