ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 10ರ ಫಿನಾಲೆ ವಾರ ಆರಂಭವಾಗಿದೆ. ಆದರೆ ಇದ್ದಕ್ಕಿದ್ದಂತೆ ಬಿಗ್ ಬಾಸ್ ಮಿಡಲ್ ವೀಕ್ ಎಲಿಮಿನೇಷನ್ ಅರಂಭಿಸಿದ್ದಾರೆ.
ಮನೆಯಲ್ಲಿ ಕೂಲ್ ಆಗಿ ಕುಳಿತುಕೊಂಡು ಹರಟೆ ಚರ್ಚೆ ಮಾಡುತ್ತಿದ್ದ ಸ್ಪರ್ಧಿಗಳನ್ನು ಬಿಗ್ ಬಾಸ್ ಗಾರ್ಡನ್ ಏರಿಯಾಗೆ ಕರೆದು ಎಲಿಮಿನೇಷನ್ ಬಗ್ಗೆ ತಿಳಿಸುತ್ತಾರೆ.
ಸೇಫ್ ಜೋನ್‌ನಲ್ಲಿರುವ ಸಂಗೀತಾ ಮತ್ತು ಪ್ರತಾಪ್ ಒಂದು ಕಡೆ ನಿಂತುಕೊಂಡರೆ, ವಿನಯ್ ನಮ್ರತಾ ತನಿಷಾ ತುಕಾಲಿ ಮತ್ತು ವರ್ತೂರ್ ಸಂತೋಷ್ ಮತ್ತೊಂದು ಕಡೆ ನಿಲ್ಲುತ್ತಾರೆ.
ಬಿಗ್ ಬಾಸ್ ಯಾವುದೇ ಗೇಟ್ ಆಟವಾಡಿಸದೇ ನೇರವಾಗಿ ತನಿಷಾ ಹೆಸರು ಹೇಳಿ ಮುಖ್ಯ ದ್ವಾರದಿಂದ ಹೊರ ಬರುವಂತೆ ಆರ್ಡರ್ ಮಾಡುತ್ತಾರೆ.
ಎಲಿಮಿನೇಷನ್ ಸ್ವೀಕರಿಸಲು ಕೊಂಚ ಕಷ್ಟ ಪಟ್ಟ ತನಿಷಾ ಅಲ್ಲಿದ್ದವರ ಮೇಲೆ ರೇಗಾಡುತ್ತಾರೆ. ತುಂಬಾ ಆಸೆ ಪಟ್ಟಿದ್ದೀರಿ ನಾನು ಹೋಗಬೇಕು ಅಂತ ಎಂದು ಹೇಳುತ್ತಾರೆ.
ಯಾಕೆ ಎಲಿಮಿನೇಟ್ ಮಾಡಿದ್ದು ಎಂದು ಬಿಗ್ ಬಾಸ್‌ನೇ ಪ್ರಶ್ನೆ ಮಾಡುತ್ತಾರೆ. ನನ್ನ ಧ್ವನಿ ಎಲ್ಲರಿಗೂ ಇರಿಟೇಟ್ ಆಗುತ್ತಿತ್ತು ಅಲ್ವಾ, ಇನ್ಮೇಲೆ ಯಾರಿಗೂ ಇರಿಟೇಟ್ ಮಾಡಲ್ಲ ಎಂದಿದ್ದಾರೆ.