ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೇ 8ರ ಸಂಜೆ 6 ಗಂಟೆಗೆ ಅಮ್ಮಂದಿರ ದಿನ ಪ್ರಯುಕ್ತ ‘ಅಮ್ಮ ... ಹ್ಯಾಪಿ ಮದರ್ಸ್ ಡೇ’ ಎಂಬ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ.
ಕಿರುತರೆ ಕಲಾವಿದರಲ್ಲದೇ ಹಿರಿತೆರೆಯ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಾಹಿನಿ ಪ್ರೋಮೋ ಹಂಚಿಕೊಂಡಿದೆ.
ಕಾರ್ಯಕ್ರಮದಲ್ಲಿ ಅನು ಪ್ರಭಾಕರ್ (Anu Prabhakar) ಮತ್ತು ಅವರ ತಾಯಿ ಗಾಯತ್ರಿ ಪ್ರಭಾಕರ್ (Gayathri Prabhakar) ತಮ್ಮ ಬಾಂಧವ್ಯ ಹಂಚಿಕೊಂಡಿದ್ದಾರೆ.
ದಿಯಾ (Diya) ಚಿತ್ರದ ನಟಿ ಖುಷಿ (Kushi), ತಮ್ಮ ಮಗಳ ಜೊತೆಯಲ್ಲಿ ವಿಶೇಷ ಡಾನ್ಸ್ ಮಾಡಿದ್ದಾರೆ. ಈ ಕಾರ್ಯಕ್ರಮ ನೋಡಲು ವೀಕ್ಷಕರು ಕಾಯುತ್ತಿದ್ದಾರೆ.
ವಸಿಷ್ಠ ಸಿಂಹ ತಮ್ಮ ತಾಯಿ ನೆನೆದು ಭಾವುಕರಾಗಿದ್ದಾರೆ. ನಟ ಶರಣ್, ನಟಿ ಭವ್ಯ ಮತ್ತು ನಿರ್ದೇಶಕ ಸುನಿ ಕೂಡ ಭಾಗಿಯಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿ ಕಲಾವಿದರು ಕೂಡ ಪಾಲ್ಗೊಂಡಿದ್ದಾರೆ.