ನಾ ನೋಡಿರೋ ಮಕ್ಕಳಲ್ಲೇ ಹೆಚ್ಚು ಪ್ರತಿಭಾಶಾಲಿ; ಶಾಲ್ಮಲಿ ಹಾಡಿಗೆ ಸಿಹಿಕಹಿ ಚಂದ್ರು ಮೆಚ್ಚುಗೆ

Published : Jan 24, 2024, 05:25 PM IST

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಪುಟ್ಟ ಗಾಯಕಿ ಶಾಲ್ಮಲಿ ಶ್ರೀನಿವಾಸ್ ಹಾಡಿದ್ದ ಸಮರ್ಪಣಾ ಗೀತೆಯನ್ನು ಮೆಚ್ಚಿರುವ ನಟ ಸಿಹಿಕಹಿ ಚಂದ್ರು, ನಾ ನೋಡಿರುವ ಮಕ್ಕಳಲ್ಲೇ ಹೆಚ್ಚು ಪ್ರತಿಭಾಶಾಲಿ ಈಕೆ ಎಂದಿದ್ದಾರೆ.

PREV
19
ನಾ ನೋಡಿರೋ ಮಕ್ಕಳಲ್ಲೇ ಹೆಚ್ಚು ಪ್ರತಿಭಾಶಾಲಿ; ಶಾಲ್ಮಲಿ ಹಾಡಿಗೆ ಸಿಹಿಕಹಿ ಚಂದ್ರು ಮೆಚ್ಚುಗೆ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಪುಟ್ಟ ಗಾಯಕಿ ಶಾಲ್ಮಲಿ ಶ್ರೀನಿವಾಸ್ ಹಾಡಿದ್ದ ಸಮರ್ಪಣಾ ಗೀತೆಯನ್ನು ಮೆಚ್ಚಿರುವ ನಟ ಸಿಹಿಕಹಿ ಚಂದ್ರು, ನಾ ನೋಡಿರುವ ಮಕ್ಕಳಲ್ಲೇ ಹೆಚ್ಚು ಪ್ರತಿಭಾಶಾಲಿ ಈಕೆ ಎಂದಿದ್ದಾರೆ. 
 

29

ಇದೇ ಶಾಲ್ಮಲಿ ಕೀಬೋರ್ಡ್ ನುಡಿಸಿದ್ದನ್ನೇ ಹಿಂದೊಮ್ಮೆ ಪ್ರಧಾನಿ ಮೋದಿ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗ ಈಕೆಯ ವಿಡಿಯೋ ವೈರಲ್ ಆಗಿತ್ತು.

 

39
49

ನಂತರದಲ್ಲಿ ಶಾಲ್ಮಲಿ ಹಾಡಿದ 'ಓಡಿ ಓಡಿ ಬಂದು ಹಣೆಗೆ, ಡೀ ಡೀ ಆಡ್ಯಾನೆ' ಹಾಡು ಕೂಡಾ ವೈರಲ್ ಆಗಿ, ಎಲ್ಲರ ಫೇವರೇಟ್ ಆಗಿತ್ತು.

59

ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ಭಾರೀ ಜನಪ್ರಿಯವಾಗಿರುವ ಬೆಂಗಳೂರಿನ ಶಾಲ್ಮಲಿ ಹಾಡನ್ನು ಶಂಕರ್ ಮಹದೇವನ್ ಕೂಡಾ ಮೆಚ್ಚಿ 'ಹುಟ್ಟುತ್ತಲೇ ಟೀಚರ್‌ ಆಗಿರುವ ಯಾರನ್ನಾದರೂ ನೀವು ನೋಡಬೇಕೆ? ಹಾಗಿದ್ದರೆ, ಆಕೆ ಇವಳೇ ನೋಡಿ..! ಇದನ್ನೇ ನಾನು ಪದೇ ಪದೇ ದೇವರ ಆಶೀರ್ವಾದ ಎನ್ನುವುದು..! ಅಂದ ಹಾಗೆ ಈಕೆ ಯಾರು? ನಾನಿವಳನ್ನು ಭೇಟಿಯಾಗಬೇಕು' ಎಂದಿದ್ದರು. 

69

ಈ ಬಾರಿ ಶಾಲ್ಮಲಿ ಹಸಿರು ರೇಶ್ಮೆ ಲಂಗ ಹಾಕಿಕೊಂಡು ಭಾನ್ತುರೀತಿ ಸಮರ್ಪಣಾ ಗೀತೆಯನ್ನು ಮುದ್ದಾಗಿ ಹಾಡಿದ್ದಾಳೆ. ಶಾಲ್ಮಲಿಯ ಈ ಗೀತೆಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ.

 

79

ಸಿಹಿಕಹಿ ಚಂದ್ರು ಕಾಮೆಂಟ್ ಮಾಡಿ, 'ನಾನು ನೋಡಿದ ಅತ್ಯಂತ ಪ್ರತಿಭಾಶಾಲಿ ಮಕ್ಕಳಲ್ಲಿ ಇವಳೂ ಒಬ್ಬಳು. ಎಂಥಾ ಗಾಯನ, ಎಂಥಾ ಆತ್ಮವಿಶ್ವಾಸ, ಪರ್ಫೆಕ್ಟ್. ಅವಳಿಗೆ ಯಾವಾಗಲೂ ದೇವರ ಆಶೀರ್ವಾದವಿರಲಿ' ಎಂದಿದ್ದಾರೆ. 

89

ಇದಕ್ಕೆ ಪುಟಾಣಿಯು ಥ್ಯಾಂಕ್ಯೂ ಬೋಡಾ ಅಂಕಲ್ ಎಂದಿದ್ದಾಳೆ. ಶಾಲ್ಮಲಿ ಶ್ರೀನಿವಾಸ್ ಟಿವಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಸಿಹಿಕಹಿ ಚಂದ್ರು ಜೊತೆ ಒಮ್ಮೆ ಭಾಗಿಯಾಗಿದ್ದಳು. 

 

99

ಮತ್ತೊಬ್ಬರು ಕಾಮೆಂಟ್ ಮಾಡಿ, 'ಈಕೆ ಹುಟ್ಟುತ್ತಲೇ ಶೃತಿ ಹೊತ್ತು ಬಂದಿದ್ದಾಳೆ. ಎಕ್ಸ್ಟ್ರಾರ್ಡಿನರಿ ಟ್ಯಾಲೆಂಟ್' ಎಂದು ಮೆಚ್ಚಿದ್ದಾರೆ. ಇನ್ನೊಬ್ಬರು ಎಂ. ಎಸ್ ಸುಬ್ಬುಲಕ್ಷ್ಮಿಯನ್ನು ನೆನೆಸಿಕೊಂಡು, ಅವರೇ ಈ ಮಗು ರೂಪದಲ್ಲಿ ಮತ್ತೆ ಹುಟ್ಟಿದ್ದಾರೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories