Shakti Kapoor death rumors: ನಟ ಶಕ್ತಿ ಕಪೂರ್ ಸಾವಿನ ಸುಳ್ಳು ಸುದ್ದಿ ವೈರಲ್ ಆಗುತ್ತಿದ್ದಂತೆ, ನಟ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, "ನಾನು ಇನ್ನೂ ಜೀವಂತವಾಗಿದ್ದೇನೆ. ನಕಲಿ ಸುದ್ದಿ ಹರಡುವವರ ವಿರುದ್ಧ ಪೊಲೀಸ್ ದೂರು ದಾಖಲಿಸುತ್ತೇನೆ" ಎಂದು ಹೇಳಿದ್ದಾರೆ.
ಬಾಲಿವುಡ್‌ನಲ್ಲಿ ತಮ್ಮ ಅಸಾಧಾರಣ ಖಳನಾಯಕ ಪಾತ್ರಗಳು ಮತ್ತು ಕಾಮಿಡಿ ಟೈಮಿಂಗ್ ಮೂಲಕ ಜನಪ್ರಿಯತೆ ಪಡೆದ ಹಿರಿಯ ನಟ ಶಕ್ತಿ ಕಪೂರ್ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳಿಗೆ ಬಲಿಯಾಗಿದ್ದಾರೆ. ಶಕ್ತಿ ಕಪೂರ್ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.
26
ಶ್ರದ್ಧಾಂಜಲಿ ಸಲ್ಲಿಸಿದ ಜನ
ಶಕ್ತಿ ಕಪೂರ್ ಸಾವಿನ ಸುದ್ದಿ ವೈರಲ್ ಆಗುತ್ತಿದ್ದಂತೆ, ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ಪ್ರಾರಂಭಿಸಿದರು. ಆದರೆ, ಕೆಲವೇ ಗಂಟೆಗಳ ನಂತರ, ಶಕ್ತಿ ಕಪೂರ್ ಸ್ವತಃ ಮುಂದೆ ಬಂದು, ಇನ್’ಸ್ಟಾಗ್ರಾಂ ಪೋಸ್ಟ್ ಮಾಡಿ, ವರದಿಗಳು ಸಂಪೂರ್ಣವಾಗಿ ಸುಳ್ಳು ಎಂದು ಹೇಳಿದ್ದು,. ಹಾಗೂ ವದಂತಿಗಳನ್ನು ಹರಡುವವರ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
36
ನಾನು ಆರೋಗವಾಗಿದ್ದೇನೆ ಎಂದ ನಟ
ಶಕ್ತಿ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಬಿಡುಗಡೆ ಮಾಡಿ, ತಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಮತ್ತು ಈಗ ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಕೋಪವು ವೀಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ವಿಡಿಯೋದಲ್ಲಿ ಶಕ್ತಿ ಕಪೂರ್ "ನಮಸ್ಕಾರ ಸ್ನೇಹಿತರೇ, ನನ್ನ ಸಾವಿನ ಎಲ್ಲಾ ವರದಿಗಳು ಸುಳ್ಳು. ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಮತ್ತು ಸಂತೋಷವಾಗಿದ್ದೇನೆ. ದಯವಿಟ್ಟು ಸುಳ್ಳು ಸುದ್ದಿಗಳನ್ ನು ನಿರ್ಲಕ್ಷಿಸಿ. ಈ ರೀತಿ ಸುದ್ದಿ ಹರಡುವುದು ಸರಿಯಲ್ಲ. ಯಾವುದೇ ಸುದ್ದಿಯನ್ನು ಪರಿಶೀಲಿಸದೆ ನಂಬಬೇಡಿ ಅಥವಾ ಹಂಚಿಕೊಳ್ಳಬೇಡಿ" ಎಂದು ಹೇಳಿದ್ದಾರೆ. ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ.
56
ಅಭಿಮಾನಿಗಳ ಹಾರೈಕೆ
ಅಭಿಮಾನಿಗಳು ಶಕ್ತಿ ಕಪೂರ್ ವೀಡಿಯೊ ಪೋಸ್ಟ್ ಮಾಡಿದ ಬಳಿಕ, ಕಾಮೆಂಟ್ ಮಾಡಿ "ನೀವು ಯಾವಾಗಲೂ ಆರೋಗ್ಯವಾಗಿರಲಿ, ಇದು ದೇವರಿಗೆ ನನ್ನ ಪ್ರಾರ್ಥನೆ" , "ಟೈಗರ್ ಈಸ್ ಅಲೈವ್, ದೀರ್ಘಕಾಲ ಬದುಕಬೇಕು" ಎಂದು ಬರೆದಿದ್ದಾರೆ. ಆ ಮೂಲಕ ಅಭಿಮಾನಿಗಳು ಶಕ್ತಿ ಕಪೂರ್ ಆರೋಗ್ಯದಿಂದ ಇರಲಿ ಎಂದು ಹಾರೈಸಿದ್ದಾರೆ.
66
ಸುಳ್ಳು ವದಂತಿಗಳಿಗೆ ಹಲವು ಸೆಲೆಬ್ರಿಟಿಗಳು ಬಲಿ
ಈ ರೀತಿ ಸುದ್ದಿಗಳು ಬರೋದು ಇದೇ ಮೊದಲಲ್ಲ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಇಂತಹ ಸಾವಿನ ಸುಳ್ಳು ಸುದ್ದಿಗೆ ಬಲಿಯಾಗುತ್ತಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ಇಂತಹ ಸುದ್ದಿಗಳು ನಿಮಿಷಗಳಲ್ಲಿ ಸಾವಿರಾರು ಜನರನ್ನು ತಲುಪುತ್ತವೆ, ಗೊಂದಲ ಮತ್ತು ಭೀತಿಯನ್ನು ಉಂಟುಮಾಡುತ್ತವೆ. ಹಾಗಾಗಿ ಸುದ್ದಿಯನ್ನು ಪರಿಶೀಲಿಸಿ, ಬಳಿಕವೇ ಅದನ್ನು ಹಂಚಿಕೊಳ್ಳಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.