ಕನ್ನಡಿಗರು ಇದೀಗ ದೇಶ ವಿದೇಶದಲ್ಲಿ ಸದ್ದು ಮಾಡ್ತಿದ್ದಾರೆ. ಸಂಗೀತದ ಬಗ್ಗೆ ಹೇಳೋದಾದರೆ, ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಬೇರೆ ಭಾಷೆಯಲ್ಲೂ ಕನ್ನಡಿಗರದೇ ಸದ್ದು, ಇದೀಗ ಕನ್ನಡತಿ ಶಿವಾನಿ ನವೀನ್ ತಮಿಳು ಸರಿಗಮಪದಲ್ಲಿ ಫಿನಾಲೆ ತಲುಪಿದ್ದು, ಅಲ್ಲೂ ಮೋಡಿ ಮಾಡುತ್ತಿದ್ದಾರೆ.
ಶಿವಾನಿ ನವೀನ್ ಸದ್ಯ ತಮಿಳಿನ ಜೀ ವಾಹಿನಿಯ ಸರಿಗಮಪ ಶೋನಲ್ಲಿ ಮಿಂಚುತ್ತಿರುವ ಕನ್ನಡತಿ. ಈಕೆ ಹಾಡು ಹಾಡಿದರೆ, ತಲೆದೂಗುವವರೇ ಎಲ್ಲರೂ. ಅಂತಹ ಸ್ಪರ್ಧಿ ತೀರ್ಪುಗಾರರು ಮೆಚ್ಚಿಕೊಂಡ ಶಿವಾನಿ ಇದೀಗ ಸರಿಗಮಪ ಫಿನಾಲೆ ಹಂತ ತಲುಪಿದ್ದಾರೆ.
27
ಯಾರು ಈ ಶಿವಾನಿ
ಚಿಕ್ಕಮಗಳೂರಿನ ಹುಡುಗಿ ಶಿವಾನಿ, ಕನ್ನಡದ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19'ರಲ್ಲಿ ಮೊದಲ ರನ್ನರ್ ಅಪ್ ಆಗಿದ್ದರು. ಕನ್ನಡದಲ್ಲೂ ತಮ್ಮ ಮಧುರ ಹಾಗೂ ವಿಭಿನ್ನವಾದ ಹೈಟೋನ್ ನಿಂದಾಗಿ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿ, ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದೀಗ 4 ವರ್ಷಗಳ ಬಳಿಕ ಸರಿಗಮಪ ತಮಿಳು ಶೋನಲ್ಲಿ ಶಿವಾನಿ ಮಿಂಚುತ್ತಿದ್ದಾರೆ.
37
ಕನ್ನಡ ಹಾಡಿನ ಮೂಲಕ ಎಂಟ್ರಿ ಕೊಟ್ಟ ಶಿವಾನಿ
ಶಿವಾನಿ ನವೀನ್ ತಮಿಳು ಸರಿಗಮಪದಲ್ಲಿ ಆಡಿಶನ್ ಕೊಡುವಾಗ ಮೊದಲಿಗೆ ತಮಿಳು ಹಾಡು ಹಾಡಿದ್ದರು. ಬಳಿಕ ವಿಜಯ್ ಪ್ರಕಾಶ್ ಮಾತಿನಂತೆ ‘ಸೋಜುಗಾದ ಸೂಜುಮಲ್ಲಿಗೆ’ ಹಾಡು ಹಾಡಿ ಪ್ರತಿ ತೀರ್ಪುಗಾರರ ಮನ ಗೆದ್ದಿದ್ದರು. ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಹಾಡಿನ ಮೂಲಕವೇ ಶಿವಾನಿ ತಮಿಳು ಸರಿಗಮಪಕ್ಕೆ ಎಂಟ್ರಿ ಕೊಟ್ಟಿದ್ದರು.
ಸರಿಗಮಪ ಸ್ಪರ್ಧೆಯಲ್ಲಿ ಎಸ್.ಪಿ.ಬಿ ರೌಂಡ್ ನಲ್ಲಿ ಶಿವಾನಿ ರಜನಿಕಾಂತ್ ಅಭಿನಯದ ‘ತಂಗಮಗನ್’ ಸಿನಿಮಾದ ‘ವಾ ವಾ ಪಕ್ಕಂ ವಾ’ ಹಾಡನ್ನು ಹಾಡುವ ಮೂಲಕ ವೀಕ್ಷಕರು ಎದ್ದು ನಿಂತು ಚಪ್ಪಾಳೆ ಹೊಡೆಯುವಂತೆ ಮಾಡಿದ್ದರು. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
57
ನಟ ಧನುಷ್ ನಿಂದ ಸಿಕ್ಕಿದೆ ಆಫರ್!
ಟಿಕೆಟ್ ಟು ಫಿನಾಲೆಯಲ್ಲಿ ಶಿವಾನಿ ಮೈಯಾ ಮೈಯಾ ಹಾಡಿ ಶಾಕ್ ನೀಡಿದ್ದರು. ಈ ಹಾಡು ಕೇಳಿ ವೇದಿಕೆಗೆ ಬಂದ ಗಾಯಕಿ ಶ್ವೇತಾ ಮೋಹನ್ ‘ಸೋಜುಗಾದ ಸೂಜು ಮಲ್ಲಿಗೆ ಹಾಡು ಕೇಳಿ ಧನುಷ್ ಸರ್ ಯಾರು ಈ ಗಾಯಕಿ, ಇವರಿಂದ ಹಾಡು ಹಾಡಿಸಬೇಕು ಎಂದಿದ್ದರು ಎನ್ನುವ ಸಂತೋಷದ ಸುದ್ದಿಯನ್ನು ನೀಡಿ, ನಿಮಗೆ ಆದಷ್ಟು ಬೇಗ ಹಾಡುವ ಅವಕಾಶ ಸಿಗಲಿ ಎಂದು ಹಾರೈಸಿದ್ದಾರೆ.
67
ಮಧುರ ಕಂಠಕ್ಕೆ ಫೇಮಸ್
ಶಿವಾನಿ ಮೆಲೊಡಿ ಹಾಡುಗಳಿಗಿಂತ ಹೈಟೋನ್ ಹಾಡುಗಳಿಂದಲೇ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು. ಇದೀಗ ಕಳೆದವಾರ ನಡೆದ ಟಿಕೆಟ್ ಟು ಫಿನಾಲೆಯಲ್ಲಿ ಅದ್ಭುತವಾದ ಹಾಡು ಹಾಡಿ, ಉಳಿದ ಸ್ಪರ್ಧಿಗಳನ್ನು ಸೋಲಿಸಿ, ಶಿವಾನಿ ಫಿನಾಲೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
77
ಫಿನಾಲೆ ಯಾವಾಗ?
ಮುಂದಿನ ವಾರ ಸರಿಗಮಪ ತಮಿಳು ಸೀಸನ್-5 ಫಿನಾಲೆ ನಡೆಯಲಿದೆ. ಸುಶಾಂತಿಕಾ, ಶ್ರೀಹರಿ, ಸಪೇಶನ್, ಸೆಂತಮಿಲನ್, ಪವಿತ್ರಾ ಜೊತೆ ಶಿವಾನಿ ನವೀನ್ ಫಿನಾಲೆ ತಲುಪಿದ್ದು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಜೊತೆಗೆ ಕನ್ನಡಿಗರೂ ಸೇರಿ ಅಭಿಮಾನಿಗಳು ಫಿನಾಲೆ ಗೆದ್ದು ಬರುವಂತೆ ಹಾರೈಸಿದ್ದಾರೆ.