ಕಲರ್ಸ್ ಕನ್ನಡ ವಾಹಿನಿಯು ಮಾಹಿತಿ ಹಂಚಿಕೊಂಡಿರುವಂತೆ ಮೂವರು ಕಂಟೆಸ್ಟಂಟ್‌ಗಳಿಗೆ ತಲಾ ಒಂದೊಂದು ಲಕ್ಷ ರೂ. ಮೊತ್ತದ ಚೆಕ್ ವಿತರಣೆ ಫೋಟೋವನ್ನು ಹಂಚಿಕೊಂಡಿದೆ.
ಬಿಗ್‌ಬಾಸ್ ಮನೆಯಲ್ಲಿ ನಿಪ್ಪಾನ್ ಪೇಂಟ್ ವತಿಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಬಿಗ್ ಬಾಸ್ ಸೆಟ್‌ಗೆ ಆಹ್ವಾನಿಸಿ ಚೆಕ್ ವಿತರಣೆ ಮಾಡಲಾಗಿದೆ.
ಈ ಮೂಲಕ ಮನೆಯಿಂದ ಹೊರಹೋಗಿರುವ ಮಾಜಿ ಸ್ಪರ್ಧಿಗಳು ಮತ್ತೊಮ್ಮೆ ಬಿಗ್‌ಬಾಸ್ ವಾರದ ಕಾರ್ಯಕ್ರಮ ನಡೆಸಿಕೊಡುವ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗುವುದಕ್ಕೆ ಅವಕಾಶ ಒದಗಿಸಲಾಯಿತು.
ನಿಪ್ಪಾನ್ ಪೇಂಟ್ ಆಯೋಜಿಸಿದ್ದ ಸ್ಪರ್ಧೆಯ ವಿಜೇತರು ಹಾಗೂ ಎಲಿಮಿನೇಟ್ ಆದ ಸ್ಪರ್ಧಿಗಳಿಗೆ ಹೋಮ್ ಮೇಕ್ ಓವರ್ ಕೂಪನ್ ನೀಡಲಾಯಿತು. ನಿಪ್ಪಾನ್ ಪೇಂಟ್ ವತಿಯಿಂದ ಈ 1 ಲಕ್ಷ ರೂ. ಮೌಲ್ಯದಲ್ಲಿ ಮನೆ ವಿನ್ಯಾಸ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.
Rakshak Bullet
ಬಿಗ್‌ಬಾಸ್ ಸೀಸನ್ 10ರ ಐದಾರು ವಾರಗಳಲ್ಲಿಯೇ ಮನೆಯಿಂದ ಎಲಿಮಿನೇಟ್ ಆಗಿ ಹೋಗಿದ್ದ ರಕ್ಷಕ್ ಬುಲೆಟ್ ಅವರು ಬಿಗ್‌ಬಾಸ್ ನನಗೆ ಸರಿಯಾಗ ಪೇಮೆಂಟ್ ಕೊಡಲಿಲ್ಲ ಎಂದು ತಕರಾರು ಮಾಡಿದ್ದರು. ಈಗ ಅವರಿಗೆ ಯಾವುದೇ ಕೊಡುಗೆಯನ್ನೂ ನೀಡಲಾಗಿಲ್ಲ.
ಇನ್ನು ಬಿಗ್‌ಬಾಸ್ ಮನೆಯಲ್ಲಿ ಆರು ಮಂದಿ ಫೈನಲ್‌ಗೆ ತಲುಪಿದ್ದು, ಇನ್ನು ಮೂರು ದಿನಗಳಲ್ಲಿ (ವಾರದ ಮಧ್ಯದಲ್ಲಿ) ಒಬ್ಬರು ಎಲಿಮಿನೇಟ್ ಆಗುವ ಸಾಧ್ಯತೆಯಿದೆ.