ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ದರ್ಶನ್ ತಮ್ಮ ಸ್ನೇಹಿತೆಯರಾದ ಕಾವ್ಯಾ ಗೌಡ ಮತ್ತು ಭವ್ಯಾ ಗೌಡ ಜೊತೆಗೆ ಪಾರ್ಟಿ ಮೂಡ್ ಎಂಜಾಯ್ ಮಾಡ್ತಿದ್ದಾರೆ. ಕಾವ್ಯಾ ಗೌಡ ಫೋಟೊಗಳನ್ನು ತಮ್ಮ ಸೋಶಿಯಶ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ದರ್ಶನ್ ತೂಗುದೀಪ (Darshan Thoogudeepa) ಪತ್ನಿ ವಿಜಯಲಕ್ಷ್ಮೀ ದರ್ಶನ್ ಸಮಸ್ಯೆಗಳ ಮಧ್ಯೆ ಬಿಡುವು ಮಾಡಿಕೊಂಡು ತಮ್ಮ ಸ್ನೇಹಿತೆಯರ ಜೊತೆಗೆ ಎಂಜಾಯ್ ಮಾಡ್ತಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
27
ಕಾವ್ಯಾ ಗೌಡ ಜೊತೆ ವಿಜಯಲಕ್ಷ್ಮಿ
ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ (Kavya Gowda)ಮತ್ತು ಅವರ ಸಹೋದರ ಭವ್ಯಾ ಗೌಡ ಜೊತೆಗೆ ವಿಜಯಲಕ್ಷ್ಮೀ ತುಂಬಾನೆ ಕ್ಲೋಸ್ ಆಗಿದ್ದು, ಅವರ ಜೊತೆ ಸಮಯ ಕಳೆದಿದ್ದಾರೆ ದರ್ಶನ್ ಪತ್ನಿ.
37
ಫೋಟೊಗಳು ವೈರಲ್
ಸ್ನೇಹಿತೆಯರ ಜೊತೆಗೆ ವಿಜಯಲಕ್ಷ್ಮಿ (Vijayalakshmi Darshan) ಕ್ವಾಲಿಟಿ ಟೈಮ್ ಕಳೆದಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊಗಳು ವೈರಲ್ ಆಗುತ್ತಿವೆ. ದರ್ಶನ್ ಪತ್ನಿ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ಧಾಗಿತ್ತು, ಮತ್ತೆ ಜೈಲು ಸೇರಿದ್ದು, ಜೈಲಲ್ಲಿ ತಮಗೆ ಸರಿಯಾಗಿ ವ್ಯವಸ್ಥೆ ಇಲ್ಲ, ದಿಂಬು, ಚಾಪೆಗಾಗಿ ಬೇಡಿಕೆ ಕೂಡ ಇಟ್ಟಿದ್ದರು. ಇನ್ನು ಜೈಲಿಂದ ಅವರು ಯಾವಾಗ ಬಿದುಗಡೆಯಾಗುತ್ತಾರೆ ಎನ್ನುವ ಮಾಹಿತಿ ಕೂಡ ಇಲ್ಲ.
57
ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನ
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಬೆಂಗಳೂರಿನ ಮನೆಯಲ್ಲಿ 3 ಲಕ್ಷ ರೂ. ಕಳ್ಳತನವಾಗಿದ್ದು, ಮ್ಯಾನೇಜರ್ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೈಸೂರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿದ್ದು, ಮನೆಕೆಲಸದವರ ಮೇಲೆ ಶಂಕೆ ವ್ಯಕ್ತವಾಗಿದೆ.
67
ಅಸಭ್ಯ ಕಾಮೆಂಟ್
ಇದಲ್ಲದೇ ವಿಜಯಲಕ್ಷ್ಮಿಗೆ ಅಸಭ್ಯ ಕಮೆಂಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಶುರುವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ವಿಜಯಲಕ್ಷ್ಮಿ ಅವರಿಗೆ ಪೊಲೀಸರು ಎರಡು ಬಾರಿ ನೋಟಿಸ್ ಕಳಿಸಿದ್ದಾರೆ. ಆದರೆ ಈ ಎರಡೂ ನೋಟಿಸ್ಗಳಿಗೆ ಅವರು ಉತ್ತರ ನೀಡಿಲ್ಲ ಎನ್ನಲಾಗಿದೆ.
77
ಇವೆಲ್ಲದರ ನಡುವೆ ಜಾಲಿ ಮೂಡಲ್ಲಿ ವಿಜಯಲಕ್ಷ್ಮಿ
ಈ ಎಲ್ಲಾ ಪ್ರಕರಣಗಳ ಮಧ್ಯೆ ವಿಜಯಲಕ್ಷ್ಮೀ ಸ್ನೇಹಿತರ ಜೊತೆ ಜಾಲಿ ಮೂಡಲ್ಲಿ ಇದ್ದಾರೆ. ಎಂಜಾಯ್ ಮಾಡುತ್ತಿದ್ದಾರೆ. ಸಿಕ್ಕ ಫ್ರೀ ಸಮಯದಲ್ಲಿ ಸಖತ್ ಆಗಿ ಮೋಜು ಮಾಡುತ್ತಿದ್ದಾರೆ ವಿಜಯಲಕ್ಷ್ಮಿ.