ಬಿಗ್ ಬಾಸ್ ಸೀಸನ್ 10ರ ಟಫ್ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಮೈಕಲ್ ಬೆಂಗಳೂರಿನಲ್ಲಿ ಬರ್ಗರ್ ಅಂಗಡಿ ತೆರೆದಿದ್ದಾರೆ. ಮೈಕಲ್ ತಾಯಿ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ.
ಅಂಗಡಿ ಗ್ರ್ಯಾಂಡ್ ಓಪನಿಂಗ್ ದಿನ ಬಿಗ್ ಬಾಸ್ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ವೇಳೆ ಖಾಸಗಿ ಮಾಧ್ಯಮ ಜೊತೆ ಮಾತನಾಡಿದ ಮೈಕಲ್ ತಾಯಿ ಆತನ ಮದುವೆ ಬಗ್ಗೆ ಹೇಳಿದ್ದಾರೆ.
ಮೈಕಲ್ ಮತ್ತು ಮದುವೆ ಎರಡೂ ಸೇರಲ್ಲ. ಮದುವೆ ಅನ್ನೋದು ಅವರ ಇಷ್ಟ ಆಗಬೇಕು ಅದಿಕ್ಕೆ ಈ ನಿರ್ಧಾರವನ್ನು ಮೈಕಲ್‌ಗೆ ಬಿಟ್ಟಿರುವೆ.
ನಾನು ಅರೇಂಜ್ಡ್ ಮ್ಯಾರೇಜ್ ಮಾಡೋಕೆ ಆಗಲ್ಲ ಏಕೆಂದರೆ ನಾನು ಲವ್ ಮ್ಯಾರೇಜ್ ಆಗಿದ್ದು. ಹುಡುಗಿ ಜೊತೆ ಜೀವನ ಮಾಡಬೇಕಿರುವುದು ಮೈಕಲ್.
ಹೀಗಾಗಿ ಅವನಿಗೆ ಇಷ್ಟ ಆಗುವ ಹುಡುಗಿಯನ್ನು ಮದುವೆಯಾಗಲು ನಾನು ಹೇಳಿದ್ದೀವಿ. ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ ನೀಡಿದ್ದೀನಿ.
ಈ ಜನರೇಷನ್‌ನಲ್ಲಿ ಕಷ್ಟ ಸುಖ ಬರಲಿ ಯಾರೂ ಒಟ್ಟಿಗೆ ಇರುವುದಿಲ್ಲ. ನಾನು ನೋಡಿದ ಹುಡುಗಿ ಇಷ್ಟ ಆಗಿಲ್ಲ ಅಂದ್ರೆ ನೋಡಲು ನಮಗೆ ಕಷ್ಟ ಆಗುತ್ತದೆ.
ಮೈಕಲ್ ಮದುವೆ ಮಾಡಿಕೊಂಡರೆ ನನಗೆ ತುಂಬಾ ಖುಷಿ ಆಗುತ್ತದೆ. ಮದುವೆಯಾಗಿ ಮಗು ಆದ್ರೆ ನನ್ನ ಜೊತೆ ಮೊಮ್ಮಗ ಅಥವಾ ಮೊಮ್ಮಗಳು ಇರುತ್ತಾಳೆ ಅನ್ನೋ ಖುಷಿ ಇದೆ.
ಏನೇ ಅಂದ್ರು ನಾನು 35 ವರ್ಷ ಆದ್ಮೇಲೆ ಮದುವೆ ಆಗ್ತೀನಿ ಅಂತ ಹೇಳಿದ್ದಾನೆ. ನಿರ್ಧಾರ ಅವನ ಕೈಯಲ್ಲಿದೆ ಯಾವಗ ಆಗ್ತೀನಿ ಅಂತ ಹೇಳ್ತಾನೆ ಮಾಡಲು ನಾನು ರೆಡಿಯಾಗಿರುವೆ.