ಶ್ರೀರಸ್ತು ಶುಭಮಸ್ತು ಸಿರಿ ರಿಯಲ್ ಗಂಡನ ಜೊತೆ ಫೋಟೋ ನೋಡಿ ಸಿರಿಗನ್ನಡಂ ಗೆಲ್ಗೆ ಅಂತಿರೋದ್ಯಾಕೆ?

First Published | Jul 4, 2024, 5:26 PM IST

ಶ್ರೀರಸ್ತು ಶುಭಮಸ್ತು ಸೀರಿಯಲ್ ನಟಿ ದೀಪಾ ಕಟ್ಟೆ, ತಮ್ಮ ಪತಿಯ ಜೊತೆಗಿನ ಮುದ್ದಾ ಫೋಟೊ ಶೇರ್ ಮಾಡಿದ್ದು, ಅಭಿಮಾನಿಗಳು ಸಿರಿಗನ್ನಡಂ ಗೆಲ್ಗೆ ಎಂದು ಕಾಮೆಂಟ್ ಮಾಡಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲಲ್ಲಿ ಓಡಿ ಹೋದೋಳು ಆಲಿಯಾಸ್ ಸಂಧ್ಯಾ ಆಗಿ ನಟಿಸುತ್ತಿರುವ ನಟಿ ದೀಪಾ ಕಟ್ಟೆ (Deepa Katte), ಸದ್ಯ ಸೀರಿಯಲ್ ನಲ್ಲಿ ಗಂಡನ ಜೊತೆ ಅಮ್ಮನ ಮನೆಗೆ ಬಂದು ಕೂತಿದ್ದಾಳೆ. 
 

ಶ್ರೀರಸ್ತು ಶುಭಮಸ್ತು (Shreerastu Shubhamastu) ಸೀರಿಯಲ್ ನಲ್ಲಿ ದೀಪಾ ಕಟ್ಟೆ, ಯಾವಾಗ್ಲೂ ಸುಳ್ಳು ಹೇಳ್ತಾ, ತನ್ನ ತವರು ಮನೆಯ ಆಸ್ತಿ ಮೇಲೆ ಕಟ್ಟು ಹಾಕ್ಕೊಂಡು, ಸದ್ಯ ಅಲ್ಲೆ ಗಂಡ, ಮಾವನ ಜೊತೆ ಬಂದು ಸೇರಿ ಮನೆಯವ್ರಿಗೆ ಕಷ್ಟ ಕೊಡ್ತಾರೆ. ಇವ್ರನ್ನ ನೋಡಿದ್ರೆ ಬಯ್ಯೋ ವೀಕ್ಷಕರೇ ಜಾಸ್ತಿ. 

Tap to resize

ಆದ್ರೆ ರಿಯಲ್ ಲೈಫಲ್ಲಿ ದೀಪಾ ಕಟ್ಟೆ ತುಂಬಾ ಸ್ವೀಟ್. ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ದೀಪಾ. ಹೆಚ್ಚಾಗಿ ರೀಲ್ಸ್ ಮಾಡುತ್ತಾ, ತಮ್ಮ ಗಂಡನ ಜೊತೆ ಟ್ರಾವೆಲ್ ಮಾಡ್ತಾ, ಗಂಡನ ಜೊತೆ ಫೋಟೋ ಶೇರ್ ಮಾಡ್ತಿರ್ತಾರೆ. 
 

ಇತ್ತೀಚೆಗೆ ದೀಪಾ ತಮ್ಮ ಪತಿ ರಕ್ಷಿತ್ ಯಡಪಡಿತ್ತಾಯ ಜೊತೆ ಹಾಕಿರುವಂತಹ ಒಂದು ಇನ್ಸ್ಟಾಗ್ರಾಂ ಪೋಸ್ಟ್ ಸಖತ್ ವೈರಲ್ ಆಗ್ತಿದೆ. ಇದರಲ್ಲಿ ಗಂಡ -ಹೆಂಡತಿ ಇಬ್ರೂ ಕನ್ನಡತಿ, ಕನ್ನಡಿಗ ಮ್ಯಾಚಿಂಗ್ ಟೀ ಶರ್ಟ್ ಹಾಕ್ಕೊಂಡು ಪೋಸ್ ನೀಡಿದ್ದಾರೆ. 
 

ದೀಪಾ ಮತ್ತು ಅವರ ಪತಿ ರಕ್ಷಿತ್ ಇಬ್ಬರೂ ಸಹ ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದು, ಅದರ ಮೇಲೆ ಹಳದಿ, ಕೆಂಪು ಬಣ್ಣದ ಕನ್ನಡದ ಬಾವುಟದ ಪ್ರಿಂಟ್ ಇದ್ದು, ಅದರ ಮೇಲೆ ದೀಪಾ ಟೀ ಶರ್ಟ್ ಮೇಲೆ ಕನ್ನಡತಿ (Kannadathi) ಎಂದು ಬರೆದ್ರೆ, ರಕ್ಷಿತ್ ಶರ್ಟ್ ಮೇಲೆ ಕನ್ನಡಿಗ ಎಂದು ಪ್ರಿಂಟ್ ಆಗಿದೆ. 
 

ಇಬ್ಬರ ಟ್ವಿನ್ನಿಂಗ್ ಫೋಟೋ ಮತ್ತು ಕನ್ನಡ ಅಭಿಮಾನ ನೋಡಿ, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಿರಿ ಗನ್ನಡಂ ಗೆಲ್ಗೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ನಿಮ್ಮ ಟೀ ಶರ್ಟ್ ಚೆನ್ನಾಗಿದೆ ನಿಮ್ಮ ಜೋಡಿನೂ ಚೆನ್ನಾಗಿದೆ ಎಂದು ಸಹ ಹೇಳಿದ್ದಾರೆ. 
 

ಈ ಹಿಂದೆ ಈ ಜೋಡಿಗಳು ಜೈ ಶ್ರೀ ರಾಮ್ (Jai Shri Ram) ಎಂದು ಬರೆದಿರುವಂತಹ ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ಫೋಟೋ ಪೋಸ್ಟ್ ಮಾಡಿದ್ದರು. ಆವಾಗ್ಲೂ ಜನ ಇವರ ಟೀ ಶರ್ಟ್ ಮತ್ತು ಜೋಡಿ ಫೋಟೊಗೆ ಅಪಾರ ಮೆಚ್ಚುಗೆ ಸೂಚಿಸಿದ್ದರು. 
 

ಕಳೆದ ವರ್ಷ ದೀಪಾ ಮತ್ತು ರಕ್ಷಿತ್ (Rakshith Yadapadithaya) ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿಯದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಇಬ್ಬರು ಕಾಲೇಜಿನಲ್ಲೇ ಸ್ನೇಹಿತರು, ಡೆಸ್ಟಿನಿಯೇ ನಮ್ಮನ್ನು ಜೊತೆಯಾಗುವಂತೆ ಮಾಡಿತು ಎಂದು ಹೇಳುವ ಈ ಜೋಡಿ ಕಾಲೇಜಿನಿಂದ ಹಿಡಿದು, ಕ್ಯಾಂಪಸ್ ಸೆಲೆಕ್ಷನ್, ಕೆಲಸ ಮಾಡಿದ್ದೂ ಜೊತೆಯಾಗಿ ಸದ್ಯ ಮದ್ವೆಯಾಗಿ ಸುಂದರ ವೈವಾಹಿಕ ಜೀವನ ನಡೆಸ್ತಿದ್ದಾರೆ. 
 

Latest Videos

click me!