Actor Shashi Hegde: ‘ರಾಜ ರಾಣಿ’ ಧಾರಾವಾಹಿ ನಟಿ ಲಾವಣ್ಯಾ ಭಾರದ್ವಾಜ್, ಶಶಿ ಹೆಗಡೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗ ಅವರು ಸಂದರ್ಶನವೊಂದರಲ್ಲಿ ಜೊಮ್ಯಾಟೋ ಡೆಲಿವರಿ ಕೆಲಸ ಮಾಡೋದಾಗಿ ಹೇಳಿದ್ದಾರೆ.
ಲಾವಣ್ಯಾ ಭಾರದ್ವಾಜ್ ಅವರು ಈಗಾಗಲೇ ‘ರಾಜ ರಾಣಿ’, ‘ಶ್ರೀರಸ್ತು ಶುಭಮಸ್ತು’ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಶಶಿ ಹೆಗಡೆ ಅವರು ʼರಾಜ ರಾಣಿʼ ಧಾರಾವಾಹಿಯಲ್ಲಿ ನಟಿಸಿದ್ದರು. ‘ಅಮೃತಧಾರೆ’ ಧಾರಾವಾಹಿಯಲ್ಲಿ ಕೂಡ ಕೆಲ ದಿನಗಳ ಕಾಲ ನಟಿಸಿದ್ದರು. ಅಂದಹಾಗೆ ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು.
‘ರಾಜ ರಾಣಿ’ ಧಾರಾವಾಹಿಯಲ್ಲಿ ನಟಿಸುವಾಗಲೇ ಇವರಿಬ್ಬರಿಗೂ ಲವ್ ಆಗಿ ಮದುವೆ ಆಗಿತ್ತು.
24
ಎಲ್ಲ ಟೈಮ್‌ನಲ್ಲೂ ಅವಕಾಶ ಸಿಗೋದಿಲ್ಲ
ಸೀರಿಯಲ್ ಇರಲೀ, ಸಿನಿಮಾವೇ ಇರಲಿ ಎಲ್ಲ ಸಮಯದಲ್ಲಿಯೂ ಕೆಲಸ ಇರೋದಿಲ್ಲ. ಒಮ್ಮೆ ಪ್ರಾಜೆಕ್ಟ್ ಸಿಕ್ಕಿ, ಮುಗಿದ ಬಳಿಕ ಆಮೇಲೆ ಎಷ್ಟು ತಿಂಗಳು ಸಿನಿಮಾ, ಸೀರಿಯಲ್ ಅಥವಾ ಇನ್ನಿತರ ಅವಕಾಶ ಸಿಗುತ್ತದೆ ಎಂದು ಹೇಳಲಾಗೋದಿಲ್ಲ. ಹೀಗಾಗಿ ಕಲಾವಿದರಿಗೆ ಅನಿಶ್ಚಿತತೆ ಕಾಡುವುದು.
34
ಜೊಮ್ಯಾಟ್ ಬಾಯ್ ಆಗಿ ಕೆಲಸ
ಶಶಿ ಹೆಗಡೆ ಅವರಿಗೂ ಕೂಡ ಎಲ್ಲ ಟೈಮ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಅವಕಾಶ ಸಿಕ್ಕಿಲ್ಲ. ಒಳ್ಳೆಯ ಅವಕಾಶಗಳಿಗೋಸ್ಕರ ಶಶಿ ಹೆಗಡೆ ಕಾಯುತ್ತಿದ್ದಾರೆ. ಜೀವನ ಸಾಗಬೇಕು ಎಂದು ಅವರು ಜೊಮ್ಯಾಟೋ ಡೆಲಿವರಿ ಕೂಡ ಮಾಡುತ್ತಾರಂತೆ. ಇದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಶಶಿ ಹೆಗಡೆ ಅವರು ತಾನು ಆರ್ಡರ್ ಕೊಟ್ಟು ರೆಸ್ಟೋರೆಂಟ್‌ನಲ್ಲಿ ತಿನ್ನುತ್ತಿದ್ದೆ, ಅಲ್ಲಿಂದಲೇ ಜೊಮ್ಯಾಟೋ ಆರ್ಡರ್ ಮಾಡಿಕೊಂಡು ಪಾರ್ಸೆಲ್ ಕೊಡೋದು ಸುಲಭ ಇಲ್ಲ ಎಂದು ಕೂಡ ಹೇಳಿದ್ದಾರೆ.
ತಾಯಿ ಆಗುತ್ತಿರುವ ಲಾವಣ್ಯಾ ಅವರು ಸದ್ಯ ಸೀರಿಯಲ್‌ನಿಂದ ಬ್ರೇಕ್ ತಗೊಂಡಿದ್ದಾರೆ. ಆದಷ್ಟು ಬೇಗ ಅವರು ಮತ್ತೆ ತೆರೆ ಮೇಲೆ ಕಾಣಿಸಿಕೊಳ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.