Published : Nov 18, 2025, 01:41 PM ISTUpdated : Nov 18, 2025, 01:44 PM IST
ಬಿಗ್ ಬಾಸ್ ಮನೆಯಲ್ಲಿ ಎಷ್ಟೋ ಜನರು ಲವ್‌ನಲ್ಲಿ ಬಿದ್ದು, ಬ್ರೇಕಪ್ ಮಾಡಿಕೊಂಡಿದ್ದೂ ಇದೆ. ಆ ಮನೆಯಲ್ಲಿ ಲವ್ ಹುಟ್ಟಿ, ಆ ಮನೆಯಲ್ಲಿ ಲವ್ ಮುರಿದಿದ್ದೂ ಇದೆ. ಎಷ್ಟೋ ಸ್ಪರ್ಧಿಗಳ ಮಧ್ಯೆ ಲವ್ ಮಾಡಿ, ಡಿವೋರ್ಸ್ ಮಾಡಿಕೊಂಡಿದ್ದೂ ಇದೆ. ಡಿವೋರ್ಸ್ ತಗೋಬೇಕಿದ್ದ ಜೋಡಿಯೊಂದು, ಈ ಮನೆಗೆ ಬಂದು ಒಂದಾಗಿದೆ.
ಹೌದು, ಬಾಲಿವುಡ್ ನಟಿ ರುಬಿನಾ ದಿಲೈಕ್ ಹಾಗೂ ಅವರ ಪತಿ ಅಭಿನವ್ ಶುಕ್ಲಾ ಅವರು ಡಿವೋರ್ಸ್ ತಗೊಳ್ಳಬೇಕು ಎಂದು ನಿರ್ಧಾರ ಮಾಡಿದ್ದರು. ಆಮೇಲೆ ಒಂದು ಅವಕಾಶ ಕೊಡೋಣ ಎಂದು ಬಿಗ್ ಬಾಸ್ 14 ಮನೆಗೆ ಬಂದಿದ್ದರು.
25
ಡಿವೋರ್ಸ್ ಆದ್ರೆ ಪ್ರಶ್ನೆ ಮಾಡ್ತಾರೆ
“ನಾವು ಡಿವೋರ್ಸ್ ತಗೊಂಡರೆ, ಜನರು ನಮ್ಮನ್ನು ಪ್ರಶ್ನಿಸುತ್ತಾರೆ, ನಮ್ಮ ಲೈಫ್, ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ನಮಗೆ ಬಿಗ್ ಬಾಸ್ ಅವಕಾಶ ಸಿಕ್ಕಿತು, ಅಲ್ಲಿ ಪರಸ್ಪರ ಇಬ್ಬರೂ ಇರಲು ಸಮಯ ಸಿಗುತ್ತದೆ. ಹೊರಗಡೆ ಇದ್ದಾಗ, ನಾವು ದೂರ ಇದ್ದರೆ ಸಂಪೂರ್ಣವಾಗಿ ದೂರ ಆಗುತ್ತೇವೆ ಎಂದು ಅಂದುಕೊಂಡಿದ್ದೆವು. ಬಿಗ್ ಬಾಸ್ ಮನೆಯಲ್ಲಿ ಡಿವೋರ್ಸ್ ತಗೊಂಡರೆ ಪಬ್ಲಿಕ್ ಆಗುತ್ತದೆ ಎಂದು ಭಾವಿಸಿದ್ದೆ” ಎಂದು ಹೇಳಿದ್ದಾರೆ.
35
ಅಂತರ ಕಮ್ಮಿಯಾಯ್ತು
ರುಬಿನಾ ದಿಲೈಕ್ ಮತ್ತು ಅಭಿನವ್ ಶುಕ್ಲಾಗೆ ಬಿಗ್ ಬಾಸ್ 14 ಹೊಸ ಅವಕಾಶ ನೀಡಿತ್ತು. ಇಲ್ಲಿ ಇವರಿಬ್ಬರು ಪರಸ್ಪರ ಸಮಯ ಕಳೆದರು. ಇವರಿಬ್ಬರ ನಡುವಿನ ಅಂತರ ಕಮ್ಮಿಯಾಯ್ತು. ಬಿಗ್ ಬಾಸ್ ಇಲ್ಲದಿದ್ದರೆ ಅವರು ಡಿವೋರ್ಸ್ ತಗೊತಿದ್ದೆವು ಎಂದು ಅವರು ಒಪ್ಪಿಕೊಂಡಿದ್ದರು.
“ನಾವು ಇಬ್ಬರೂ ತುಂಬ ಸ್ಟ್ರಾಂಗ್ ವ್ಯಕ್ತಿಗಳು. ನಮ್ಮಿಬ್ಬರಿಗೂ ಬಲವಾದ ಅಭಿಪ್ರಾಯಗಳಿದ್ದವು. ಬಿಗ್ ಬಾಸ್‌ನಲ್ಲಿ ನಮ್ಮಿಬ್ಬರ ಆಲೋಚನೆಗಳು ವಿಭಿನ್ನವಾಗಿದ್ದವು. ಆ ಆಲೋಚನೆಗಳು ಘರ್ಷಣೆಯಾದಾಗ, ಜಗಳ ಆಗುತ್ತವೆ. ಲಾಕ್‌ಡೌನ್ ಎಲ್ಲರಿಗೂ ಕಷ್ಟದ ಟೈಮ್ ಆಗಿತ್ತು, ನಮಗೂ ಹಾಗೆಯೇ ಇತ್ತು. ನಮ್ಮಿಬ್ಬರಿಗೆ ನಾವು ಆರು ತಿಂಗಳು ಟೈಮ್ ಕೊಟ್ಟುಕೊಂಡಿದ್ದೆವು” ಎಂದು ಹೇಳಿದ್ದಾರೆ.
55
ಮದುವೆಯನ್ನು ಎಂಡ್ ಮಾಡಬೇಕು
ನಮ್ಮಿಬ್ಬರ ನಡುವೆ ಪರಿಸ್ಥಿತಿ ಸುಧಾರಿಸದಿದ್ದರೆ, ಮದುವೆಯನ್ನು ಎಂಡ್ ಮಾಡಬೇಕು ಎಂದು ನಿರ್ಧಾರ ಮಾಡಿದ್ದರಂತೆ. ಬಿಗ್ ಬಾಸ್ 14 ಶೋನಲ್ಲಿ ನಮ್ಮಿಬ್ಬರ ನಡುವಿನ ಅಭಿಪ್ರಾಯವನ್ನು ಬದಲಾಯಿಸಿಕೊಂಡೆವು. ಮೊದಲು ನಾವಿಬ್ಬರು ಪರ್ಫೆಕ್ಟ್ ಅಲ್ಲ ಎಂದು ಭಾವಿಸಿದ್ದೆವು, ಉಳಿದವರಿಗೆ ಕಂಪೇರ್ ಮಾಡಿದರೆ ಇಬ್ಬರೂ ಪರ್ಫೆಕ್ಟ್ ಎಂದು ಅನಿಸುತ್ತದೆ. ಈಗ ಈ ಜೋಡಿ Dhamaal With Pati Patni Aur Panga ಎಂಬ ಕಪಲ್ ಶೋ ವಿಜೇತರೂ ಕೂಡ ಹೌದು.