Lakshmi Baramma: ಕೀರ್ತಿ ಮೇಲೀಗ ವೀಕ್ಷಕರಿಗೆ ಕನಿಕರ, ವೈಷ್ಣವ್ ಜೊತೆ ಮದ್ವೆ ಮಾಡ್ಸಬೇಕಂತೆ!

Published : Jul 04, 2024, 11:49 AM ISTUpdated : Jul 04, 2024, 12:24 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿನ ಕೀರ್ತಿ ಪಾತ್ರ ಎಲ್ಲರ ಮನ ಗೆಲ್ಲುತ್ತಿದ್ದು ಸೀರಿಯಲ್ ನಲ್ಲಿ ನಿಜವಾದ ಹೀರೋಯಿನ್ ಕೀರ್ತಿನೆ ಅಂತಿದ್ದಾರೆ ಜನ. ಈಗಾಗಲೇ ಆಕೆಯ ಅಭಿನಯದಿಂದ ನೆಗಟಿವ್ ರೋಲ್ ಇದ್ದರೂ ಅಪಾರ ಅಭಿಮಾನಿಗಳನ್ನು ಗಳಿಸಿರುವ ಇವಳೇ ಈಗ ನೈಜ ಹೀರೋಯಿನ್ ಎನ್ನೋ ಮಟ್ಟಕ್ಕೆ ವೀಕ್ಷಕರು ಬಂದಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿ ವೈಷ್ಣವ್‌ನನ್ನೂ ಮದ್ವೆಯಾದರೂ ಆಶ್ಚರ್ಯವಿಲ್ಲವೆನ್ನೋದು ಸೀರಿಯಲ್ ಅಭಿಮಾನಿಗಳ ನಿರೀಕ್ಷೆ.  

PREV
17
Lakshmi Baramma: ಕೀರ್ತಿ ಮೇಲೀಗ ವೀಕ್ಷಕರಿಗೆ ಕನಿಕರ, ವೈಷ್ಣವ್ ಜೊತೆ ಮದ್ವೆ ಮಾಡ್ಸಬೇಕಂತೆ!

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಸದ್ಯ ಕಾವೇರಿಯ ಮುಖವಾಡ ಕಳಚಿ ಬೀಳುವ ಸಮಯ ಬಂದಿದೆ. ತಮ್ಮನ್ನು ಕಿಡ್ನಾಪ್ ಮಾಡಿರೋದನ್ನು ಹುಡುಕಿಕೊಂಡು, ತನ್ನ ತಪ್ಪಿಲ್ಲ ಅನ್ನೋದನ್ನ ಸಾಬೀತುಪಡಿಸಲು ಹೊರಟಿರುವ ಕೀರ್ತಿಗೆ ಕಾವೇರಿ ಎಂಥವಳು ಅನ್ನೋದು ಗೊತ್ತಾಗಿದೆ. 
 

27

ಪ್ರೀತಿಸಿದ ಹುಡುಗನ ಜೀವ ಉಳಿಯಬೇಕು ಎಂದು ಅಷ್ಟು ವರ್ಷದ ಪ್ರೀತಿಯನ್ನು ಕಾವೇರಿ ಮಾತು ಕೇಳಿ ತ್ಯಾಗ ಮಾಡಿದ ಕೀರ್ತಿ, ಇದೀಗ ಲಕ್ಷ್ಮೀ ಮತ್ತು ತನ್ನನ್ನು ಕಿಡ್ನಾಪ್ ಮಾಡಿಸಿದ ಹಾಗೂ ಆರೋಪ ತನ್ನ ಮೇಲೆ ಬರುವಂತೆ ಮಾಡಿದವರ ಜಾಡು ಹಿಡಿದು, ರೌಡಿಗಳೋಂದಿಗೆ ತಾನೇ ಹೋರಾಡೋಕೆ ಹೊರಟಿದ್ದಾರೆ ಕೀರ್ತಿ. 
 

