Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೆ ಶುರುವಾಗಲಿದೆ ಭೂಮಿ ಮತ್ತು ಗೌತಮ್ ಒಲವ ಅಮೃತಧಾರೆ. ಅಮ್ಮ-ಅಮ್ಮನನ್ನು ಒಂದು ಮಾಡಲು ಕೈ ಜೋಡಿಸಿದ್ದಾರೆ ಆಕಾಶ್ ಮತ್ತು ಮಿಂಚು. ಎಪಿಸೋಡ್ ನೋಡಿ ವೀಕ್ಷಕರಂತೂ ಸಖತ್ ಖುಷ್.
ಅಮೃತಧಾರೆ ಧಾರಾವಾಹಿಯಲ್ಲಿ ಇದೀಗ ಸುಂದರವಾದ ಎಪಿಸೋಡ್ ಗಳು ಪ್ರಸಾರವಾಗುತ್ತಿವೆ. ಸೀರಿಯಲ್ ವೀಕ್ಷಕರಂತೂ ಇಷ್ಟಪಟ್ಟು ಸೀರಿಯಲ್ ನೋಡುವಂತೆ ಮಾಡುತ್ತಿದೆ, ಇತ್ತೀಚಿನ ಎಪಿಸೋಡ್ ಗಳು. ಭೂಮಿ ಮತ್ತು ಗೌತಮ್ ಮಧ್ಯೆ ಮಧುರ ಭಾಂದವ್ಯ ಮತ್ತೆ ಶುರುವಾಗುವ ಸೂಚನೆ ಸಿಕ್ಕಿದೆ.
26
ಭೂಮಿ -ಗೌತಮ್
ಕಳೆದ ವಾರದ ಎಪಿಸೋಡ್ ಗಳಲ್ಲಿ ಜ್ವರದಿಂದ ಪೂರ್ತಿಯಾಗಿ ಕಂಗಾಲಾಗಿ ಹಾಸಿಗೆ ಹಿಡಿದಿದ್ದ ಗೌತಮ್ ನ ಭೂಮಿ ಹಾರೈಕೆ ಮಾಡಿ, ಮದ್ದು, ಊಟ ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾಳೆ. ಇದರಿಂದ ಮತ್ತೆ ಭೂಮಿ-ಗೌತಮ್ ಜೋಡಿ ಹತ್ತಿರವಾಗಿರೋದನ್ನು ನೋಡಿ ವೀಕ್ಷಕರು ಖುಷೀಯಾಗಿದ್ದಾರೆ.
36
ಆಕಾಶ್ ಗೆ ಸಿಕ್ತು ಅಮ್ಮನ ಮದುವೆ ಫೋಟೊ
ಇನ್ನೊಂದು ಕಡೆ ಇದೀಗ ಆಕಾಶ್ ಕೈಗೆ ಅಮ್ಮನ ಮದುವೆ ಫೋಟೊ ಸಿಕ್ಕಿದೆ. ತನ್ನ ಅಮ್ಮ ಮದುವೆಯಾಗಿರೋದು ಫ್ರೆಂಡ್ ಗೌತಮ್ ಸರ್ ನ ಅನ್ನೋದು ಗೊತ್ತಾಗಿ ಆಕಾಶ್ ಗೆ ಶಾಕ್ ಆಗಿದೆ. ಜೊತೆಗೆ ಅಪ್ಪ-ಅಮ್ಮನ ಕೋಪ ಮಾಡಿಕೊಂಡಿದ್ದಾರೆ ಅನ್ನೋದು ಕೂಡ ಗೊತ್ತಾಗಿದೆ.
ಇನ್ನೊಂದು ಕಡೆ ಮಿಂಚೂಗೂ ಕೂಡ ಅಪ್ಪನ ಬಳಿ ಇದ್ದ ಆಲ್ಬಂ ನಲ್ಲಿ ಆಕಾಶ್ ಜೊತೆಗಿರುವಂತಹ ಸಾಕಷ್ಟು ಫೋಟೊಗಳು ಸಿಕ್ಕಿವೆ. ಇದರಿಂದ ಮಿಂಚುಗೂ ಅಪ್ಪನ ಮೇಲೆ ಯಾಕೋ ಸಂಶಯ ಮೂಡಿದೆ.
56
ಜೊತೆಯಾದ್ರೂ ಮಿಂಚು- ಆಕಾಶ್
ಆಕಾಶ್ ಒಬ್ಬನೇ ಕೂತು ಅಳೋದನ್ನು ನೋಡಿ, ಹತ್ತಿರ ಬರುವ ಮಿಂಚು ಅಳುವ ಕಾರಣ ಕೇಳಿದಾಗ ಆಕಾಶ್ ತನಗೆ ಗೊತ್ತಾದ ಸತ್ಯವನ್ನು ಹೇಳಿ, ಅಮ್ಮ-ಅಪ್ಪ ಟೂ ಬಿಟ್ಟಿದ್ದಾರೆ, ನಾವಿಬ್ರೂ ಸೇರಿ ಅವರನ್ನು ಒಂದು ಮಾಡುವ ಎನ್ನುತ್ತಾ ಕೈ ಜೋಡಿಸುತ್ತಾರೆ. ಇನ್ನು ಮುಂದೆ ಪುಟಾಣಿಗಳ ಮುದ್ದಾದ ಕಸರತ್ತು ಶುರುವಾಗಲಿದೆ. ಅದಕ್ಕಾಗಿಯೇ ವೀಕ್ಷಕರು ಸಿಕ್ಕಾಪಟ್ಟೆ ಕುತೂಹಲದಿಂದ ಕಾಯುತ್ತಿದ್ದಾರೆ.
66
ಪ್ರೊಮೋ ನೋಡಿ ಖುಷಿ ಪಟ್ಟ ಅಭಿಮಾನಿಗಳು
ಇದೀಗ ಅಮೃತಧಾರೆ ಸೀರಿಯಲ್ ಪ್ರೊಮೋ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದು, ಅಪ್ಪ ಅಮ್ಮನ ಒಂದು ಮಾಡಕ್ಕೆ ಮಕ್ಕಳು ಸೇತುವೆ ಆಗಿದ್ದಾರೆ, ಇನ್ನು ಮುಂದೆ ಖುಷಿ ಕ್ಷಣಗಳನ್ನು ನೋಡೋಕೆ ಸಿಗುತ್ತೆ, ಆದಷ್ಟು ಬೇಗ ನಾಲ್ಕು ಜನ ಒಂದಾಗಲಿ. ಒಲವ ಅಮೃತಧಾರೆ ಹರಿಯಲಿ ಎಂದು ಹಾರೈಸಿದ್ದಾರೆ.