ಡಿಜಿಟಲ್ ಫೋರೆನ್ಸಿಕ್ ತಜ್ಞರ ಪ್ರಕಾರ, ವೈರಲ್ ಆಗುತ್ತಿರುವ 19 ನಿಮಿಷದ ಈ ವಿಡಿಯೋ ನಿಜವಾಗಿರಲೇಬೇಕು ಅಂತೇನಿಲ್ಲ. ಇದು AI ಡೀಪ್‌ಫೇಕ್ ತಂತ್ರಜ್ಞಾನದಿಂದ ಸೃಷ್ಟಿಸಿದ ವಿಡಿಯೋ ಆಗಿರಬಹುದು. ಇಂದಿನ ಆಧುನಿಕ AI ತಂತ್ರಜ್ಞಾನ ಬಳಸಿ, ಯಾವುದೇ ವ್ಯಕ್ತಿಯ ಮುಖವನ್ನು ಬೇರೆ ವಿಡಿಯೋಗೆ ಸುಲಭವಾಗಿ ಜೋಡಿಸಬಹುದು. ಇದೇ ಕಾರಣಕ್ಕೆ, ಇಂಟರ್ನೆಟ್‌ನಲ್ಲಿ ವೈರಲ್ ಆಗುವ ಯಾವುದೇ ವಿಡಿಯೋವನ್ನು ಪರಿಶೀಲಿಸದೆ ನಂಬುವುದು ಅಪಾಯಕಾರಿ.
‘ಸೀಸನ್ 2’ ಮತ್ತು ‘ಸೀಸನ್ 3’ ಬರೀ ಕ್ಲಿಕ್‌ಬೈಟ್?
ಈ ವೈರಲ್ ವಿಡಿಯೋದ 'Season 2' ಮತ್ತು 'Season 3' ಕೂಡ ಬರಲಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಡಲಾಗುತ್ತಿದೆ. ಆದರೆ, ಸೈಬರ್ ತಜ್ಞರು ಹೇಳುವ ಪ್ರಕಾರ, ಅಂತಹ ಯಾವುದೇ ವಿಡಿಯೋ ಅಸ್ತಿತ್ವದಲ್ಲಿಲ್ಲ. ಇದು ಕೇವಲ ಒಂದು ಕ್ಲಿಕ್‌ಬೇಟ್ ತಂತ್ರವಾಗಿದ್ದು, ಬಳಕೆದಾರರನ್ನು ನಕಲಿ ವೆಬ್‌ಸೈಟ್‌ಗಳು ಮತ್ತು ಡೌನ್‌ಲೋಡ್ ಲಿಂಕ್‌ಗಳತ್ತ ಸೆಳೆಯಲು ಬಳಸಲಾಗುತ್ತಿದೆ. ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ, ಬಳಕೆದಾರರು ಸೈಬರ್ ವಂಚನೆಗೆ ಬಲಿಯಾಗಬಹುದು.
ಹಕ್ಕುತ್ಯಾಗ: ಈ ವರದಿಯನ್ನು ಡಿಜಿಟಲ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಸೋಶಿಯಲ್ ಮೀಡಿಯಾ ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಯಾವುದೇ ಪರಿಶೀಲಿಸದ ವಿಡಿಯೋವನ್ನು ಬೆಂಬಲಿಸುವ, ಪ್ರಚಾರ ಮಾಡುವ ಅಥವಾ ಪ್ರವೇಶ ನೀಡುವ ಉದ್ದೇಶ ಈ ವರದಿಗಿಲ್ಲ. ವೈರಲ್ ಕ್ಲಿಪ್‌ನ ಸತ್ಯಾಸತ್ಯತೆ ಅಧಿಕೃತವಾಗಿ ದೃಢಪಟ್ಟಿಲ್ಲ ಮತ್ತು ಇದು AI ಡೀಪ್‌ಫೇಕ್ ತಂತ್ರಜ್ಞಾನದ ಪರಿಣಾಮವೂ ಆಗಿರಬಹುದು. ಲಭ್ಯವಿರುವ ಆನ್‌ಲೈನ್ ಮಾಹಿತಿಯ ಆಧಾರದ ಮೇಲೆ ಈ ವಿಷಯವನ್ನು ಸಿದ್ಧಪಡಿಸಲಾಗಿದೆ. ಏಷ್ಯಾನೆಟ್ ನ್ಯೂಸ್ ಈ ಹೇಳಿಕೆಗಳು ಮತ್ತು ಅವುಗಳ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.