37

ಸೀರಿಯಲ್ ಪ್ರೇಮಿಗಳಿಗೆ ಇಷ್ಟವಾಗಿರುವ ಕೀರ್ತಿ ಪಾತ್ರಕ್ಕೆ ಸೋಶಿಯಲ್ ಮಿಡಿಯಾದಲ್ಲೂ (Social media) ಮನ್ನಣೆ ದೊರೆತಿದೆ. ಟ್ರೋಲ್ ಪೇಜ್‌ಗಳಲ್ಲಿ ಕೀರ್ತಿಯನ್ನು ಹಾಡಿ ಹೊಗಳಿದ್ದಾರೆ, ಪ್ರೀತಿಸಿದ ಹುಡುಗನ ಜೀವಕ್ಕಾಗಿ ಅವನನ್ನೆ ದೂರ ಮಾಡಿದಳು, ದೂರ ಆದ ಪ್ರಿಯಕರನ ಹೆಂಡತಿಗಾಗಿ ದುಷ್ಟರೊಂದಿಗೆ ಹೋರಾಡಿದಳು. ಕೀರ್ತಿಯದ್ದು ಅತಿಯಾದ ಪ್ರೀತಿಯೋ? ದೊಡ್ಡತನವೋ ಎಂದು ಪ್ರಶ್ನಿಸಿದ್ದಾರೆ. 
 

47

ಸೀರಿಯಲ್ ವೀಕ್ಷಕರು ಸಂಪೂರ್ಣವಾಗಿ ಕೀರ್ತಿಗೆ ಬೆಂಬಲಿಸಿದ್ದು, ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ನಿಜವಾದ ಹೀರೋಯಿನ್. ಪಾಪ ಅವಳಿಗೆ ಎಷ್ಟೊಂದು ಅನ್ಯಾಯ ಆಗುತ್ತಿದೆ. ಆದರೂ ಅವಳ ಒಳ್ಳೆತನಕ್ಕೆ ಒಳ್ಳೆಯದು ಆಗೇ ಆಗುತ್ತದೆ ಎಂದು ಹೇಳ್ತಿದ್ದಾರೆ ಜನ. 
 

57

ಇನ್ನೊಬ್ರು ಕೀರ್ತಿ ಮದುವೆ ಅಗ್ಬೇಕಿದ್ದ ಹುಡುಗನ್ನ ಪಿತೂರಿಯಿಂದ ಅವಳಿಂದ ದೂರ ಮಾಡಿ ಕಾವೇರಿ ಮೋಸದಿಂದ ಲಕ್ಷ್ಮೀ ಜೊತೆ ಮದುವೆ ಮಾಡಿದ್ಲು. ವೈಶ್ - ಕೀರ್ತಿ ಮದುವೆ ಆಗ್ಬೇಕು ಆಗ್ಲೇ ಕೀರ್ತಿಗೆ ಆದ ಅನ್ಯಾಯಕ್ಕೆ ನ್ಯಾಯ ಸಿಗೋಕೆ ಸಾಧ್ಯ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಮತ್ತೊಬ್ರು ಕೀರ್ತಿ ಕ್ಯಾರೆಕ್ಟರ್ ಇಲ್ಲಿವರೆಗೆ ಬಂದ ಎಲ್ಲಾ ಪಾತ್ರಗಳಲ್ಲಿ ಬೆಸ್ಟ್. ಅವಳು ವೈಷ್ಣವ್ ಬಗ್ಗೆ ಪಾಸೆಸಿವ್ ಆಗಿದ್ದಾಳೆ, ಆದರೆ ಕೆಟ್ಟ ಹುಡುಗಿ ಅಲ್ವೇ ಅಲ್ಲ ಎಂದಿದ್ದಾರೆ. . 
 

