ವಿಜಯಾಂಬಿಕಾಗೆ ಮುಟ್ಟಿ ನೋಡಿಕೊಳ್ಳುವಂಥ ಶಾಕ್ ಕೊಟ್ಟ ಶ್ರಾವಣಿ: ಇದಪ್ಪಾ ಟ್ವಿಸ್ಟ್ ಅಂದ್ರು ವೀಕ್ಷಕರು!

Published : May 27, 2025, 02:20 PM IST

ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ತನ್ನ ಕುಟುಂಬದೊಂದಿಗೆ ಮರಳಿದ್ದಾಳೆ. ಚಿಕ್ಕಮ್ಮ ವಂದನಾಳ ಸಂಕಷ್ಟದ ಬಗ್ಗೆ ತಿಳಿದುಕೊಂಡು, ವಿಜಯಾಂಬಿಕಾಳ ಆಟಕ್ಕೆ ಬ್ರೇಕ್ ಹಾಕಲು ಶ್ರಾವಣಿ ಮುಂದಾಗಿದ್ದಾಳೆ. ಇದರಿಂದ ಧಾರಾವಾಹಿಯಲ್ಲಿ ಹೊಸ ತಿರುವು ಪಡೆದುಕೊಂಡಿದೆ.

PREV
15

ಕಳೆದ ಕೆಲವು ವಾರಗಳಿಂದ ಮೊದಲ ಸ್ಥಾನದಲ್ಲಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಗೆ ರೋಚಕ ತಿರುವು ಪಡೆದುಕೊಂಡಿದೆ. ಅತ್ತೆ ವಿಜಯಾಂಬಿಕಾಳ ಆಟಕ್ಕೆ ಬ್ರೇಕ್ ಹಾಕಲು ಶ್ರಾವಣಿ ತವರಿಗೆ ಆಗಮಿಸಿದ್ದಾಳೆ. ಅತ್ತೆ-ಮಾವ, ಕಾಂತಮ್ಮ, ನಾದಿನಿ ಮತ್ತು ಆಕೆಯ ಮಕ್ಕಳೊಂದಿಗೆ ಶ್ರಾವಣಿ ತವರಿಗೆ ಆಗಮಿಸಿದ್ದಾಳೆ.

25

ಚಿಕ್ಕಮ್ಮ ವಂದನಾ ಸಂಕಷ್ಟದಲ್ಲಿರುವ ವಿಷಯ ಶ್ರಾವಣಿಗೆ ಗೊತ್ತಾಗಿದೆ. ಸುಂದರ ತನ್ನ ಪರವಾಗಿದ್ದಾನೆ ಎಂದು ನಂಬಿರುವ ವಿಜಯಾಂಬಿಕಾ ಶ್ರಾವಣಿ ಕುರಿತ ವಿಷಯಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಆದ್ರೆ ಶ್ರಾವಣಿ ಪರವಾಗಿ ಸುಂದರ ಕೆಲಸ ಮಾಡುತ್ತಿರೋದು ವಿಷಯ ಗೊತ್ತಿಲ್ಲ.

35

ಸುಬ್ರಮಣ್ಯನನ್ನು ಮದುವೆಯಾಗಿ ಬಂದ ಶ್ರಾವಣಿ ಮನೆಯಲ್ಲಿ ಎಲ್ಲರಿಂದಲೂ ತಿರಸ್ಕೃತಳಾಗಿದ್ದಳು. ಇದೀಗ ಎಲ್ಲರ ಪ್ರೀತಿಯನ್ನು ಗಳಿಸಿಕೊಂಡಿರುವ ಶ್ರಾವಣಿಯನ್ನು ಮನೆಯ ಸೊಸೆ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಸುಬ್ರಮಣ್ಯ ಮನೆಯಲ್ಲಿನ ಸಮಸ್ಯೆಗಳು ನಿವಾರಣೆ ಆಗುತ್ತಿದ್ದಂತೆ ಧಾರಾವಾಹಿ ಹೊಸ ಆಯಾಮ ಪಡೆದುಕೊಳ್ಳುವ ಮೂಲಕ ಕುತೂಹಲ ಮೂಡಿಸಿದೆ.

45

ವಿಜಯಾಂಬಿಕಳ ಅಸಲಿ ಮುಖ ವಂದನಾಗೆ ಗೊತ್ತಾಗಿತ್ತು. ವಂದನಾಗೆ ಹುಚ್ಚು ಹಿಡಿದಿದೆ ಎಂದು ಎಲ್ಲರನ್ನು ವಿಜಯಾಂಬಿಕಾ ನಂಬಿಸಿದ್ದಾಳೆ. ವಿಜಯಾಂಬಿಕಾಳ ಮಾತು ನಂಬಿ ವೀರೇಂದ್ರ ಮತ್ತು ಸುರೇಂದ್ರ ವಂದನಾಳನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಮಗಳು ಪಿಂಕಿ ಭೇಟಿಗೂ ಸುರೇಂದ್ರ ಅವಕಾಶ ನೀಡುತ್ತಿಲ್ಲ. ಈ ಎಲ್ಲಾ ವಿಷಯವನ್ನು ಶ್ರಾವಣಿಗೆ ಹೇಳಲು ಪಿಂಕಿ ಪ್ರಯತ್ನಿಸಿದ್ದಕ್ಕೆ ತಂದೆಯಿಂದ ವಿರೋಧ ವ್ಯಕ್ತವಾಗಿತ್ತು.

55

ಮನೆಯಲ್ಲಿ ವಂದನಾ ಚಿಕ್ಕಮ್ಮ ಅಪಾಯದಲ್ಲಿರುವ ವಿಷಯ ತಿಳಿದುಕೊಂಡ ಶ್ರಾವಣಿ ತವರಿಗೆ ಬಂದಿದ್ದಾಳೆ. ಶ್ರಾವಣಿಯನ್ನು ನೋಡಿ ಶಾಕ್ ಆದ ವಿಜಯಾಂಬಿಕಾ ನಿನ್ನೊಬ್ಬಳಿಂದ ಏನು ಮಾಡಲು ಸಾಧ್ಯ ಅಂದಾಗ, ಶ್ರಾವಣಿ ತನ್ನ ಇಡೀ ಕುಟುಂಬ ಬರುತ್ತಿರೋದನ್ನು ತೋರಿಸುತ್ತಾಳೆ. ಈ ಸೀನ್ ನೋಡಿದ ವೀಕ್ಷಕರು, ಶ್ರಾವಣಿ ಫುಲ್ ಬೆಂಕಿ, ವಿಜಯಾಂಬಿಕಾ ಫುಲ್ ಥಂಡಾ ಎಂದು ಕಮೆಂಟ್ ಮಾಡುತ್ತಿದ್ದಾರೆ.

Read more Photos on
click me!

Recommended Stories