'ಶ್ರೀರಸ್ತು ಶುಭಮಸ್ತು' ನಟ ಅಜಿತ್ ಹಂದೆ ಕುರಿತು ಇಂಟ್ರೆಸ್ಟಿಂಗ್ ವಿಷ್ಯಗಳು!

First Published | Jan 18, 2024, 4:09 PM IST

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಮಾಧವ ಪಾತ್ರಧಾರಿ, ನಟ ಅಜಿತ್ ಹಂದೆ ಅವರು ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಪ್ರಬುದ್ಧ ನಟನಿಗೆ ಜನ್ಮದಿನದ ಶುಭಾಶಯಗಳು. ಅವರ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಾಧವ ಪಾತ್ರಕ್ಕೆ ಜೀವತುಂಬುತ್ತಿರುವ ನಟ ಅಜಿತ್ ಹಂದೆ. ಇವರು ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಇಂಟ್ರೆಸ್ಟಿಂಗ್ ವಿಷ್ಯಗಳನ್ನು ತಿಳಿಯೋಣ. 

ಅಜಿತ್ ಹಂದೆ (Ajith Hande) ಕನ್ನಡಿಗರಿಗೆ ತುಂಬಾನೆ ಹತ್ತಿರವಾದುದು ಶ್ರೀರಸ್ತು ಶುಭಮಸ್ತು ಸೀರಿಯಲ್ ಮೂಲಕವೇ ಆದರೆ ಇವರಿಗೆ ಕಿರುತೆರೆ ಹೊಸತೇನಲ್ಲ, ಇವರು  ಈ ಹಿಂದೆ ಗರ್ವ, ಬಿದಿಗೆ ಚಂದ್ರಮ, ಮುಕ್ತ ಮತ್ತು ಹಿಂದಿಯ ಚೋಟಿಮಾ ಧಾರಾವಾಹಿಗಳಲ್ಲೂ ನಟಿಸಿದ್ದರು. 

Tap to resize

ಸೀರಿಯಲ್ (serial) ನಲ್ಲಿ ಇಬ್ಬರು ದೊಡ್ಡ ಮಕ್ಕಳ ತಂದೆಯಾಗಿ, ವಯಸ್ಸಿಗೂ ಮೀರಿದ ಪಾತ್ರದಲ್ಲಿ ನಟಿಸುತ್ತಿರುವ ಅಜಿತ್ ಹಂದೆ, ರಿಯಲ್ ಲೈಫಲ್ಲಿ ನಾಲ್ಕು ವರ್ಷದ ಪುಟಾಣಿಯ ತಂದೆ ಅಂದ್ರೆ ನಂಬಲೇಬೇಕು. 

ಅಜಿತ್ ಅವರ ಪತ್ನಿಯ ಹೆಸರು ಸಿಂಧು (Sindhu Hande), ಇವರು ಗಾಯಕಿ ಹಾಗೂ ಅದ್ಭುತ ಚಿತ್ರ ಕಲಾವಿದೆ ಕೂಡ ಹೌದು. ಇವರ ಸೋಶಿಯಲ್ ಮೀಡಿಯಾ ಪೇಜ್ ಗೆ ಭೇಟಿ ನೀಡಿದ್ರೆ ಇವರ ಅದ್ಭುತ ಕಲಾಕೃತಿಗಳನ್ನು ಕಾಣಬಹುದು. 

ಬಾಲ್ಯದಿಂದಲೇ ನಾಟಕಗಳಲ್ಲಿ ನಟಿಸುವ ಆಸೆಯನ್ನು ಹೊಂದಿದ್ದ ಅಜಿತ್, ನಂತರ ಸೀರಿಯಲ್ ಗಳಲ್ಲಿ ನಟಿಸೋಕೆ ಆರಂಭಿಸಿದರು, ಎರಡು, ಮೂರು ಸೀರಿಯಲ್ ಬಳಿಕ ನಟನೆಯಿಂದಲೇ ದೂರ ಇದ್ದ ಅಜಿತ್, ಬಳಿಕ ನ್ಯೂಯಾರ್ಕ್ ಗೆ ತೆರಳಿದರು. 

ನ್ಯೂರ್ಯಾಕ್‌ ಫಿಲಂ ಸಿಟಿಯಲ್ಲಿ (Newyork film city) ಸಿನಿಮಾ ಮೇಕಿಂಗ್ ತರಬೇತಿ ಪಡೆದುಕೊಂಡು ಭಾರತಕ್ಕೆ ಬಂದು ತಮ್ಮ ಸ್ವಂತ ನಿರ್ಮಾಣದಲ್ಲಿ ಫಿಲಂ ಸಂಸ್ಥೆ ಆರಂಭಿಸಿದ್ದಾರೆ. ತಮ್ಮ ಸಿನಿಮಾ ಸಂಸ್ಥೆಯಲ್ಲಿ ಅನೇಕ ಜಾಹೀರಾತು ಮತ್ತು ಡಾಕ್ಯುಮೆಂಟರಿ ನಿರ್ಮಾಣ ಮಾಡಿದ್ದಾರೆ.

ಕಿರುತೆರೆಯಲ್ಲಿ ಮಾತ್ರವಲ್ಲ, ಹಿರಿತೆರೆಯಲ್ಲೂ ಸಹ  ಕೆಲವೊಂದು ಸಿನಿಮಾಗಳಲ್ಲಿ ಅಜಿತ್ ಹಂದೆ ನಟಿಸಿದ್ದಾರೆ. ಕನ್ನಡದ ಐದು ಒಂದ್ಲಾ ಐದು, ಮಿನುಗು, ಚಂಬಲ್ ಸಿನಿಮಾದಲ್ಲಿ ಇವರು ನಟಿಸಿದ್ದಾರೆ. ಸದ್ಯ  'ಶ್ರೀರಸ್ತು ಶುಭಮಸ್ತು' ವಿನ ಮಾಧವ್ ಸರ್ ಆಗಿ ಮಿಂಚುತ್ತಿದ್ದಾರೆ.  

ಮಾಧವ ಪಾತ್ರವನ್ನು ಜನರು ಎಷ್ಟೊಂದು ಇಷ್ಟಪಟ್ಟಿದ್ದಾರೆ ಎಂದರೆ, ಇದ್ದರೆ ಇಂತಹ ಮಾವ ಇರಬೇಕು, ಇಂತಹ ವ್ಯಕ್ತಿತ್ವದವರೇ ಸಿಕ್ಕರೇ ಎಷ್ಟು ಒಳ್ಳೆಯದು ಎಂದು ಬಯಸುವವರೇ ಹೆಚ್ಚು. ತಮ್ಮ ಪಾತ್ರದ ಮೂಲಕವೇ ಜನಕ್ಕೆ ಹತ್ತಿರವಾದ ಮಾಧವ್ ಆಲಿಯಾಸ್ ಅಜಿತ್ ಹಂದೆ ಅವರಿಗೆ ಹುಟ್ಟು ಹಬ್ಬದ (birthday) ಶುಭಾಶಯಗಳು. 

Latest Videos

click me!