67

ಮತ್ತೊಬ್ರು ಕಾವೇರಿ ಪರ ಯಾರೇ ಬರ್ಲಿ ಮನೆಯವ್ರು,ಕುಸುಮ ಅಥವಾ ಅವರ ಅಪ್ಪನೇ ಬರ್ಲಿ ನಿನ್ನ ಜೀವನದಲ್ಲಿ ಆಟ ಆಡಿ ನಿನ್ನ ಜೀವನ ಹಾಳು ಮಾಡಿದ ಕಾವೇರಿನಾ ಮಾತ್ರ ಯಾವುದೇ ಕಾರಣಕ್ಕೂ ಬಿಡಬೇಡ. ಎಲ್ಲರೆದುರು ಜುಟ್ಟುಹಿಡ್ಕೊಂಡು ಆಸ್ಪತ್ರೆಯಿಂದ ಹೊರಗೆ ದರದರ ಅಂಥ ನೆಲದ ಮೇಲೆ ಎಳ್ಕೊಂಡು ಬಂದು ಮಾರ್ಗ ಮಧ್ಯೆ ಬಿಸಾಕಿ ರಪರಪ ಅಂಥ ಎರಡು ಕೆನ್ನೆಗೆ ಕೊಟ್ಟು ಎಲ್ಲರೆದುರು ಪ್ರಶ್ನೆ ಮಾಡಿ ಪೊಲೀಸರಿಗೆ ಒಪ್ಪಿಸು. ಎಲ್ಲರೆದುರು ಕಾವೇರಿ ಮಾಡಿದ ಈ ಮೋಸದ ಮದುವೆ ಸತ್ಯ ಬಯಲು ಮಾಡು. ಮಾತೇ ಬರದೆ ಕಾವೇರಿ ಮೂರ್ಛೆಹೋಗ್ಬೇಕು. ಇದನ್ನ ನಾವು ನೋಡ್ಬೇಕು ಎಂದು ಹಂಬಲಿಸ್ತಿದ್ದಾರೆ ಜನ. 
 

77

ಇನ್ನೊಬ್ರು ಕಾಮೆಂಟ್ ಮಾಡಿ ಕಾವೇರಿಯಂತವ್ರು ನಿಜ ಜೀವನದಲ್ಲೂ ಬೇಕಾದಷ್ಟು ಜನರಿರುತ್ತಾರೆ. ಮಗನ ಸಂತೋಷವನ್ನು ಸಹಿಸೋಕಾಗದೆ ಬೇರೆ ಮನೆ ಹೆಣ್ಣುಮಕ್ಕಳ ಜೀವನದಲ್ಲಿ ಆಟ ಆಡಿ ತಮಗೆ ಬೇಕಾದ ಕಾರ್ಯವನ್ನು ಮೋಸದಿಂದ ಸಾಧಿಸಿಕೊಳ್ತಾರೆ ಕುತಂತ್ರಿಗಳು. ಕೆಲವು ಹೆಣ್ಣುಮಕ್ಕಳು ಭಯದಿಂದ ಸುಮ್ನೆ, ಇದ್ರೆ ಕೆಲವು ಹೆಣ್ಣುಮಕ್ಕಳು ತಮಗೆ ಆಗಿರೋ ಅನ್ಯಾಯದ ವಿರುದ್ಧ ನೇರವಾಗಿ ಹೋರಾಡ್ತಾರೆ. ಏನೇ ಆಗ್ಲಿ ಕೀರ್ತಿ - ವೈ ಶ್ ಒಂದಾಗಬೇಕು ಎಂದಿದ್ದಾರೆ. ಒಟ್ಟಲ್ಲಿ ಸೀರಿಯಲ್ ಪ್ರಿಯರಲ್ಲಿ ಹೆಚ್ಚಿನವರು ಕೀರ್ತಿ -ವೈಷ್ಣವ್ ಒಂದಾಗಬೇಕು, ಕೀರ್ತಿಗೆ ನ್ಯಾಯ ಸಿಗಬೇಕು ಎಂದು ಬಯಸಿರೋರೆ ಹೆಚ್ಚು. 
 

click me!

Recommended Stories