ನಟನೆಯ ಜೊತೆಗೆ ವಿದ್ಯಾಭ್ಯಾಸ ಬ್ಯಾಲೆನ್ಸ್ ಮಾಡುತ್ತಿದ್ದ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಕೀರ್ತಿ ಈಗಷ್ಟೇ ಡಿಗ್ರಿ ಪಡೆದಿದ್ದು, ಆ ಸಂಭ್ರಮವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಧಾರಾವಾಹಿಯಲ್ಲಿ ಸುಬ್ಬುವನ್ನು ಹುಚ್ಚರಂತೆ ಪ್ರೀತಿಸುವ ಮತ್ತೊಂದು ಪಾತ್ರ ಎಂದರೆ ಅದು ಶ್ರೀವಲ್ಲಿ. ಆಕೆ ಸುಬ್ರಹ್ಮಣ್ಯನನ್ನು ಪಡೆಯೋಕೆ ಏನು ಬೇಕಾದರೂ ಮಾಡುವಂತಹ ಹುಡುಗಿ, ಕೊನೆಯ ಕ್ಷಣದವರೆಗೆ ಸುಬ್ಬುನನ್ನು ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದಾಳೆ.
26
ಕೀರ್ತಿ ವೆಂಕಟೇಶ್
ಇದೀಗ ವಿಷಯ ಸೀರಿಯಲ್ ಬಗ್ಗೆ ಅಲ್ಲ. ಬದಲಾಗಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸುತ್ತಿರುವ ಕೀರ್ತಿ ವೆಂಕಟೇಶ್ ಕುರಿತು. ಹೌದು, ಕೀರ್ತಿ ವೆಂಕಟೇಶ್ ತಮ್ಮ ನಟನೆಯ ಜೊತೆಗೆ, ಶಿಕ್ಷಣವನ್ನು ಸಹ ಮುಂದುವರೆಸಿಕೊಂಡು ಬಂದಿದ್ದು, ಇದೀಗ ಡಿಗ್ರಿ ಪಡೆದ ಸಂಭ್ರಮದಲ್ಲಿದ್ದಾರೆ.
36
ಡಿಗ್ರಿ ಪಡೆದ ಸಂಭ್ರಮ
ಹೌದು, ಕೀರ್ತಿ ಬಿಎಂಎಸ್ ಕಾಲೇಜ್ ಆಫ್ ಆರ್ಟ್ಸ್ ಕಾಮರ್ಸ್ ಕಾಲೇಜಿನಲ್ಲಿ ಡಿಗ್ರಿ ಪೂರ್ತಿ ಮಾಡಿದ್ದಾರೆ. ಇತ್ತೀಚಿಗೆ ಪದವಿ ಪಡೆದುಕೊಂಡಿದ್ದು, ಸೀರೆಯುಟ್ಟು, ಪದವಿ ಸ್ವೀಕರಿಸುತ್ತಿರುವ ಫೋಟೊಗಳನ್ನು ಹಾಕುವ ಮೂಲಕ ತಾವು ಗ್ರ್ಯಾಜುವೇಟ್ ಆಗಿರುವ ಬಗ್ಗೆ ತಿಳಿಸಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಕೆಲವು ವರ್ಷಗಳಿಂದ ಗುರುತಿಸಿಕೊಂಡಿರುವ ಕೀರ್ತಿ, ತಮ್ಮ ಅದ್ಭುತ ನಟನೆಯ ಮೂಲಕ ಜನಮನ ಗೆದ್ದಿದ್ದಾರೆ. ಇವರು ಕನ್ಯಾದಾನ, ಶಾಂತಿ ನಿವಾಸ, ಶ್ರಾವಣಿ ಸುಬ್ರಹ್ಮಣ್ಯ ಸೇರಿ ಹಲವು ಧಾರವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
56
ಸಂಭ್ರಮದ ಕ್ಷಣಗಳ ಫೊಟೊ
ಇತ್ತೀಚೆಗಷ್ಟೆ ನಟಿ ತಮ್ಮ 22 ನೇ ವರ್ಷದ ಹುಟ್ಟುಹಬ್ಬವನ್ನು ಸಹ ಆಚರಿಸಿಕೊಂಡಿದ್ದರು. ನಟನೆಯ ಜೊತೆ ಸಂಧ್ಯಾ ಕಾಲೇಜಿನಲ್ಲಿ ಡಿಗ್ರಿ ಕೂಡ ಕಲಿತಿದ್ದು, ಸಂಭ್ರಮದ ಕ್ಷಣಗಳ ಫೊಟೊಗಳನ್ನು ಹಂಚಿಕೊಂಡಿದ್ದಾರೆ, ಇದರ ಜೊತೆಗೆ ಅಮ್ಮನ ಜೊತೆಗಿನ ಫೊಟೊವನ್ನು ಸಹ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.
66
ಟೈಮ್ಸ್ ಫ್ರೆಶ್ ಫೇಸ್ ವಿಜೇತ
ಇನ್ನು ಕೀರ್ತಿ ವೆಂಕಟೇಶ್ ಅವರು ಸೀರಿಯಲ್ ಗೆ ಎಂಟ್ರಿ ಕೊಡುವ ಮುನ್ನ ಟೈಮ್ಸ್ ಫ್ರೆಶ್ ಫೇಸ್ ವಿಜೇತರೂ ಆಗಿದ್ದರು. ಆದಾದ ಬಳಿಕ ನಟನೆಯಲ್ಲಿ ಒಂದೊಂದಾಗಿ ಹೆಜ್ಜೆ ಇಟ್ಟು, ಸದ್ಯ ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಶ್ರೀವಲ್ಲಿಯಲ್ಲಿ ಮಿಂಚುತ್ತಿದ್ದಾರೆ.