Shweta Tiwari ಬೋಲ್ಡ್‌ ಫೋಟೋ ಶೂಟ್‌; 2 ಮಕ್ಕಳ ತಾಯಿ ಅಂತ ಯಾರೂ ಹೇಳಲ್ಲ!

Published : May 14, 2022, 06:26 PM IST

41 ವರ್ಷದ ಟಿವಿಯ ಅತ್ಯಂತ ಜನಪ್ರಿಯ ನಟಿ ಶ್ವೇತಾ ತಿವಾರಿ (Shweta Tiwari) ತಮ್ಮ  ಲುಕ್‌ ಮತ್ತು ಸ್ಟೈಲಿಯಿಂದ ಎಲ್ಲರನ್ನೂ ಬೆರಗುಗೊಳಿಸುತ್ತಾರೆ. ಇಬ್ಬರು ಮಕ್ಕಳ ತಾಯಿಯಾಗಿದ್ದರೂ, ಶ್ವೇತಾ ತಿವಾರಿ ತಮ್ಮ ಬೋಲ್ಡ್ ಮತ್ತು ಮಾದಕ ನೋಟದಿಂದ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಅವರು ಪ್ರತಿದಿನ ಗ್ಲಾಮರಸ್ ಫೋಟೋಶೂಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಆಕೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅಷ್ಟೇ ಅಲ್ಲ ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.  

PREV
15
Shweta Tiwari ಬೋಲ್ಡ್‌ ಫೋಟೋ ಶೂಟ್‌; 2 ಮಕ್ಕಳ ತಾಯಿ ಅಂತ ಯಾರೂ ಹೇಳಲ್ಲ!

ಶ್ವೇತಾ ತಿವಾರಿ ಹೊಸ ಫೋಟೋಶೂಟ್ ಮಾಡಿದ್ದಾರೆ, ಅವರು ಅದರಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೋಗಳಿಗೆ ಸಾಕಷ್ಟು ಅಭಿಮಾನಿಗಳು ಕಾಮೆಂಟ್ಸ್ ಮಾಡುತ್ತಿದ್ದಾರೆ ಮತ್ತು  ಅವರ ಫೋಟೋಗಳಿಗೆ ಫೀದಾ ಆಗಿದ್ದಾರೆ 

25

ತನ್ನ ಗ್ಲಾಮರಸ್ ಲುಕ್‌ನಿಂದ ಲೈಮ್‌ಲೈಟ್‌ನಲ್ಲಿ ಉಳಿದಿರುವ ಶ್ವೇತಾ ತಿವಾರಿ ತನ್ನ ಇತ್ತೀಚಿನ ಫೋಟೋಶೂಟ್‌ನಲ್ಲಿ ಅದ್ಭುತ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ಫೋಟೋಗಳಲ್ಲಿ, ಅವರು ಗಾಢ ಬಣ್ಣದ ಪಾರದರ್ಶಕ ಉಡುಗೆಯನ್ನು ಧರಿಸಿರುವುದನ್ನು ಕಾಣಬಹುದು. ಇದರೊಂದಿಗೆ ದೊಡ್ಡ ದೊಡ್ಡ ಕಿವಿಯೋಲೆಗಳನ್ನೂ ತೊಟ್ಟಿದ್ದಾರೆ.

35

ಫೋಟೋವೊಂದರಲ್ಲಿ ಶ್ವೇತಾ ತಿವಾರಿ ಕಣ್ಣುಗಳನ್ನು ಬಾಗಿಸಿ ನಗುತ್ತಿರುವುದನ್ನು ಕಾಣಬಹುದು. ಅವರು  ಕೂದಲು ಕಟ್ಟದೆ ಹಾಗೇ ಬಿಟ್ಟಿದ್ದಾರೆ  ಮತ್ತು ಅವರು ನ್ಯೂಡ್ ಮೇಕಪ್ ಹಾಕಿದ್ದಾರೆ. 

45

ಶ್ವೇತಾ ತಿವಾರಿ 21 ವರ್ಷದ ಮಗಳು ಪಾಲಕ್ ತಿವಾರಿಯ ತಾಯಿ. ಆದರೆ ಅವರಸೌಂದರ್ಯದಲ್ಲಿ ಮಗಳಿಗೂ ಸ್ಪರ್ಧೆ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಶ್ವೇತಾ ತಿವಾರಿ ಜೀವನದಲ್ಲಿ ಎರಡು ಮದುವೆಗಳನ್ನು ಮಾಡಿಕೊಂಡಿದ್ದಾರೆ ಆದರೆ ಅವರು ಎರಡೂ ಗಂಡಂದಿರಿಂದ ಬೇರ್ಪಟ್ಟಿದ್ದಾರೆ. ಈಗ ಆಕೆ ತನ್ನ ಇಬ್ಬರು ಮಕ್ಕಳನ್ನು ಒಂಟಿಯಾಗಿ ಬೆಳೆಸುತ್ತಿದ್ದಾರೆ.

55

ಶ್ವೇತಾ ತಿವಾರಿ ಟಿವಿ ಶೋಗಳ ಜೊತೆಗೆ ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಕೆಲವು ಭೋಜ್‌ಪುರಿ ಚಲನಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ.

click me!

Recommended Stories